ಸರಗಳ್ಳರಿಗೆ ಸರಿಯಾಗಿ ಬುದ್ದಿ ಕಲಿಸಿದ ಬಸ್ ಚಾಲಕ: ಕಳ್ಳರು ಕನಸಲ್ಲೂ ಊಹಿಸಿರೋಲ್ಲ!
ಭಾರತದಲ್ಲಿ ಸರಗಳ್ಳತನಗಳು ಹೆಚ್ಚಾಗಿ ನಡೆಯುತ್ತಿವೆ, ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದಾರೆ. ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡರು ಈ ಪ್ರಕರಣಗಳು ಕಡಿಯಾಗುತ್ತಿಲ್ಲ. ಇತ್ತೀಚೆಗೆ, ಸರಗಳ್ಳತನ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಬಸ್ ಚಾಲಕ ಡಿಕ್ಕಿ ಹೊಡೆದು ತಡೆದಿದ್ದಾರೆ. ಈ ಕುರಿತ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಸ್ ಚಾಲಕನನ್ನು ಶ್ಲಾಘಿಸಲಾಗುತ್ತಿದೆ. ಕಠಿಣ ಪರಿಸ್ಥಿತಿಗಳಲ್ಲಿ ಪೊಲೀಸರಿಗೆ ಕಾಯುವ ಬದಲು ನಾವೇ ರಕ್ಷಣೆಗೆ ನಿಂತರೇ ಇಂತಹ ದರೋಡೆಗಳನ್ನು ತಡೆಯಬಹುದು ಎಂದು ಬಸ್ ಚಾಲಕ ತೋರಿಸಿಕೊಟ್ಟಿದ್ದಾರೆ.
ಇಬ್ಬರು ಸರಗಳ್ಳರನ್ನು ತಡೆಯಲು ಬಸ್ ಚಾಲಕ ಪ್ರಯತ್ನಿಸುತ್ತಿರುವ ಈ ವೀಡಿಯೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ತನ್ನ ಪತಿ ಮತ್ತು ಮಗನೊಂದಿಗೆ ರಸ್ತೆಯಲ್ಲಿದ್ದ ಮಹಿಳೆಯಿಂದ ಕಳ್ಳನೊಬ್ಬ ಸರವನ್ನು ಕಸಿದುಕೊಂಡು ಓಡಿದ್ದಾನೆ. ನಂತರ ಸ್ವಲ್ಪ ದೂರದಲ್ಲಿದ್ದ ತನ್ನ ಸ್ನೇಹಿತನ ಹೀರೋ ಸಿಡಿ-ಡೀಲಕ್ಸ್ ಬೈಕ್ ಹತ್ತುತ್ತಿದ್ದಂತೆ, ಹರಿಯಾಣ ಸಾರಿಗೆ ಬಸ್ ಚಾಲಕ ಅವರನ್ನು ಗಮನಿಸಿ ಸರಗಳ್ಳರ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.

ಬಸ್ ಚಾಲಕ ಅವರಿಗೆ ಡಿಕ್ಕಿ ಹೊಡೆದ ಸ್ವಲ್ಪ ಸಮಯದ ನಂತರ, ಈ ಇಬ್ಬರು ಸರಗಳ್ಳರು ರಸ್ತೆಗೆ ಬಿದ್ದರು. ಡಿಕ್ಕಿ ಹೊಡೆದರೂ ಬೈಕ್ ಸವಾರಿ ಮಾಡುತ್ತಿದ್ದ ಸವಾರ ತಕ್ಷಣ ಎದ್ದು ಓಡಿಹೋಗಿದ್ದಾನೆ. ಆದರೆ ಸರವನ್ನು ಕಸಿದುಕೊಂಡ ವ್ಯಕ್ತಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ ಎನ್ನಲಾಗಿದೆ. ನೇರವಾಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಳ್ಳನಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೇಲೆ ಹೇಳಿದಂತೆ, ದೇಶದಲ್ಲಿ ಸರಗಳ್ಳತನ ಮತ್ತು ಫೋನ್ ಸ್ನ್ಯಾಚಿಂಗ್‌ಗಳು ಹೆಚ್ಚಾಗುತ್ತಿವೆ. ಕೆಲವು ತಿಂಗಳ ಹಿಂದೆ, ಟಿವಿಎಸ್ ಅಪಾಚೆಯಲ್ಲಿ ಮೂವರು ಪುರುಷರ ಗುಂಪು ಹೆದ್ದಾರಿಯಲ್ಲಿ ಮೊಬೈಲ್ ಫೋನ್ ಕಸಿದುಕೊಳ್ಳುವ ಇದೇ ರೀತಿಯ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇಡೀ ಘಟನೆಯನ್ನು ಟಾಟಾ ಹ್ಯಾರಿಯರ್‌ನಲ್ಲಿ ಅಳವಡಿಸಲಾದ ಡ್ಯಾಶ್ ಕ್ಯಾಮ್ ಸೆರೆಹಿಡಿದಿತ್ತು.

