ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಕಾರು ಉತ್ಪಾದನಾ ವಲಯವು ಹಲವಾರು ಹೊಸ ಬದಲಾವಣೆಯೊಂದಿಗೆ ಮ್ಯಾನುವಲ್ ಮಾದರಿಗಿಂತಲೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಮಾದರಿಗಳ ಮಾರಾಟವು ಉತ್ತಮ ಬೆಳವಣಿಗೆ ಸಾಧಿಸುತ್ತಿವೆ.

ಆದರೆ ಆಟೋಮ್ಯಾಟಿಕ್ ಕಾರುಗಳ ಅಬ್ಬರದ ನಡುವೆಯೂ ಮ್ಯಾನುವಲ್ ಕಾರುಗಳು ಈಗಲೂ ಕಾರು ಮಾಲೀಕರಿಗೆ ಹೆಚ್ಚು ಇಷ್ಟವಾಗುತ್ತವೆ ಎಂದರೆ ನೀವು ನಂಬಲೇಬೇಕು.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಜಗತ್ತಿನಾದ್ಯಂತ ಹಲವಾರು ಕಾರು ಉತ್ಪಾದನಾ ಕಂಪನಿಗಳು ಪ್ರಸ್ತುತ ಮ್ಯಾನುವಲ್ ಕಾರುಗಳಿಂತಲೂ ಹೆಚ್ಚು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳ ಅಬ್ಬರದ ನಡುವೆಯೂ ಮ್ಯಾನುವಲ್ ಕಾರುಗಳು ತಮ್ಮ ಜನಪ್ರಿಯತೆಯನ್ನು ಮಾತ್ರ ಕಳೆದುಕೊಂಡಿಲ್ಲ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ದಿನಂಪ್ರತಿ ಕಾರು ಬಳಕೆ ಮತ್ತು ಟ್ರಾಫಿಕ್ ದಟ್ಟಣೆಯಲ್ಲಿ ಸುಲಭ ಚಾಲನೆಗಾಗಿ ಆಟೋಮ್ಯಾಟಿಕ್ ಮಾದರಿಗಳನ್ನು ಅನಿವಾರ್ಯವಾಗಿ ಬಳಕೆ ಮಾಡುತ್ತಿದ್ದರೂ ಸಹ ಮ್ಯಾನುವಲ್ ಕಾರು ಬಳಕೆಯು ಹಲವು ಕಾರು ಮಾಲೀಕರಿಗೆ ಈಗಲೂ ಸಹ ಮ್ಯಾನುವಲ್ ಕಾರು ಮಾದರಿಗಳ ಮೇಲೆ ಹೆಚ್ಚಿನ ಒಲವಿದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಸದ್ಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳ ಪ್ರಾಬಲ್ಯ ಹೆಚ್ಚುತ್ತಿದ್ದರೂ ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳ ಯುಗ ಬಹುಬೇಗ ಅಂತ್ಯವಾಗಲಿದೆ ಎಂದು ಯಾರೂ ಭಾವಿಸಬೇಕಿಲ್ಲ. ಏಕೆಂದರೆ ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳಿಗೆ ಇನ್ನೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಅವರನ್ನು ನಾವು ಕೇವಲ ಅಭಿಮಾನಿಗಳು ಎನ್ನಲು ಸಾಧ್ಯವಿಲ್ಲ. ಅವರನ್ನು ಕಟ್ಟಾ ಅಭಿಮಾನಿಗಳೇ ಎಂದು ಹೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಮ್ಯಾನ್ಯುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳನ್ನು ಚಾಲನೆ ಮಾಡುವುದರಿಂದ ಚಾಲಕನಿಗೆ ಕಾರಿನ ಮೇಲೆ ನಿಖರವಾದ 'ನಿಯಂತ್ರಣ' ಸಿಗುತ್ತದೆ. ಕಾರನ್ನು ಚಾಲನೆ ಮಾಡುವಾಗ ನಿಖರವಾದ ನಿಯಂತ್ರಣ ಸಾಧಿಸಲು ಬಯಸಿದರೆ ಮ್ಯಾನುವಲ್ ಗೇರ್ ಬಾಕ್ಸ್ ಮಾದರಿಗಳೇ ಸೂಕ್ತ ಎನ್ನುವುದು ಹಲವು ಕಾರು ಮಾಲೀಕರ ಅನುಭವವಾಗಿದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಕಾರನ್ನು ಚಾಲನೆ ಮಾಡುವಾಗ ಹಲವಾರು ಅಂಶಗಳನ್ನು ಪರಿಗಣಿಸಿದ ನಂತರ ನೀವು ಯಾವಾಗ ಗೇರ್ ಅನ್ನು ಬದಲಾಯಿಸಬೇಕೋ ಆಗ ಮ್ಯಾನುವಲ್ ಮಾದರಿಯು ಉತ್ತಮವಾಗಿರಲಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಲ್ಲದಕ್ಕೂ ಡ್ಯಾಶ್‌ಬೋರ್ಡ್‌ನಲ್ಲಿರುವ ಮಾಹಿತಿ ತಂತ್ರಜ್ಞಾನ ಸೌಲಭ್ಯಗಳನ್ನು ಅವಲಂಬಿಸಬೇಕಾಗಿಲ್ಲ ಎನ್ನಬಹುದು.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಇದರೊಂದಿಗೆ ಮ್ಯಾನ್ಯುವಲ್ ಗೇರ್ ಬಾಕ್ಸ್ ಕಾರುಗಳ ನಿರ್ವಹಣೆ ಕೂಡ ತುಂಬಾ ಸರಳವಾಗಿದ್ದು, ಸ್ವಯಂಚಾಲಿತ ಗೇರ್ ಬಾಕ್ಸ್ ಕಾರುಗಳಲ್ಲಿ, 'ಫ್ಲೂಯಿಡ್' (ದ್ರವ) ಮತ್ತು 'ಫಿಲ್ಟರ್' ಅನ್ನು ಆಗಾಗ್ಗೆ ಬದಲಾಯಿಸಬೇಕು. ಆದರೆ ಮ್ಯಾನ್ಯುವಲ್ ಕಾರುಗಳಲ್ಲಿ ಹಾಗಲ್ಲ ಎನ್ನಬಹುದು.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಆದ್ದರಿಂದ ಮ್ಯಾನುಯಲ್ ಕಾರುಗಳಿಗೆ ಕಡಿಮೆ ನಿರ್ವಹಣೆ ಅಗತ್ಯವಿರುತ್ತದೆ. ಇದರ ಜೊತೆಗೆ ನಿಮ್ಮ ಹಣ ಉಳಿತಾಯದ ಜೊತೆಗೆ ಅಮೂಲ್ಯ ಸಮಯವನ್ನು ಉಳಿಸುತ್ತದೆ. ಇದರ ಹೊರತಾಗಿ ಹೆಚ್ಚಿನ ಶಕ್ತಿಯು ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳ ಪ್ರಮುಖ ವೈಶಿಷ್ಟ್ಯತೆಯಾಗಿದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಕೆಲವು ಸಂದರ್ಭಗಳಲ್ಲಿ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರುವ ಕಾರುಗಳಲ್ಲಿ ಎಂಜಿನ್ ಶಕ್ತಿಯನ್ನು ಕಳೆದುಕೊಂಡರೂ ಮ್ಯಾನುವಲ್ ಗೇರ್ ಬಾಕ್ಸ್ ಗಳು ಎಂಜಿನ್ ನಿಂದ ಉತ್ಪತ್ತಿಯಾಗುವ ಎಲ್ಲಾ ಶಕ್ತಿಯನ್ನು ಟೈರ್ ಗಳಿಗೆ ಪೂರೈಸುತ್ತದೆ. ಹೀಗಾಗಿ ಎಂಜಿನ್ ಉತ್ಪಾದಿಸುವ ಶಕ್ತಿಯು ಕಾರು ಮುನ್ನುಗ್ಗಲು ಉತ್ತಮವಾಗಿ ಸಹಕರಿಸುತ್ತದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಇದಲ್ಲದೆ ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳನ್ನು ಚಾಲನೆ ಮಾಡುವುದು ಕಾರ್ ಡ್ರೈವಿಂಗ್‌ನಲ್ಲಿ ನಿಮ್ಮ ಕೌಶಲ್ಯವನ್ನು ತೋರಿಸಬಹುದು. ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳಿಗೆ ಹೋಲಿಸಿದರೆ ಸ್ವಯಂಚಾಲಿತ ಗೇರ್ ಬಾಕ್ಸ್ ಕಾರುಗಳನ್ನು ಚಾಲನೆ ಮಾಡುವುದು ತುಂಬಾ ಸರಳವಾದ ವಿಷಯವಾಗಿದ್ದು, ಆದ್ದರಿಂದ ಯಾರು ಬೇಕಾದರೂ ಸ್ವಯಂಚಾಲಿತ ಕಾರುಗಳನ್ನು ಓಡಿಸಬಹುದು.