ಮಲೇಷ್ಯಾ ಬೈಕ್ ಅವಘಡ ಬೆಂಗಳೂರಿಗೆ ಲಿಂಕ್; ವಾಟ್ಸಪ್‌ನಲ್ಲಿ ತಪ್ಪು ಸಂದೇಶ
ನಿಮ್ಮ ವಾಟ್ಸಪ್ ಇನ್‌ಬಾಕ್ಸನ್ನು ಸಹ ಈ ವೀಡಿಯೋ ತುಣುಕುಗಳು ತಲುಪಿರಬಹುದು. ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಬೈಕ್ ರೇಸಿಂಗ್‌ಗೆ ಮುನ್ನುಗ್ಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಯುವಕರು ದಾರುಣವಾಗಿ ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದ್ದವು.
Also Read: ಇಂದು ಅವರು, ನಾಳೆ ನೀವು, ನಾಳಿದ್ದು ಇನ್ಯಾರೊ..! ನೀವು ಓದಲೇಬೇಕಾದ ಲೇಖನ
ಆದರೆ ಇವೆಲ್ಲ ಶುದ್ಧ ಸುಳ್ಳು ಸುದ್ದಿ ಎಂಬುದನ್ನು ನಾವಿಲ್ಲಿ ಉಲ್ಲೇಖಿಸಲು ಬಯಸುತ್ತಿದ್ದೇವೆ. ಘಟನೆ ನಡೆದಿರುವುದಂತೂ ನಿಜ. ಆದರೆ ಇದು ನಡೆದಿರುವುದು ಭಾರತದಲ್ಲಲ್ಲ. ಹಾಗಿದ್ದರೆ ಮತ್ತೆಲ್ಲಿ? ಘಟನೆಯ ಹಿಂದಿರುವ ಕಾರಣಗಳೇನು? ಇಲ್ಲಿ ಹುಟ್ಟುಹಾಕಿರುವ ಗೊಂದಲದ ಪ್ರಶ್ನೆಗಳಿಗೆ ಉತ್ತರ ಹಾಗೂ ರೋಚಕ ಅಪಘಾತ ವೀಡಿಯೋವನ್ನು ಕೆಳಗಡೆಯ ಚಿತ್ರಪುಟದಲ್ಲಿ ಕೊಡಲಾಗಿದೆ.

ಬೆಂಗಳೂರಿನಲ್ಲಿ ಅಪಘಾತ ನಡೆದಿರುವ ಬಗ್ಗೆ ಕನಿಷ್ಠ ಪಕ್ಷ ಸ್ಥಳೀಯ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿರದಿರುವುದು ಬಹಳ ಅಚ್ಚರ ಮೂಡಿಸಿರುವುದು ಸಹಜ. ಆದರೆ ನಿಜಾಂಶ ಏನೆಂದರೆ ಇಂತಹದೊಂದು ಅಪಘಾತ ಪ್ರಸಂಗ ಬೆಂಗಳೂರಿನಲ್ಲಿ ಘಟಿಸಿಯೇ ಇಲ್ಲ.

ಇದು ನಡೆದಿರುವುದು ಮಲೇಷ್ಯಾದಲ್ಲಿ. ಆದರೆ ವಾಟ್ಸಪ್ ನಲ್ಲಿ ಬಿತ್ತರಿಸಲಾಗುತ್ತಿರುವ ಎರಡು ವೀಡಿಯೋ ತುಣುಕುಗಳಲ್ಲಿ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಬೈಕ್ ಅಪಘಾತ ನಡೆದಿದೆ ಎಂಬುದರ ಬಗ್ಗೆ ಅಪ ಪ್ರಚಾರ ಮಾಡಲಾಗುತ್ತಿದೆ.

ನಿಮಯಗಳನ್ನು ಉಲ್ಲಂಘಿಸಿರುವ ಬೈಕ್ ಯುವಕರ ತಂಡವೊಂದು ಕಿಸಾಸ್ ಹೈವೇ ಎಂದರಿಯಲ್ಪಡುವ ಮಲೇಷ್ಯಾದ ಶಾ ಅಲಾಂ ಎಕ್ಸ್ ಪ್ರೆಸ್‌ವೇನಲ್ಲಿ (Shah Alam Expressway) ಬೈಕ್ ರೇಸ್ ಹಮ್ಮಿಕೊಂಡಿತ್ತು.

