Kalki 2898 AD: ಬೆಂಗಳೂರಿನಲ್ಲಿ ಕಲ್ಕಿಯ ಬುಜ್ಜಿಯದ್ದೇ ಅಬ್ಬರ... ಹೇಗಿದೆ ಗೊತ್ತಾ?

ಜನಪ್ರಿಯ ನಟ ಪ್ರಭಾಸ್ ನಾಯಕನಾಗಿ ನಟಿಸಿ, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' (Kalki 2898 AD) ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಬಾಕ್ಸ್ ಆಫೀಸ್​ನಲ್ಲೂ ಸಖತ್ ಕಲೆಕ್ಷನ್ ಮಾಡಿದ ಕಲ್ಕಿ ಇದೀಗ ಸಾವಿರ ಕೋಟಿ ಕ್ಲಬ್​ ಸೇರಿದೆ. 600 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರಕ್ಕೆ ಪ್ರೆಕ್ಷಕರು ಫಿಧಾ ಆಗಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅವರು ನಟಿಸಿದ್ದಾರೆ. ಸೈನ್ಸ್​ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ.

ಈ ಸಿನಿಮಾ ಟ್ರೇಲರ್ ರಿಲೀಸ್ ಆದಾಗಲೇ ಜನರಿಗೆ ಸಾಕಷ್ಟು ನಿರೀಕ್ಷೆ ಇದು, ಆ ನಿರೀಕ್ಷೆ ಸುಳ್ಳಲಾಗಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಜೋಡಿಯ ಕಲ್ಕಿ 2898AD ಬ್ಲಾಕ್ಬಸ್ಟರ್ ಯಶಸ್ಸನ್ನು ಕಂಡಿದ್ದು, ವಾರಗಳ ಹಿಂದೆಯೇ ಚಿತ್ರಮಂದಿರಕ್ಕೆ ಬಂದರೂ ಕಲ್ಕಿ ಕ್ರೇಜ್ ಕಡಿಮೆ ಆಗಿಲ್ಲ ಎಂಬುವುದು ವಿಶೇಷ. ