ರೀಲ್ ಲೈಫ್ ಸೂಪರ್ ಹೀರೊಗಳ ಕಾರು ಕಲೆಕ್ಷನ್ ಹೇಗಿದೆ ನೋಡಿ
ಸಿನಿಮಾರಂಗ ಅನ್ನೋದು ಒಂದು ಮಾಯಾ ಜಗತ್ತು. ಅದರಲ್ಲಿಯು ಕೆಲ ಚಿತ್ರಗಳಲ್ಲಿನ ಪಾತ್ರಗಳು ನೋಡುಗರನ್ನು ಎಷ್ಟರ ಮಟ್ಟಿಗೆ ಮನರಂಜಿಸುತ್ತೆ ಅಂದ್ರೆ, ನಾವು ಆ ಪಾತ್ರಗಳಂತೆ ಆಗಲು ಸಾಧ್ಯವಿಲ್ಲವೆಂದು ಗೊತ್ತಿದ್ರು ನಿಜ ಜೀವನದಲ್ಲಿ ಒಮ್ಮೆಯಾದರೂ ಅವರಂತೆ ಜೀವಿಸಬೇಕೆಂಬ ಆಸೆ ಇದ್ದೇ ಇರುತ್ತದೆ.

ಅದರಲ್ಲೂ ಹಾಲಿವುಡ್ ಸಿನಿಮಾರಂಗದ ಹೀರೋಗಳನ್ನು ಅನುಸರಿಸುವ ಅದೆಷ್ಟೋ ಜನ ನಮ್ಮ ಮಧ್ಯೆ ಇದ್ದಾರೆ. ಚಿತ್ರಗಳಲ್ಲಿ ಅವರು ಬಳಸುವ ಕಾರುಗಳು ಮತ್ತು ಸ್ಟಂಟ್ ಬಗ್ಗೆ ಬಹುತೇಕರಿಗೆ ಕ್ರೇಜ್ ಇದ್ದೆ ಇರುತ್ತೆ. ಇಂದಿನ ಲೇಖನದಲ್ಲಿ ನಾವು ಹಾಲಿವುಡ್ ಜನಪ್ರಿಯ ನಟರು ನಿಜ ಜೀವನದಲ್ಲಿ ಬಳಸುವ ಕಾರ್ ಕಲೆಕ್ಷನ್ ಕುರಿತು ಮಾಹಿತಿ ನೀಡಲಿದ್ದೇವೆ.

ರಾಬರ್ಟ್ ಡೌನಿ (ಟೋನಿ ಸ್ಟಾರ್ಕ್/ಐರನ್‍ಮ್ಯಾನ್)
ಆಡಿ ಕ್ಯೂ8
ಮಾರ್ವೆಲ್ ಕಾಮಿಕ್ಸ್ ನಲ್ಲಿನ ಪ್ರಸಿದ್ಧ ಪಾತ್ರ ಐರನ್‍ಮ್ಯಾನ್. 2008ರಲ್ಲಿ ಮೊದಲ ಬಾರಿಗೆ ತೆರೆ ಮುಂದೆ ರಾಬರ್ಟ್ ಡೌನಿ ಎಂಬ ನಟ ಐರನ್‍ಮ್ಯಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ಐರನ್‍ಮ್ಯಾನ್ ಪಾತ್ರಕ್ಕಾಗಿ ಈತ ಮಾಡಿದ ನಟನೆ ಜನರಿಗೆ ಇಷ್ಟ. ಈತ ರಿಯಲ್ ಲೈಫ್‍ನಲ್ಲಿ ಆಡಿ ಕ್ಯೂ8 ಕಾರನ್ನು ತಮ್ಮದಾಗಿಸಿಕೊಂಡಿದ್ದು, ಈ ಕಾರನ್ನು 2014ರಲ್ಲಿ ಖರೀದಿಸಿದರು.

