ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಜಮ್ಮು ಮತ್ತು ಕಾಶ್ಮೀರ ಕಣಿವೆ ರಾಜ್ಯ ಸಂಪೂರ್ಣ ಹಿಮದಿಂದ ಆವೃತ್ತವಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಸೇರಿದಂತೆ ಪ್ರವಾಸಿಗರು ಭಾರಿ ತೊಂದರೆ ಅನುಭವಿಸುವಂತಾಗಿದೆ. ಶೂನ್ಯ ಡಿಗ್ರಿಗಿಂತಲೂ ಕೆಳಗಿನ ತಾಪಮಾನದಿಂದಾಗಿ ಭಾರಿ ಹಿಮಪಾತ ದಾಖಲಾಗುತ್ತಿದೆ. ಈ ಕೊರೆಯುವ ಚಳಿ ನಡೆಯುವೂ ರಸ್ತೆ ಸಂಪರ್ಕ ಕಡಿತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ವಾಹನಗಳಂತೂ ಹಿಮವರ್ಷದಿಂದಾಗಿ ಸಂಪೂರ್ಣವಾಗಿ ಆವೃತ್ತಗೊಂಡಿದೆ. ರಕ್ಷಣಾ ಸಿಬ್ಬಂದಿಗಳು ಸ್ನೊ ಮೆಷಿನ್ ಬಳಸಿ ರೈಲು ಹಳಿಗಳಿಂದ ಮಂಜುಗಡ್ಡೆ ತೆರವುಗೊಳಿಸುವ ಕಾರ್ಯಕ್ರಮದಲ್ಲಿ ಮಗ್ನವಾಗಿದ್ದಾರೆ. ಈ ಮೂಲಕ ಸಂಚಾರ ವ್ಯವಸ್ಥೆಯನ್ನು ಪೂರ್ವ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಈ ಸಂಬಂಧ ಆಕರ್ಷಕ ಫೋಟೊ ಫೀಚರ್ ಲೇಖನವೊಂದನ್ನು ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡುತ್ತಿದ್ದೇವೆ. ಇಲ್ಲಿ ಕೇವಲ ಕಾಶ್ಮೀರ ಮಾತ್ರವಲ್ಲ. ಜಗತ್ತಿನ ಇತರ ದೇಶಗಳಲ್ಲೂ ಕಂಡುಬಂದಿರುವ ಹಿಮಪಾತದ ದೃಶ್ಯಗಳನ್ನು ದಾಖಲಿಸಲಾಗಿದೆ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಟೂರಿಸ್ಟ್ ಟ್ಯಾಕ್ಸಿ ಸ್ಟಾಂಡ್‌ನಿಂದ ತಮ್ಮ ಕಾರಿನ ಮೇಲೆ ಜರಿದಿರುವ ಮಂಜುಗಡ್ಡೆ ತೆರವುಗೊಳಿಸುವುದರಲ್ಲಿ ಮಗ್ನವಾಗಿರುವ ಪ್ರವಾಸಿಗ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಅಮಿತ ಹಿಮಪಾತದ ನಡುವೆಯೂ ಶ್ರೀನಗರ ಸಮೀಪದ ಜಹಾಂಗೀರ್ ಚೌಕ್‌ ರಸ್ತೆಯಲ್ಲಿ ಸಂಚರಿಸುತ್ತಿರುವ ಬಸ್ಸುಗಳು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಡಿಸೆಂಟೀಸ್: ಸ್ವಿರ್ಜರ್ಲೆಂಡ್‌ನಲ್ಲೂ ಹಿಮವರ್ಷಕ್ಕೆ ಸಿಲುಕಿದ ರೈಲು ಗಾಡಿ. ಚಿತ್ರದಲ್ಲಿ ರೈಲ್ವೇ ಸಿಬ್ಬಂದಿಗಳು ರೈಲು ಹಳಿಯಿಂದ ಮಂಜು ತೆರುವುಗೊಳಿಸುತ್ತಿರುವುದನ್ನು ನೋಡಬಹುದು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಏರೊಲೊ: ಹಿಮವರ್ಷಕ್ಕೆ ಹೂತುಹೋಗಿರುವ ತಮ್ಮ ಕಾರನ್ನು ಹೊರ ತೆಗೆಯುವ ಪ್ರಯತ್ನದಲ್ಲಿ ತೊಡಗಿರುವ ಕಾರು ಮಾಲಿಕ. ಸ್ವಿರ್ಜರ್ಲೆಂಡ್‌ನ ಏರೊಲೊ ಪ್ರದೇಶದಿಂದ ಕಂಡುಬಂದಿರುವ ದೃಶ್ಯವಿದು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಖಾಝಿಗುಂಡ್: ಜಮ್ಮು ಮತ್ತು ಕಾಶ್ಮೀರದ ಖಾಝಿಗುಂಡ್ ಪ್ರದೇಶದಲ್ಲಿ ಹಿಮಪಾತದಲ್ಲೂ ಸಾಗುತ್ತಿರುವ ಜನರು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅನಂತ್‌ನಾಗ್: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ರೈಲು ಹಳಿಯಿಂದ ಸ್ನೊ ಯಂತ್ರ ಬಳಸಿ ಹಿಮ ತೆರವುಗೊಳಿಸುತ್ತಿರುವ ಕಾರ್ಯಕರ್ತರು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅನಂತ್‌ನಾಗ್: ಇನ್ನೊಂದೆಡೆ ಅಮಿತ ಹಿಮಪಾತದ ನಡುವೆಯೂ ಚಲಿಸುತ್ತಿರುವ ರೈಲು. ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಪ್ರದೇಶದಿಂದ ಕಂಡುಬಂದಿರುವ ದೃಶ್ಯವಿದು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅನಂತ್‌ನಾಗ್: ಶೂನ್ಯ ಡಿಗ್ರಿಗಿಂತಲೂ ಕೆಳಗಿನ ತಾಪಮಾನದಲ್ಲೂ ಕರ್ತವ್ಯ ನಿರತರಾದ ರೈಲ್ವೇ ಆರಕ್ಷಕ ಪಡೆ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಭಾರಿ ಹಿಮಪಾತದಲ್ಲೂ ದಾಲ್ ಲೇಕ್ ನದಿ ದಾಟುತ್ತಿರುವ ಪ್ರವಾಸಿಗರು. ಅತಿಯಾದ ಹಿಮಪಾತದಿಂದಾಗಿ ಸಂಚಾರವನ್ನು ಇಲ್ಲಿ ಸ್ಥಗಿತಗೊಳಿಸಲಾಗಿದೆ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಮುಸ್ಸೊರಿ: ಸ್ನೊ ಕಟರ್ ಯಂತ್ರ ಬಳಸಿ ಮಂಜುಗಡ್ಡೆ ತೆರವುಗೊಳಿಸುವ ಪ್ರಯತ್ನ ಪ್ರಗತಿಯಲ್ಲಿದೆ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ದಲ್‌ಹೌಸಿ: ರಸ್ತೆ ಪುನರ್ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಗಳು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ದಾಲ್ ಲೇಕ್‌ನಲ್ಲಿ ಹಗುರ ಹಿಮಪಾತದ ನಡುವೆ ಸ್ವಚ್ಛಂಧವಾಗಿ ವಿಹರಿಸುತ್ತಿರುವ ಜೋಡಿ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶಿಮ್ಲಾ: ತಾಜಾ ಹಿಮವರ್ಷದ ಬಳಿಕ ಐತಿಹಾಸಿಕ ರಿಡ್ಜ್ ರಸ್ತೆಯಲ್ಲಿ ತೆರಳುತ್ತಿರುವ ಜನರು.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅವಂತಿಪುರ: ಹಿಮಪಾತದಲ್ಲಿ ಮುಳುಗಿರುವ ಜಮ್ಮು ಮತ್ತು ಕಾಶ್ಮೀರದ ಅವಂತಿಪುರ ರೈಲ್ವೇ ನಿಲ್ದಾಣ.

