ಜೆಸಿಬಿ ಮೈಲೇಜ್ ತಿಳಿದರೆ ಆಘಾತಕ್ಕೊಳಗಾಗುತ್ತೀರಿ... ಅದರ ವೆಚ್ಚ ಆನೆಗಳನ್ನು ಬೆಳೆಸುವಂತಿದೆ!
ಜೆಸಿಬಿಗಳನ್ನು ನೋಡಿದ್ರೆ ಏನೋ ತಿಳಿಯದ ದೈತ್ಯ ಅನುಭವವಾಗುತ್ತದೆ ಅಲ್ಲವೇ? ರಸ್ತೆಗಳಲ್ಲಿ ಹೋಗಬೇಕಾದರೆ ಕಣ್ಣು ತಾನಾಗಿಯೇ ಅದರ ಕಡೆ ಹೋಗುವುದು ಸಾಮಾನ್ಯ, ಈ ಭಾರೀ ಯಂತ್ರಗಳನ್ನು ಮುಖ್ಯವಾಗಿ ನಿರ್ಮಾಣ ಮತ್ತು ಇತರ ಭಾರವಾದ ಕೆಲಸಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ, ಆದ್ದರಿಂದ ಅವುಗಳ ಇಂಧನ ಬಳಕೆಯೂ ಹೆಚ್ಚಾಗಿರುತ್ತದೆ. ಇಂತಹ ದೈತ್ಯ ಜೆಸಿಬಿಗಳ ಮೈಲೇಜ್ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಒಂದು ಬಾರಿಯಾದ್ರೂ ಮೂಡಿರಬಹುದು. ಜೆಸಿಬಿ ಯಂತ್ರಗಳ ಮೈಲೇಜ್ ಸಾಮಾನ್ಯವಾಗಿ ಅವುಗಳ ಬಳಕೆ, ಮಾದರಿ ಮತ್ತು ಕೆಲಸದ ಹೊರೆಯನ್ನು ಅವಲಂಬಿಸಿರುತ್ತದೆ.
ಮುಖ್ಯವಾಗಿ ಈ ಜೆಸಿಬಿಯ ಮೈಲೇಜ್ ಎಂಬುದು ಅದರ ನಿರ್ವಹಣೆ ಮತ್ತು ಕೆಲಸದ ಜೊತೆಗೆ ಅದರ ಆಪರೇಟರ್ ಅನ್ನು ಸಹ ಅವಲಂಬಿಸಿರುತ್ತದೆ. ನಿಮ್ಮ ಜೆಸಿಬಿಯನ್ನು ಉತ್ತಮ ಆಪರೇಟರ್ ಚಾಲನೆ ಮಾಡುತ್ತಿದ್ದರೆ, ನಿಮ್ಮ ಮೈಲೇಜ್ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಏಕೆಂದರೆ ನುರಿತ ಆಪರೇಟರ್ ಯಾವುದೇ ಕೆಲಸವನ್ನು ಆದಷ್ಟು ಬೇಗ ಮುಗಿಸುತ್ತಾನೆ.

ಮತ್ತೊಂದೆಡೆ, ಅನುಭವ ಇಲ್ಲದ ಆಪರೇಟರ್ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳುತ್ತಾನೆ. ಇದು ಜೆಸಿಬಿಯ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಜೆಸಿಬಿ ಬ್ಯಾಕ್ಹೋ ಲೋಡರ್‌ನಂತಹ ಮಾದರಿಯು ಪ್ರತಿ ಲೀಟರ್ ಡೀಸೆಲ್‌ಗೆ ಸುಮಾರು 4 ರಿಂದ 6 ಕಿ.ಮೀ ಮೈಲೇಜ್ ನೀಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ಜೆಸಿಬಿ ತುಂಬಾ ಭಾರವಾಗಿರುವುದರಿಂದ ಮೈಲೇಜ್ ಕಡಿಮೆ ಎಂದುಕೊಳ್ಳುತ್ತಾರೆ.