ನಿಸ್ಸಾನ್ ಜಿಟಿ-ಆರ್
ಐರನ್‍ಮ್ಯಾನ್ ಪಾತ್ರದಿಂದ ಪ್ರಸಿದ್ಧರಾದ ರಾಬರ್ಟ್ ಡೌನಿ ಗಾಡ್ಜಿಲ್ಲ ಎಂದು ಕರೆಯಲ್ಪಡುವ ನಿಸ್ಸಾನ್ ಸಂಸ್ಥೆಯ ಜಿಟಿ-ಆರ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿನಲ್ಲಿ ರಾಬರ್ಟ್ ಡೌನಿ ಹಲವಾರು ಬಾರಿ ಕಾಣಿಸಿಕೊಂಡಿದ್ದು, 3.8 ಲೀಟರ್ ಟ್ವಿನ್-ಟರ್ಬೋ ವಿ6 ಎಂಜಿನ್ ಸಹಾಯದೊಂದಿಗೆ 528ಬಿಹೆಚ್‍ಪಿ ಹಾರ್ಸ್ ಪವರ್ ಅನ್ನು ಒದಗಿಸುತ್ತದೆ.

ಡೇವ್ ಬಟಿಸ್ಟಾ (ಡ್ರ್ಯಾಕ್ಸ್ ದಿ ಡೆಸ್ಟ್ರಾಯರ್)
ಬೆಂಟ್ಲಿ ಕಾಂಟಿನೆಂಟಲ್ ಜಿಟಿ
ಡೇವ್ ಬಟಿಸ್ಟಾ ಅವರು ಹಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಈತ ಒಬ್ಬ WWE ಸೂಪರ್‍ಸ್ಟಾರ್. ಡೇವ್ ಬಟಿಸ್ಟಾ ಅವರು ಗಾರ್ಡಿಯನ್ ಆಫ್ ದಿ ಗ್ಯಾಲಕ್ಸಿ ಚಿತ್ರದಲ್ಲಿ ವಹಿಸಿದ ಡ್ರಾಕ್ಯ್ಸ್ ಪಾತ್ರದಿಂದ ಸಿನಿಮ ಪ್ರಿಯರಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಈತನ ಹತ್ತಿರ ಜಗತ್ತಿನಲ್ಲಿನ ಉತ್ತಮವಾದ ಗ್ರ್ಯಾಂಡ್ ಟೂರಿಂಗ್ ಕಾರುಗಳಲ್ಲಿ ಒಂದಾದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಲ್ಯಾಂಬೋರ್ಗಿನಿ ಮರ್ಸಿಯಲಾಗೊ
ಬಟಿಸ್ಟಾ ಅವರು ಐಷಾರಾಮಿ ಲ್ಯಾಂಬೋರ್ಗಿನಿ ಮರ್ಸಿಯಲಾಗೊ ಕಾರನ್ನು ತಮದಾಗಿಸಿಕೊಂಡಿದ್ದು, ಇದುವರೆಗು ಬಿಡುಗಡೆಗೊಂಡ ಅತ್ಯಂತ ಅಪೇಕ್ಷಣೀಯ ಕಾರುಗಳಲ್ಲಿ ಇದು ಕೂಡಾ ಒಂದು. ಈ ಕಾರು ಎಲ್‍ಪಿ-640 ನ್ಯಾಚುರಲ್ಲಿ ಆಸ್ಪಿರೇಟೆಡ್ 6.5 ಲೀಟರ್ ಎಂಜಿನ್ ಸಹಾಯದಿಂಡ 631ಬಿಹೆಚ್‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸುತ್ತದೆ. ಮತ್ತು ಈ ಕಾರನ್ನು ಡಾರ್ಕ್ ನೈಟ್ ಸಿನಿಮಾದಲ್ಲಿ ಕೂಡಾ ಬಳಸಲಾಗಿತ್ತಂತೆ.

