ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಭಾರತೀಯ ಮೋಟಾರು ವಾಹನ ಕಾಯ್ದೆಯು ಮೋಟಾರು ವಾಹನಗಳ ನೋಂದಣಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ವಿವರವಾಗಿ ತಿಳಿಸುತ್ತದೆ. ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳನ್ನು ಸಹ ಈ ಕಾಯ್ದೆಯಲ್ಲಿ ವಿವರಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ವಿವರಗಳು, ವಾಹನ ಸವಾರರ ಹೊಣೆಗಾರಿಕೆ, ಅಪರಾಧಗಳು ಹಾಗೂ ಶಿಕ್ಷೆಗಳನ್ನು ಈ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಈ ಕಾಯ್ದೆಯು ವಾಹನ ಅಪಘಾತಗಳ ಸಂದರ್ಭಗಳಲ್ಲಿ ಪರಿಹಾರ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಅಪಘಾತಗಳು ದುರದೃಷ್ಟಕರ, ಕೆಲವೊಮ್ಮೆ ಅಪಘಾತಗಳು ಯಾವುದೇ ತಪ್ಪಿನಿಂದ ಸಂಭವಿಸಬಹುದು. ಅಂದ ಹಾಗೆ ಮೋಟಾರು ವಾಹನ ಕಾಯ್ದೆಯನ್ನು 1988 ರಲ್ಲಿ ಜಾರಿಗೆ ತರಲಾಯಿತು. ಈ ಕಾಯ್ದೆಯು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತದೆ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಈ ಮಹತ್ವದ ಕಾಯ್ದೆಯ ಅಂತಿಮ ಉದ್ದೇಶವು ರಸ್ತೆ ಅಪಘಾತಗಳನ್ನು ತಡೆಗಟ್ಟುವುದು. ಮೋಟಾರು ವಾಹನ ಕಾಯ್ದೆಗಳು ಸಾಮಾನ್ಯವಾಗಿ ವಾಹನ ಅಪಘಾತಗಳನ್ನು ತಡೆಗಟ್ಟಲು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಕಾರ್ಯನಿರ್ವಹಿಸುತ್ತವೆ. ಭಾರತದಲ್ಲಿ ಮೊದಲ ಮೋಟಾರು ವಾಹನ ಕಾಯ್ದೆಯನ್ನು 1914 ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರದ ಅಡಿಯಲ್ಲಿ ಪರಿಚಯಿಸಲಾಯಿತು.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ನಂತರ ಈ ಕಾಯ್ದೆಯನ್ನು 1939 ರಲ್ಲಿ ಮೋಟಾರು ವಾಹನ ಕಾಯ್ದೆಯಿಂದ ಬದಲಾಯಿಸಲಾಯಿತು. ನಂತರ ಇದನ್ನು ಮೋಟಾರು ವಾಹನಗಳ ಕಾಯ್ದೆ 1988 ಎಂದು ಕರೆಯಲಾಯಿತು. ಅಂದಿನಿಂದ ಸೆಕ್ಷನ್ 166 ಈ ಮೋಟಾರು ವಾಹನ ಕಾಯ್ದೆಯ ಪ್ರಮುಖ ಭಾಗವಾಗಿದೆ. ಹಾಗಾದರೆ ಸೆಕ್ಷನ್ 166 ಎಂದರೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಎಂದರೇನು?

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166, ಅಪಘಾತದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗೆ (MACT) ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾದ ನಿಬಂಧನೆಗಳ ಬಗ್ಗೆ ತಿಳಿಸುತ್ತದೆ. ಪರಿಹಾರ ಪಡೆಯಲು ಈ ಸೆಕ್ಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಯಾರು ಅರ್ಜಿ ಸಲ್ಲಿಸಬಹುದು?

1. ಗಾಯಗೊಂಡ ವ್ಯಕ್ತಿಯು ಅರ್ಜಿ ಸಲ್ಲಿಸಬಹುದು.

2. ವಾಹನ ಮಾಲೀಕ, ವಾಹನವನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಅವರು, ಅಪ್ರಾಪ್ತರಾದ ಸಂದರ್ಭದಲ್ಲಿ ಆ ವ್ಯಕ್ತಿಯ ಪೋಷಕರು.

3. ಮೃತ ಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರು.

