ಕುಟುಂಬಕ್ಕಾಗಿ RCB ಸ್ಟಾರ್ ಆಟಗಾರ ಖರೀದಿಸಿದ ಐಷಾರಾಮಿ ಕಾರು ಹೇಗಿದೆ ನೋಡಿ
ಶ್ರೀಲಂಕಾ ಪ್ರವಾಸದಲ್ಲಿ ನಡೆದ ಟಿ20 ಕ್ರಿಕೆಟ್ ಸರಣಿ ಮತ್ತು ಒಡಿಐ ಸರಣಿಗಳಲ್ಲಿ ಪಾಲ್ಗೊಂಡು ಭಾರತಕ್ಕೆ ಹಿಂತಿರುಗಿರುವ ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಐಷಾರಾಮಿ ಕಾರು ಇತ್ಟೀಚೆಗೆ ಖರೀದಿಸಿದ್ದಾರೆ. ಅಂದಾಜು 3 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ರೇಂಜ್ ರೋವರ್ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಈ ಸಂತಸವನ್ನು ಟೀಮ್ ಮೊಹಮ್ಮದ್ ಸಿರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಪ್ಪು ಬಣ್ಣದ ಕಾರ್ ಖರೀದಿ ಸಲುವಾಗಿ ಕಪ್ಪು ಬಣ್ಣದ ಬ್ಲೇಝರ್ ತೊಟ್ಟ ಮೊಹಮ್ಮದ್ ಸಿರಾಜ್ (Mohammed Siraj) ತಮ್ಮ ಕುಟುಂಬದವರೊಟ್ಟೊಗೆ ಕ್ಯಾಮೆರಾಗೆ ಪೋಸ್ ನೀಡಿರುವ ಚಿತ್ರಗಳು ವೈರಲ್ ಆಗಿದೆ.
ನಿಮ್ಮ ಕನಸುಗಳಿಗೆ ಮಿತಿಯೇ ಇಲ್ಲ. ಮತ್ತಷ್ಟು ಸಾಧಿಸುವಂತೆ ಮತ್ತಷ್ಟು ಸಂಪಾದಿಸುವಂತೆ ಕನಸುಗಳು ನಮ್ಮನ್ನು ಪ್ರೇರೇಪಿಸುತ್ತವೆ. ನಿರಂತರ ಪ್ರಯತ್ನ ನಡೆಸಿದರೆ ಮಾತ್ರವೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ. ನನ್ನ ಕನಸಿನ ಕಾರು ಆಗಿದ್ದ ಲ್ಯಾಂಡ್ ರೋವರ್ ಸಂಸ್ಥೆಯ ಈ ರೇಂಜ್ ರೋವರ್ ಕಾರನ್ನು ನನ್ನ ಕುಟುಂಬಕ್ಕಾಗಿ ಖರೀದಿ ಮಾಡಲು ಸಾಧ್ಯವಾಗಿರುವುದು ಆ ದೇವರ ಆಶೀರ್ವಾದದಿಂದ ಎಂದು ಮೊಹಮ್ಮದ್ ಸಿರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರ ರೇಂಜ್ ರೋವರ್ (Range Rover) ಐಷಾರಾಮಿ ಎಸ್‌ಯುವಿಯ ಬೆಲೆಯು 2.98 ಕೋಟಿ ರೂ. ಪ್ರಾರಂಭವಾದರೆ, ಟಾಪ್ ಎಂಡ್ SV ಆಟೋಬಯೋಗ್ರಫಿ ಟ್ರಿಮ್‌ಗಾಗಿ 5.2 ಕೋಟಿ ರೂ. ಬೆಲೆಯಿದೆ. ಈ ಜನಪ್ರಿಯ ಎಸ್‍ಯುವಿಯನ್ನು ಸಿನಿಮಾ ತಾರೆಯರು ಮತ್ತು ಕ್ರೀಡಾ ಪಟುಗಳು ಹೊಂದಿದ್ದಾರೆ. ರೇಂಜ್ ರೋವರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ.
ಎಂಜಿನ್: ರೇಂಜ್ ರೋವರ್ ಎಸ್‍ಯುವಿಯಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0-ಲೀಟರ್ ಟರ್ಬೊ-ಡೀಸೆಲ್ ಮತ್ತು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಆಯ್ಕೆಗಳಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ ಟರ್ಬೊ-ಡೀಸೆಲ್ ಎಂಜಿನ್ 346 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಟ್ವಿನ್-ಟರ್ಬೊ ವಿ8 ಎಂಜಿನ್ 523 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ.
ಈ ಯುನಿಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ರೈಡ್ ಗುಣಮಟ್ಟವನ್ನು ಮತ್ತಷ್ಟು ಸುಗಮಗೊಳಿಸಲು ಸ್ಟೀರಿಂಗ್ ಅಸಿಸ್ಟ್ ಅನ್ನು ಸಹ ನಿರ್ವಹಿಸುತ್ತದೆ. ಈ ಎಸ್‍ಯುವಿಯ ನಿಯಂತ್ರಿತ ಆ್ಯಂಟಿ-ರೋಲ್ ಬಾರ್‌ಗಳನ್ನು ಸಹ ಪಡೆಯುತ್ತದೆ, ಅದು ಈಗ ವೇಗವಾದ ರೆಸ್ಪಾನ್ಸ್ ಹೊಂದಿದೆ. ಈ ಐದನೇ ತಲೆಮಾರಿನ ರೇಂಜ್ ರೋವರ್ ಆಲ್-ವ್ಹೀಲ್ ಸ್ಟೀರಿಂಗ್ ಅನ್ನು ಹೊಂದಿದೆ, ಇದು ಹಿಂದಿನ ಚಕ್ರಗಳನ್ನು 7.3 ಡಿಗ್ರಿಗಳವರೆಗೆ ಎಲೆಕ್ಟ್ರಿಕಲ್ ಆಗಿ ಚಲಿಸುತ್ತದೆ.
ಫೀಚರ್ಸ್: ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ.
ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ. ಆದರೆ ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.


Click it and Unblock the Notifications