ಬೆನ್ ಆಫ್ಲೆಕ್ (ಬ್ಯಾಟ್‍ಮ್ಯಾನ್)
ಡಾಡ್ಜ್ ಚಾಲೆಂಜರ್ ಹೆಲ್‍ಕ್ಯಾಟ್ ಎಸ್ಆರ್‍ಟಿ
ಬ್ಯಾಟ್‍ಮ್ಯಾನ್ ಪಾತ್ರಕ್ಕಾಗಿ ಈತನ ನಟನೆಯು ಕೆಲವರಿಗೆ ಇಷ್ಟವಿಲ್ಲವಾದರೂ ಈತನಿಗಿರುವ ಕಾರ್ ಕ್ರೇಜ್‍ನಿಂದ ಈತನನ್ನು ಕೆಲವರು ಇಷ್ಟ ಪಡುತ್ತಾರೆ. ಬೆನ್ ಆಫ್ಲೆಕ್ ಅವರು ಡಾಡ್ಜ್ ಚಾಲೆಂಜರ್ ಹೆಲ್‍ಕ್ಯಾಟ್ ಎಸ್ಆರ್‍ಟಿ ಕಾರನ್ನು ತಮ್ಮದಾಗಿಸಿಕೊಂಡಿದ್ದು, ಈ ಕಾರು 6.2 ಲೀಟರ್ ಸೂಪರ್‍ಚಾರ್ಜ್ಡ್ ಎಂಜಿನ್ ಸಹಾಯದಿಂದ 707ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಷೆವರ್ಲೆ ಚೆವೆಲ್ಲೆ ಎಸ್ಎಸ್
ಷೆವರ್ಲೆ ಚೆವೆಲ್ಲೆ ಎಸ್ಎಸ್ ಇದು 1966ರ ಕ್ಲಾಸಿಕ್ ಕಾರಾಗಿದ್ದು, ಬೆನ್ ಆಫ್ಲೆಕ್ ಅವರಿಗೆ ವಿಂಟೇಜ್ ಕಾರ್ ಕ್ರೇಜ್ ಕೂಡಾ ಇದೆ ಎಂದು ತಿಳಿಯಬಹುದು. ಈ ಕಾರನ್ನು ಬೆನ್ ಆಫ್ಲೆಕ್ ಅವರು ಆಧುನಿಕ ಲುಕ್ ಅನ್ನು ನೀಡಲು ಕಾರಿನ ಒಳಭಾಗವನ್ನು ಮಾಡಿಫೈ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಾರ್ಕ್ ರಫ್ಫಲ್ಲೊ (ದಿ ಹಲ್ಕ್)
ಬಿಎಂ ಡಬ್ಲ್ಯೂ ಐ3
ಕೆಲ ಯುವಕರು ಹಲ್ಕ್ ನಂತೆಯೆ ಬಾಡಿ ಬೆಳೆಸಲು ಹೋಗಿ, ಸಾಮಾಜಿಕ ಜಾಲತಾಣಗಳಲ್ಲಿ ನಾ ಹಲ್ಕ್ ಎಂತ ಸುಮ್ನೆ ಶೀಕಿ ಮಾಡ್ತಿರ್ತಾರೆ. ನಿಜಕ್ಕೆ ಹಲ್ಕ್ ಎಂಬುದು ಒಂದು ಕಾಮಿಕ್ ಪಾತ್ರ. ಈ ಪಾತ್ರಕ್ಕೆ ನ್ಯಾಯವನ್ನು ನೀಡಿದವರು ಮಾರ್ಕ್ ರಫ್ಫಲ್ಲೊ ಎಂದು ಹಲವಾರು ಮಂದಿಯ ಅಭಿಪ್ರಾಯ. ಮಾರ್ಕ್ ರಫ್ಫಲ್ಲೊ ಹತ್ತಿರ ಪರಿಸರ ಸ್ನೇಹಿ ಬಿಎಂಡಬ್ಲ್ಯೂ ಐ3 ಕಾರು ಇದೆ. ಈ ಕಾರು 2016ರಲ್ಲಿ ಪ್ರಪಂಚದಲ್ಲಿ ಮಾರಾಟಗೊಂಡ ಉತ್ತಮ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ.

ಟೆಸ್ಲಾ ಮಾಡಲ್ ಎಸ್
ಮಾರ್ಕ್ ರಫ್ಫಲ್ಲೊ ಅವರ ಕಾರ್ ಕಲೆಕ್ಷನ್‍ನಲ್ಲಿ ಟೆಸ್ಲಾ ಮಾಡಲ್ ಎಸ್ ಕಾರು ಕೂಡಾ ಇದ್ದು, ಈ ಕಾರು ಕೂಡಾ ಎಲೆಕ್ಟ್ರಿಕ್ ಹಾಗು ಜೀರೊ ಎಮಿಷನ್ ಆನ್ನು ಪಡೆದುಕೊಂಡಿದೆ. ಅಂದರೆ ಮಾರ್ಕ್ ರಫ್ಫಲ್ಲೊ ಅವರು ನಿಜ ಜೀವನದಲ್ಲಿ ಸಾಧಾರಣ ಜನರಂತೆಯೆ ಬದುಕಲು ಇಷ್ಟ ಪಡುತ್ತಾರೆ.

ಕ್ರಿಸ್ ಹೆಮ್ಸ್ವರ್ತ್
ಕ್ಯಾಡಿಲಾಕ್ ಎಸ್ಕಲೇಡ್
ಥಾರ್ (ದಿ ಗಾಡ್ ಆಫ್ ಥಂಡರ್) ಕಾಮಿಕ್ ರೋಲ್‍ನ ಈ ಪಾತ್ರವನ್ನು ಸಿನಿಮಾಗಳಲ್ಲಿ ನಟಿಸಿದ ಕ್ರಿಸ್ ಹೆಮ್ಸ್ವರ್ತ್ ಅವರು ಕಪ್ಪು ಬಣ್ಣದ ಕ್ಯಾಡಿಲಾಕ್ ಎಸ್ಕಲೇಡ್ ಕಾರನ್ನು ತಮ್ಮದಾಗಿಸಿಕೊಂಡಿದ್ದು, ಈ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಕಾರು 6.2 ಲೀಟರ್ ವಿ8 ಎಂಜಿನ್ ಸಹಾಯದಿಂದ 420ಬಿಹೆಚ್‍ಪಿ ಮತ್ತು 624ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಕ್ಯಾಡಿಲಾಕ್ ಎಸ್ಆರ್‍ಎಕ್ಸ್
ಮತ್ತೊಂದು ಕ್ಯಾಡಿಲಾಕ್ ಕಾರನ್ನು ಕ್ರಿಸ್ ಹೆಮ್ಸ್ವರ್ತ್ ಖರೀದಿಸಿದ್ದು, ಇದರಲ್ಲಿ ಆತನ ಅವರ ಪತ್ನಿ ಎಲ್ಸಾ ಪತಾಕಿ, ಅವರ ಇಬ್ಬರು ಪುತ್ರರಾದ ಟ್ರಿಸ್ಟಾನ್ ಮತ್ತು ಸಶಾ ಹೆಮ್ಸ್ವರ್ತ್, ಮತ್ತು ಅವರ ಪುತ್ರಿ ಇಂಡಿಯಾ ರೋಸ್ ಹೆಮ್ಸ್ವರ್ತ್ ಇಡೀ ಕುಟುಂಬವನ್ನು ಹೊಂದಲು ಸಾಕಷ್ಟು ದೊಡ್ಡದಾಗಿದೆ, ದೊಡ್ಡಗಾತ್ರದ ಈ ಎಸ್‍ಯುವಿ ತನ್ನ ಆನ್-ಸ್ಕ್ರೀನ್ ಪಾತ್ರವನ್ನು ಸಹ ಹೊಂದಿಸುತ್ತದೆ.
ಭಾರತದಲ್ಲಿ ಅನಾವರಣಗೊಂಡ ಮೊದಲ ಎಲೆಕ್ಟ್ರಿಕ್ ಹೈಪರ್ ಕಾರು ವಾಜಿರಾನಿ ಶೂಲ್ ಕಾರಿನ ಕಾನ್ಸೆಪ್ಟ್ ಫೋಟೋ ಗ್ಯಾಲರಿ..


Click it and Unblock the Notifications