4. ಗಾಯಗೊಂಡ ವ್ಯಕ್ತಿಯಿಂದ ಅಧಿಕೃತವಾಗಿ ನೇಮಕಗೊಂಡ ವ್ಯಕ್ತಿ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಪರಿಹಾರವನ್ನು ಪಡೆಯುವ ಬಗ್ಗೆ:

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 166 ರ ಅಡಿಯಲ್ಲಿ, ಅಪಘಾತದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ತಮ್ಮ ಪ್ರದೇಶದಲ್ಲಿರುವ ನ್ಯಾಯಮಂಡಳಿಯಲ್ಲಿ ಪರಿಹಾರವನ್ನು ಪಡೆಯಬಹುದು

1. ವಾಹನ ಮಾಲೀಕರು ವಾಸಿಸುವ ಪ್ರದೇಶ.

2. ಹಕ್ಕುದಾರರು ವಾಸಿಸುವ ಪ್ರದೇಶ.

3. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಸಹ ಹಕ್ಕು ಪಡೆಯಲು ಅರ್ಜಿ ಸಲ್ಲಿಸಬಹುದು.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಒಬ್ಬ ವ್ಯಕ್ತಿ ಯಾವಾಗ ಪರಿಹಾರವನ್ನು ಪಡೆಯಬಹುದು?

ಅಪಘಾತದ ನಂತರ ಅಧಿಕೃತವಾಗಿ ಪರಿಹಾರವನ್ನು ಪಡೆಯಲು ಯಾವುದೇ ನಿಗದಿತ ಸಮಯದ ಮಿತಿಯಿಲ್ಲ. ಆದರೆ ಆದಷ್ಟು ಬೇಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಈ ಕೆಳಗಿನ ಪ್ರಕರಣಗಳಲ್ಲಿ ನ್ಯಾಯಮಂಡಳಿಯು ಸಂಬಂಧಪಟ್ಟ ಪಕ್ಷಕ್ಕೆ ಪರಿಹಾರವನ್ನು ನೀಡುತ್ತದೆ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

1. ಅಪಘಾತದ ಪರಿಣಾಮವಾಗಿ ದೇಹ ಅಥವಾ ತಲೆಗೆ ಗಾಯವಾದಾಗ.

2. ಅಪಘಾತದಿಂದ ಆಸ್ತಿಗೆ ನಷ್ಟ ಅಥವಾ ಹಾನಿ ಸಂಭವಿಸಿದಾಗ.

3. ಯಾವುದೇ ಮೋಟಾರು ವಾಹನಗಳಿಂದ ಅಪಘಾತ ಸಂಭವಿಸಿದಾಗ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಕೊನೆಯದಾಗಿ, ಗಮನಿಸಬೇಕಾದ ಅಂಶವೆಂದರೆ ಯಾವುದೇ ವಾಹನವನ್ನು ಚಾಲನೆ ಮಾಡುವಾಗ, ಸುರಕ್ಷತೆಯು ವಾಹನ ಸವಾರರ ಮೊದಲ ಆದ್ಯತೆಯಾಗಿರಬೇಕು. ಈ ಕಾಯ್ದೆಯನ್ವಯ ಬೇರೊಬ್ಬರ ತಪ್ಪಿನಿಂದ ಸಂಭವಿಸುವ ಅಪಘಾತಗಳಿಗೆ ನೀವು ಪರಿಹಾರವನ್ನು ಪಡೆಯಬಹುದು.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಾಲನೆ ಮಾಡುವಾಗ ತೋರುವ ನಿರ್ಲಕ್ಷ್ಯವೇ ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಪ್ರಮುಖ ಕಾರಣ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹಳೆ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ವಾಹನ ಸವಾರರಲ್ಲಿ ಶಿಸ್ತು ಮೂಡಿಸಿ, ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಈ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಗೆ ಬಂದು 27 ತಿಂಗಳು ಕಳೆದಿದೆ. ಈ 27 ತಿಂಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸುಮಾರು 8 ಕೋಟಿ ಚಲನ್‌ಗಳನ್ನು ವಿಧಿಸಲಾಗಿದೆ.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 8 ಕೋಟಿ ಚಲನ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್ 1ರಂದು ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಮೋಟಾರು ವಾಹನ ಕಾಯ್ದೆ ಸೆಕ್ಷನ್ 166 ಬಗೆಗಿನ ವಿವರಗಳಿವು

ಸದನವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಈ ಅವಧಿಯಲ್ಲಿ 7.67 ಕೋಟಿಗೂ ಹೆಚ್ಚು ಸಂಚಾರ ಚಲನ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಪ್ರಮಾಣವು ಹೊಸ ಕಾಯ್ದೆ ಜಾರಿಗೂ ಮುನ್ನ 1.96 ಕೋಟಿಗಳಾಗಿತ್ತು. ಟ್ರಾಫಿಕ್ ಚಲನ್ ಗಳ ಸಂಖ್ಯೆ 291% ನಷ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದರು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Important things about section 166 of motor vehicle act details
Story first published: Wednesday, December 22, 2021, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X