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಮಂಜುಸುರಿತ ಬಳಿಕ ರಸ್ತೆಯಲ್ಲಿ ಸಂಚಾರ ಆರಂಭಿಸಿದ ವಾಹನಗಳು

ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಖಾಝಿಗುಂಡ್: ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮಪಾತಕ್ಕೆ ಸಿಲುಕಿರುವ ಟ್ರಕ್‌ಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಸ್ವಿರ್ಜರ್ಲೆಂಡ್: ಪಾರ್ಕಿಂಗ್ ಪ್ರದೇಶದಲ್ಲಿ ಕಂಡುಬಂದಿರುವ ಸುಂದರ ದೃಶ್ಯವಿದು. ಹಿಮದಿಂದ ಆವೃತ್ತವಾದ ಕಾರುಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಪೂಂಚ್: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮುಗಲ್ ರಸ್ತೆಯಲ್ಲಿ ಜೆಸಿಬಿ ನೆರವಿನೊಂದಿಗೆ ಮಂಜುಗಡ್ಡೆ ತೆರವುಗೊಳಿಸುತ್ತಿರುವುದು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅರ್ಬನಾ: ಬಹಳ ಎಚ್ಚರಿಕೆಯಿಂದ ಮುಂದಕ್ಕೆ ಚಲಿಸುತ್ತಿರುವ ಟ್ರಕ್.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಚಿಕಾಗೊ: ಅಮೆರಿಕದ ಚಿಕಾಗೊದಲ್ಲೂ ಹಿಮಪಾತದ ಆರ್ಭಟ.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಚಿಕಾಗೊ: ಮಂಜಿನಿಂದ ಆವೃತ್ತವಾದ ಚಿಕಾಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುಂದರ ನೋಟ.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ದೋಡಾ: ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರಿ ಹಿಮಪಾತಕ್ಕೆ ಸಿಲುಕಿರುವ ವಾಹನಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅನಂತ್‌ನಾಗ್: ಹಿಮವರ್ಷದ ಎರಡು ದಿನದ ಬಳಿಕ ಅನಂತ್‌ನಾಗ್ ಜಿಲ್ಲೆಯಲ್ಲಿ ರೈಲು ಓಡಾಟ ಪುನರಾರಂಭ.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಅನಂತ್‌ನಾಗ್: ಹಿಮವರ್ಷದ ಎರಡು ದಿನದ ಬಳಿಕ ಅನಂತ್‌ನಾಗ್ ಜಿಲ್ಲೆಯಲ್ಲಿ ರೈಲು ಓಡಾಟ ಪುನರಾರಂಭ. ಇನ್ನೊಂದು ದೃಶ್ಯ

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಖಾಝಿಗುಂಡ್: ಸತತ ಹಿಮಪಾತಕ್ಕೆ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿರುವ ಟ್ರಕ್ಕುಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಹಿಮವರ್ಷದ ಹಿನ್ನಲೆಯಲ್ಲಿ ನಿಧಾನವಾಗಿ ಚಲಿಸುತ್ತಿರುವ ವಾಹನಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಶ್ರೀನಗರ: ಹಿಮವರ್ಷದ ಹಿನ್ನಲೆಯಲ್ಲಿ ನಿಧಾನವಾಗಿ ಚಲಿಸುತ್ತಿರುವ ವಾಹನಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ರಾಂಬನ್: ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲಿಯಿಂದ ಕಂಡುಬಂದಿರುವ ದೃಶ್ಯವಿದು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಖಾಝಿಗುಂಡ್: ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯ 300 ಕೀ.ಮೀ. ಉದ್ಧಕ್ಕೂ ಗಸ್ತು ತಿರುಗುತ್ತಿರುವ ಪಾರಾಮಿಲಿಟರಿ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್)

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಧರ್ಮಶಾಲಾ: ಹಿಮವರ್ಷಕ್ಕೆ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಾಹನಗಳು.

ಭಾರಿ ಹಿಮಪಾತ; ವಾಹನಗಳು ಉಲ್ಟಾಪಲ್ಟಿ

ಖಾಝಿಗುಂಡ್: ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿ ಬಿದ್ದಿರುವ ಟ್ರಕ್ಕುಗಳು.

More from DriveSpark

Article Published On: Friday, January 24, 2014, 12:02 [IST]
English summary
Heavy Snowfall at Kashmir; Vehicles Stranded
Read more on vehicle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+