ಬನ್ನೇರುಘಟ್ಟದಲ್ಲಿ ಸಿಂಹಗಳಿಗೆ ಚೆಲ್ಲಾಟ ಪ್ರವಾಸಿಗರಿಗೆ ಪ್ರಾಣ ಸಂಕಟ!
ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಕೆಲವು ವನ್ಯಜೀವಿ ಅಭಯಾರಣ್ಯ ಪ್ರದೇಶಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಒಂದಾಗಿದೆ. 25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರದಲ್ಲಿ ಹರಡಿರುವ ಇಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಸಿಂಹ, ಹುಲಿಗಳ ಘರ್ಜನೆಯು ಸೇರಿದಂತೆ ವಿವಿಧ ವನ್ಯಜೀವಿಗಳಿಗೆ ವಾಸಸ್ಥಾನವಾಗಿದೆ. ಅರಣ್ಯ ಇಲಾಖೆಯು ವನ್ಯಜೀವಿಗಳ ವೀಕ್ಷಣೆಗಾಗಿ 'ಜಂಗಲ್ ಸಫಾರಿ' ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸರಿ ಸುಮಾರು 22 ಕೀ.ಮೀ. ದೂರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸ್ಥಿತಗೊಂಡಿದೆ. ಇದು ಬೆಂಗಳೂರಿನ ಅತ್ಯಂತ ಪ್ರವಾಸಿ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಇಂತಹ ಸುಂದರ ಬನ್ನೇರುಘಟ್ಟದಲ್ಲಿ ಮೂರು ಸಿಂಹಗಳು ಕಾರೊಂದಕ್ಕೆ ಏಕಾಏಕಿ ದಾಳಿ ನಡೆಸಿರುವುದು ಈಗಿನ ಹಾಟ್ ವಿಷಯ.

ಎರಡು ವಿಭಿನ್ನ ಸಫಾರಿ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರ ಮೇಲೆ ಸಿಂಹ ದಾಳಿ ನಡೆಸಿದ್ದು, ಕೆಲವು ಹೊತ್ತು ಆತಂಕದ ಕ್ಷಣವನ್ನು ಸೃಷ್ಟಿ ಮಾಡಿತ್ತು. ಪ್ರಸ್ತುತ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸಿಂಹದ ದಾಳಿಯಿಂದಾಗಿ ಯಾರಿಗೂ ಗಾಯಗಳಾಗಿಲ್ಲ. ಪ್ರಯಾಣಿಕರು ಇನ್ನೋವಾ ಕಾರಿನೊಳಗೆ ಸುರಕ್ಷಿತವಾಗಿದ್ದರು ಎಂಬುದು ದೃಶ್ಯಗಳಿಂದ ತಿಳಿದು ಬರುತ್ತದೆ.

ಸಿಂಹಗಳಿಗೆ ಚೆಲ್ಲಾಣ ಎಂಬಂತೆ ಸಿಂಹಗಳ ದಂಡು ಕಾರನ್ನು ಬೆನ್ನತ್ತಿಕೊಂಡಿತ್ತು. ವನ್ಯಜೀವಿ ಧಾಮದಲ್ಲಿ ಇಂತಹ ವರ್ತನೆಗಳು ಸಹಜವಾದರೂ ಪ್ರವಾಸಿಗರಲ್ಲಿ ಆತಂಕ ಮಡುಗಟ್ಟಿತ್ತು.

ಆಫ್ರಿಕಾದಂತಹ ದಟ್ಟಾರಣ್ಯ ಪ್ರದೇಶಗಳಲ್ಲಿ ವಾಹನಗಳ ಮೇಲೆ ವನ್ಯಜೀವಿಗಳು ದಾಳಿಯಿಡುವುದು ಪದೇ ಪದೇ ಸುದ್ದಿಯಾಗುತ್ತದೆ. ಈಗ ನಮ್ಮ ಬೆಂಗಳೂರಿನಲ್ಲೂ ಇಂತಹದೊಂದು ಸಿಂಹ ದಾಳಿಯ ವಿಡಿಯೋ ಪ್ರವಾಸಿಗರಲ್ಲಿ ರೋಚಕತೆಯ ಜೊತೆಗೆ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದ್ದಲ್ಲಿ ನೀವೇನು ಮಾಡಬೇಕು? ಮೊದಲು ಪ್ರಾಣಿಗಳನ್ನು ಪ್ರೀತಿಸುವುದನ್ನು ಕಲಿಯಬೇಕು. ವಿನಾಕಾರಣ ಕೀಟಲೆ ಮಾಡುವುದನ್ನು ಬಿಟ್ಟು ಅವುಗಳನ್ನು ಅದರಷ್ಟಕ್ಕೆ ಬಿಟ್ಟು ಬಿಡಬೇಕು.

ಫೋಟೋಗಳನ್ನು ಕ್ಲಿಕ್ಕಿಸುವ ಉತ್ಸಾಹದಲ್ಲಿ ಯಾವುದೇ ಕಾರಣಕ್ಕೂ ವಾಹನಗಳಿಂದ ಹೊರಗಿಳಿಯುವ ಪ್ರಯತ್ನಕ್ಕೆ ಮುಂದಾಗಬಾರದು. ಸಫಾರಿಗಳಿಗೆ ಆಫ್ ರೋಡ್ ಪ್ರಿಯ 4x4 ಚಾಲನಾ ವ್ಯವಸ್ಥೆಯ ವಾಹನಗಳು ಹೆಚ್ಚು ಸೂಕ್ತವೆನಿಸುವುದು.

ಮತ್ತೊಂದು ಎಚ್ಚರ ವಹಿಸಬೇಕಾದ ಸಂಗತಿಯೇನೆಂದರೆ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದಾಗಲಿ ಅಥವಾ ಅವುಗಳನ್ನು ಪ್ರಾಣಿಗಳಿಗೆ ನೀಡುವ ಪ್ರಯತ್ನವನ್ನು ಮಾಡಬಾರದು. ಇದರಿಂದ ಪ್ರಾಣಿಗಳು ಬೇಗನೇ ಆಕರ್ಷಿಸಲಿದೆ.

ವನ್ಯ ಜೀವಿಗಳ ವೀಕ್ಷಣೆಯ ವೇಳೆ ಬಹಳ ಎಚ್ಚರದಿಂದಿರಬೇಕು. ಅವುಗಳ ಹತ್ತಿರಕ್ಕೆ ತೆರಳುವ ಬದಲು ದೂರದಿಂದಲೇ ವೀಕ್ಷಿಸಿ ಆನಂದಿಸಬಹುದಾಗಿದೆ.

ಭದ್ರತಾ ಸಿಬ್ಬಂದಿಗಳ ಜೊತೆಗೆ ಸಂಚರಿಸಿ ಹಾಗೂ ಅವರು ನೀಡುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಓಪನ್ ಟಾಪ್ ವಾಹನಗಳಲ್ಲಿ ಸಂಚರಿಸುವುದು ಸದಾ ಅಪಾಯಕಾರಿ.
ರೋಚಕ ವಿಡಿಯೋ ವೀಕ್ಷಿಸಿ

ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

ಕಾರುಗಳ ಮೇಲೆ ಕಾಡು ಪ್ರಾಣಿಗಳ ದಾಳಿ; ಮುಂದೇನಾಯ್ತು ?


Click it and Unblock the Notifications