ಆದರೆ ಇದು ಕೇವಲ ಒಂದು ಕಾರಣವಾದರೆ, ಜೆಸಿಬಿ ಮಾಡುವ ಕೆಲಸದ ಸ್ವರೂಪ, ಯಂತ್ರದ ನಿರ್ವಹಣೆ ಮತ್ತು ಕಾರ್ಯಾಚರಣೆಯ ವಿಧಾನಗಳು ಮೈಲೇಜ್ ಅನ್ನು ತಗ್ಗಿಸುವ ಇತರ ಕಾರಣಗಳಾಗಿವೆ. ಅಲ್ಲದೇ ಜೆಸಿಬಿ ಯಂತ್ರಗಳು ದೊಡ್ಡದಾಗಿರುವುದರಿಂದ ಮತ್ತು ಭಾರವಾಗಿರುವುದರಿಂದ ಅವುಗಳನ್ನು ಓಡಿಸುವ ಮತ್ತು ನಿರ್ವಹಿಸುವ ವೆಚ್ಚವೂ ಸಾಕಷ್ಟು ಹೆಚ್ಚಾಗಿರುತ್ತದೆ.

JCB ನಿರ್ವಹಣೆ ಮತ್ತು ದುರಸ್ತಿ: ಬಿಡಿಭಾಗಗಳಂತೆ, ಜೆಸಿಬಿಯ ನಿರ್ವಹಣೆ ಮತ್ತು ದುರಸ್ತಿ ತುಂಬಾ ದುಬಾರಿಯಾಗಿದೆ. ಏಕೆಂದರೆ ಕಾರುಗಳು ಮತ್ತು ಬೈಕುಗಳಂತೆ, ನೀವು ರಸ್ತೆಬದಿಯಲ್ಲಿ ಜೆಸಿಬಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಜೆಸಿಬಿಯನ್ನು ರಿಪೇರಿ ಮಾಡಲು, ನೀವು ಅದನ್ನು ಕಂಪನಿಯ ಸೇವಾ ಕೇಂದ್ರಕ್ಕೆ ಕಳುಹಿಸಬೇಕು. ಅಲ್ಲಿ ನುರಿತ ಮೆಕ್ಯಾನಿಕ್‌ಗಳು ಅದರ ನಿರ್ವಹಣೆ ಮತ್ತು ದುರಸ್ತಿಯನ್ನು ಮಾಡುತ್ತಾರೆ.
JCB ಬಿಡಿಭಾಗಗಳು: ಜೆಸಿಬಿಯ ರಿಪೇರಿ ಹೆಚ್ಚಿರುವಂತೆಯೇ, ಜೆಸಿಬಿಯ ಯಾವುದೇ ಭಾಗವು ಹಾನಿಗೊಳಗಾದರೆ, ಅದನ್ನು ಸರಿಪಡಿಸಲು ಸಾವಿರಾರು ರೂಪಾಯಿಗಳು ಖರ್ಚಾಗುತ್ತವೆ. ವಾಸ್ತವವಾಗಿ, ಜೆಸಿಬಿಯ ಎಲ್ಲಾ ಭಾಗಗಳು ಧೃಡವಾದ ಕಬ್ಬಿಣದ ಭಾಗಗಳಾಗಿರುವುದರಿಂದ ಅವುಗಳನ್ನು ತಯಾರಿಸುವ ವೆಚ್ಚವೂ ಹೆಚ್ಚಾಗಿರುತ್ತದೆ, ಆದ್ದರಿಂದ ಜೆಸಿಬಿಯ ಎಲ್ಲಾ ಭಾಗಗಳು ತುಂಬಾ ದುಬಾರಿಯಾಗಿವೆ.
ಬಾಡಿಗೆ ತುಂಬಾ ಹೆಚ್ಚು: ಸಾಮಾನ್ಯವಾಗಿ ಜೆಸಿಬಿಗಳೊಂದಿಗೆ ಕೆಲಸ ಮಾಡುವವರು ಹಾಗೂ ಮಾಡಿಸುವವರಿಗೆ ಇದರ ಬಾಡಿಗೆ ತಿಳಿದಿರುತ್ತದೆ. ಒಂದು ಗಂಟೆ ಅಥವಾ ದಿನದ ಲೆಕ್ಕದಲ್ಲಿ ಬಾಡಿಗೆ ಪಡೆಯಲಾಗುತ್ತದೆ. ಇದರ ನಿರ್ವಹಣಾ ವೆಚ್ಚ ತುಂಬಾ ಹೆಚ್ಚಾಗಿರುವುದರಿಂದಲೇ ಅದರ ಮಾಲೀಕರು ಕೂಡ ಹೆಚ್ಚಿನ ಬಾಡಿಗೆ ಪಡೆಯುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