ಈ ವಿಡಿಯೋದಲ್ಲಿ ಕಳ್ಳರ ಟೆಕ್ನಿಕ್‌ಗಳು ಬಯಲಾಗಿದ್ದವು, ಅಂದರೆ ಈ ಕಳ್ಳರಿಗೆ ಸುಲಭವಾಗುವ ರೀತಿಯಲ್ಲಿ ಅವರಿಗೆ ಕಳ್ಳತನ ಮಾಡಲು ನಾವೇ ಸಹಕರಿಸುತ್ತಿದ್ದೇವೆ. ನಮ್ಮಲ್ಲಿ ಹಲವರು ಒಂದು ಕೈಯಲ್ಲಿ ಫೋನ್ ಮಾತನಾಡುತ್ತಾ ಮತ್ತೊಂದು ಕೈಯಲ್ಲಿ ಬೈಕ್ ಅಥವಾ ಸ್ಕೂಟರ್ ಓಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಕಳ್ಳರಿಗೆ ಇನ್ನೂ ಸುಲಭವಾಗಿ ಮೊಬೈಲ್ ಎಗರಿಸಲು ಅನುವು ಮಾಡಿಕೊಡುತ್ತಿದೆ.
ಒಬ್ಬ ಸ್ಕೂಟರ್‌ನಲ್ಲಿ ಫೋನ್ ಮಾತನಾಡಿಕೊಂಡು ಒಂದು ಕೈಯಿಂದ ಜನನಿಬಿಡ ರಸ್ತೆಯಲ್ಲಿ ಓಡಿಸುತ್ತಿದ್ದ. ಇದನ್ನು ಗಮನಿಸಿದ ಮೂರು ಜನರ ಕಳ್ಳರ ಗುಂಪು, ಟಿವಿಎಸ್ ಅಪಾಚೆ ಮೋಟಾರ್ ಸೈಕಲ್‌ನಲ್ಲಿ ಬಂದು ಸ್ಕೂಟರ್ ಸವಾರನಿಂದ ಫೋನ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಇದರ ನಂತರ, ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ತೀವ್ರ ಗಾಯಗಳಾಗಿದ್ದವು.

ಅದೃಷ್ಟವಶಾತ್ ಹೊಂದೆ ಬರುತ್ತಿದ್ದ ಎಲ್ಲಾ ಕಾರು ಚಾಲಕರು ವೇಗದ ಮಿತಿಯಲ್ಲಿ ಚಾಲನೆ ಮಾಡುತ್ತಿದ್ದರಿಂದ, ಅವರು ಸಮಯಕ್ಕೆ ಸರಿಯಾಗಿ ನಿಲ್ಲಿಸಿ ಸ್ಕೂಟರ್ ಮತ್ತು ಸ್ಕೂಟರ್ ಸವಾರನಿಗೆ ಆಗಬಹುದಾದ ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ. ಇಂತಹ ಕಳ್ಳತನಗಳು ಕೆಲವೊಮ್ಮೆ ನಮ್ಮ ಬೇಜವಾಬ್ದಾರಿಯಿಂದಲೇ ನಡೆಯುತ್ತವೆ ಎಂಬುದನ್ನು ಮರೆಯದಿರಿ. ರಸ್ತೆಯಲ್ಲಿ ಎಚ್ಚರವಹಿಸಿದರೆ ಸಂಭವನೀಯ ಕಳ್ಳತನಗಳನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








