ಸಿಂಗಾಪುರ ಗ್ರ್ಯಾನ್ ಪ್ರಿನಲ್ಲಿ ಹೆಜ್ಜೆ ಹಾಕಲಿರುವ ಜೆನ್ನಿಫರ್
ಬ್ರೆಜಿಲ್‌ನಲ್ಲಿ ಪ್ರಸಕ್ತ ಸಾಗುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ 2014 ಥೀಮ್ ಸಾಂಗ್ 'ವಿ ಆರ್ ವನ್' (ಒಲೆ ಒಲಾ) ಹಾಡುವ ಮೂಲಕ ಕ್ರೀಡಾಭಿಮಾನಿಗಳನ್ನು ಹುಬ್ಬೇರಿಸಿದ್ದ ಖ್ಯಾತ ಪಾಪ್ ಗಾಯಕಿ ಹಾಗೂ ನರ್ತಕಿ ಜೆನ್ನಿಫರ್ ಲೊಪೆಜ್ ಮುಂಬರುವ ಸಿಂಗಾಪುರ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿಕ್ಸ್‌ನಲ್ಲಿ ಕುಣಿಯಲಿದ್ದಾರೆಂಬುದು ಸದ್ಯದ ಬಿಸಿ ಬಿಸಿ ಸುದ್ದಿ.
2014 ಫಿಫಾ ಫುಟ್ಬಾಲ್ ವಿಶ್ವಕಪ್ ಅಧಿಕೃತ ಹಾಡಿನಲ್ಲಿ ಪಿಟ್‌ಬುಲ್ ಜೊತೆ ಕಾಣಿಸಿಕೊಂಡಿದ್ದ ಜೆನ್ನಿಫರ್ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿದ್ದರು. ಎರಡು ಬಾರಿ ಗ್ರ್ಯಾಮಿ ನಾಮನಿರ್ದೇಶನಕ್ಕೂ ಪಾತ್ರವಾಗಿರುವ ಜೆನ್ನಿಫರ್ ತನ್ನ ಮಾದಕ ಸೌಂದರ್ಯದಿಂದಲೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಜೆನ್ನಿಫರ್ ಲೊಪೆಜ್, ಸಿಂಗಾಪುರದಲ್ಲಿ ಸೆಪ್ಟೆಂಬರ್ 19ರಿಂದ 21ರಿಂದ ಸಾಗಲಿರುವ ಎಫ್1 ರೇಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಕೇವಲ ಜೆನ್ನಿಫರ್ ಮಾತ್ರವಲ್ಲದೆ ಅಮೆರಿಕದ ಗಾಯಕ ರೊಬಿ ವಿಲಿಯಮ್ಸ್, ಪೆಟ್ ಶಾಪ್ ಬಾಯ್ಸ್, ಜಿಗ್ಗಿ ಮಾರ್ಲೆ ಜೊತೆಗೆ ದಿಗ್ಗಜ ಕ್ರೂನರ್ ಜಾನ್ ಸಹ ಭಾಗವಹಿಸಲಿದ್ದಾರೆ.

ಸಿಂಗಾಪುರ ಏರ್‌ಲೈನ್ಸ್ ಪ್ರಾಯೋಜಕತ್ವ ವಹಿಸುತ್ತಿರುವ ಸಿಂಗಾಪುರ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ ಆಯೋಜನೆಯಾಗುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮನೆ ಮಾಡುವಂತೆ ಮಾಡಿದೆ.

2014 ಫಾರ್ಮುಲಾ ಒನ್ 1 ಸಿಂಗಾಪುರ ಏರ್‌ಲೈನ್ಸ್ ಗ್ರ್ಯಾನ್ ಪ್ರಿ ಟಿಕೆಟ್‌ಗಳಿಗಾಗಿ ಇಲ್ಲಿ ಭೇಟಿ ಕೊಡಿರಿ.


Click it and Unblock the Notifications