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಮತ್ತೊಂದೆಡೆ ಎಎಂಟಿ ಕಾರುಗಳ ಅಬ್ಬರದಿಂದಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳನ್ನು ಹೇಗೆ ಓಡಿಸುತ್ತೀರಿ ಎನ್ನುವುದು ಇಂದಿನ ದಿನಗಳಲ್ಲಿ ಅನೇಕರಿಗೆ ಅದು ತಿಳಿದಿಲ್ಲ. ಆದ್ದರಿಂದ ನೀವು ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳನ್ನು ಓಡಿಸಿದರೆ ಅದು ಖಂಡಿತವಾಗಿಯೂ ನಿಮ್ಮನ್ನು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ ಎನ್ನಬಹುದು.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳ ಕಡಿಮೆ ಬೆಲೆಯು ಅನೇಕ ಜನರು ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳನ್ನು ಆಯ್ಕೆ ಮಾಡಲು ಪ್ರಮುಖ ಕಾರಣವಾಗಿದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಮ್ಯಾನುವಲ್ ಕಾರುಗಳು ಆಟೋಮ್ಯಾಟಿಕ್ ಕಾರುಗಳಿಂತಲೂ ಕಡಿಮೆ ತಾಂತ್ರಿಕ ಅಂಶಗಳನ್ನು ಹೊಂದಿರುವುದರಿಂದ ಬೆಲೆ ತಗ್ಗಲಿದ್ದು, ಇದೇ ಕಾರಣದಿಂದ ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಿರುತ್ತದೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಹಾಗಂತ ಆಟೋಮ್ಯಾಟಿಕ್ ಕಾರುಗಳು ಉತ್ತಮವಲ್ಲ ಎಂದು ಹೇಳಲಾಗುತ್ತಿಲ್ಲ. ಆಟೋಮ್ಯಾಟಿಕ್ ಕಾರುಗಳು ಹಲವಾರು ಕಾರಣಗಳಿಗೆ ಇಂದು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿವೆ.

ಕಾರು ಮಾಲೀಕರಿಗೆ ಆಟೋಮ್ಯಾಟಿಕ್‌ಗಿಂತಲೂ ಮ್ಯಾನುವಲ್ ಕಾರುಗಳೇ ಹೆಚ್ಚು ಇಷ್ಟವಂತೆ! ಯಾಕೆ?

ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ವಾಹನಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಎಎಂಟಿ ಬಂದಿರುವುದರಿಂದ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರುವ ಕಾರುಗಳು ಭಾರತದಲ್ಲಿ ಸುಲಭವಾಗಿ ಕೈಗೆಟುಕುವಂತಾಗಿವೆ. ಕೆಲವು ಮಾಸ್-ಸೆಗೆಮೆಂಟ್‍‍ಗಳ ವಾಹನಗಳಲ್ಲೂ ಕೂಡಾ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗುತ್ತಿದೆ.

Most Read Articles

Kannada
English summary
Indians still loves manual gearbox cars why
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X