ಅನಧಿಕೃತವಾಗಿ ಈ ರೇಸಿಂಗ್ ಕೂಟವನ್ನು ಹೈವೇಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸೇರಿದ್ದರಲ್ಲದೆ ತಮ್ಮ ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ ವೀಡಿಯೋ ಸೆರೆ ಹಿಡಿಯುವುದರಲ್ಲಿ ಮಗ್ನವಾಗಿದ್ದರು.

ಆದರೆ ರೇಸ್ ಆರಂಭವಾದ ಬಳಿಕ ಸಂಭವಿಸಬಾರದ ಘಟನೆ ಸಂಭವಿಸಿ ಹೋಗಿತ್ತು. ಬೈಕ್ ನಿಯಂತ್ರಣ ತಪ್ಪಿದ್ದರಿಂದ ಆರು ಬೈಕ್‌ಗಳು ಏಕಕಾಲಕ್ಕೆ ಅವಘಡಕ್ಕೀಡಾಗಿದ್ದವು. ಅಲ್ಲದೆ ಸುಮಾರು 100 ಮೀಟರ್ ಗಳಷ್ಟು ದೂರ ರಸ್ತೆಯಲ್ಲೇ ಹರಿಹಾಯ್ದಿತ್ತು.

ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಏರ್ಪಡಿಸಿದ್ದ ಈ ರೇಸ್ ನಲ್ಲಿ ಎಲ್ಲ ಆರು ಮಂದಿ ಸಾವಿಗೀಡಾಗಿದ್ದರು ಎಂದು ನಂಬಲಾಗಿತ್ತು. ಆದರೆ ಇಲ್ಲಿ ಸವಾರಿಗಳನ್ನು ಭಗವಂತ ಕೈಬಿಡಲಿಲ್ಲ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿರುವುದು ಅದೃಷ್ಟವೇ ಸರಿ.

ಮಗದೊಂದು ಆಸಕ್ತಿದಾಯಕ ಸಂಗತಿಯೆಂದರೆ ಘಟನೆ ತಿಳಿದು ಮುಂಜಾವಿನ ಜಾವ 5.30ರ ವೇಳೆಯಾಗುವಾಗ ಸ್ಥಳ ಪ್ರವೇಶಿಸಿದ ಪೊಲೀಸರಿಗೆ ಅಪಘಾತ ನಡೆದಿರುವುದರ ಬಗ್ಗೆ ಯಾವುದೇ ಸುಳಿವು ದೊರಕಲಿಲ್ಲ. ಇದೊಂದು ಅನಧಿಕೃತ ರೇಸಿಂಗ್ ಆಗಿದ್ದರಿಂದ ಅಪಾಯವನ್ನು ಅರಿತ ಆಯೋಜಕರು ಎಲ್ಲ ಸುಳಿವನ್ನು ನಾಮಾವಶೇಷ ಮಾಡಿ ಜಾಗ ಖಾಲಿ ಮಾಡಿದ್ದರು.

ಅಷ್ಟಕ್ಕೂ ಇಂತಹದೊಂದು ಬೈಕ್ ರೇಸ್ ಕೂಟವನ್ನು ಯಾರು ಆಯೋಜಿಸಿದ್ದಾರೆ ಎಂಬುದಕ್ಕೆ ಸಂಬಂಧಪಟ್ಟಂತೆ ತನಿಖೆ ಆರಂಭಿಸಲಾಗಿದೆ. 2015 ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈ ಘಟನೆಯು ಬೆಂಗಳೂರನಲ್ಲಿ ನಡೆದಿದೆ ಎಂಬುದು ವಾಟ್ಸಪ್ ನಲ್ಲಿ ಹೇಗೆ ಪ್ರಚಾರ ಬಂತು ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುತ್ತದಷ್ಟು ಎತ್ತರದಲ್ಲಿ ಉತ್ತರ ದೊರಕದೆಯೇ ಬೆಳೆದು ನಿಂತಿದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








