ರಜನಿ ಸ್ಟೈಲ್‌ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

By Nagaraja

ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಬಿಡುಯಾಗುತ್ತಿದೆಯೆಂದರೆ ಅಭಿಮಾನಿಗಳಿಗದು ಎಲ್ಲಿಲ್ಲದ ಸಂಭ್ರಮ. ಹಬ್ಬದ ವಾತಾವರಣದೊಂದಿಗೆ ರಜನಿ ಚಿತ್ರಗಳನ್ನು ಬರಮಾಡಿಕೊಳ್ಳುತ್ತಾರೆ. ರಜನಿಕಾಂತ್ ಅಭಿನಯದ ಹೊಸ ಚಿತ್ರ ಕಬಾಲಿ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ.

ಈಗಷ್ಟೇ ಚಿತ್ರದ ಪ್ರಚಾರಾರ್ಥವಾಗಿ ಏರ್ ಏಷ್ಯಾ ವಿಮಾನಕ್ಕೆ ಕಬಾಲಿ ಪೋಸ್ಟರ್ ಗಳನ್ನು ಲಗತ್ತಿಸಿರುವುದು ಹೆಚ್ಚಿನ ಸುದ್ದಿ ಮಾಡಿತ್ತು. ಈಗ ಹೊಸೂರು ತಳಹದಿಯ ಮಾರುತಿ ಸುಜುಕಿ ಡೀಲರ್ ವೊಂದು ರಜನಿ ಸ್ಟೈಲ್ ನಲ್ಲಿ ಅತಿ ವಿಶಿಷ್ಟ ಸ್ವಿಫ್ಟ್ ಕಬಾಲಿ ವಿಶೇಷ ಎಡಿಷನ್ ಕಾರನ್ನು ಹೊರತಂದಿರುವುದು ಗಮನಾರ್ಹವೆನಿಸಿದೆ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್' ಎಂದೇ ಗುರುತಿಸಿಕೊಂಡಿರುವ ಕಾರಿನ ಹೊರಮೈಯಲ್ಲಿ ಕಬಾಲಿ ಪೋಸ್ಟರ್ ಗಳನ್ನು ಅಂಚಿಸಲಾಗಿದೆ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ಭಾರತ ಸೇರಿದಂತೆ ಜಾಗತಿಕ ಚಿತ್ರರಂಗದಲ್ಲಿ ಹೆಸರು ಮಾಡಿರುವ ತಮ್ಮ ಮೆಚ್ಚಿನ ನಾಯಕ ರಜನಿಕಾಂತ್ ಮೇಲಿನ ಅಪಾರ ಪ್ರೀತಿಯಿಂದಲೇ ಕಬಾಲಿ ಎಡಿಷನ್ ಸ್ವಿಫ್ಟ್ ಕಾರನ್ನು ವಿನ್ಯಾಸಗೊಳಿಸಲಾಗಿದೆ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ಹೊಸೂರು ಮೂಲದ ಮಾರುತಿ ಡೀಲರ್ ಆಗಿರುವ ಶ್ರೀ ಅಮ್ಮನ್ ಕಾರ್ಸ್ ಸ್ವಿಫ್ಟ್ ಕಬಾಲಿ ಎಡಿಷನ್ ತಯಾರಿಸಿದೆ. ಮುಂಭಾಗದಲ್ಲಿ ಕಾರಿನ ಬೊನೆಟ್, ಮೇಲ್ಚಾವಣಿ ಹಾಗೂ ಬದಿಯಲ್ಲಿ ಕಬಾಲಿ ಗ್ರಾಫಿಕ್ಸ್ ಗಳನ್ನು ಲಗತ್ತಿಸಲಾಗಿದೆ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ಹಿಂಭಾಗದಲ್ಲಿ ಕಬಾಲಿ ಚಿತ್ರದ ಡೈಲಾಗ್ ಗಳನ್ನು ತಮಿಳಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಾರಿನೊಳಗೆ ಹೆಚ್ಚಿನ ಬದಲಾವಣೆಗಳನ್ನು ತರಲಾಗಿಲ್ಲ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ದೇಶದ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್, 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ 190 ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ರಜನಿ ಸ್ಟೈಲಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 'ಕಬಾಲಿ ಎಡಿಷನ್'

ಅಂದ ಹಾಗೆ ಕಬಾಲಿ ವಿಶೇಷ ಎಡಿಷನ್ ಮಾರುತಿ ಅಧಿಕೃತವಾಗಿ ಬಿಡುಗಡೆ ಮಾಡಿರುವ ಕಾರಲ್ಲ. ಬದಲಾಗಿ ಡೀಲರ್ ಗಳು ತಾವಾಗಿ ಮುಂದೆ ಬಂದು ಬಂದು ವಿಶಿಷ್ಟ ಗ್ರಾಫಿಕ್ಸ್ ಗಳನ್ನು ಅಂಟಿಸಿದೆ.

More from DriveSpark

Article Published On: Saturday, July 16, 2016, 11:19 [IST]
English summary
Hosur Dealer launches Maruti Swift 'Kabali Edition'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+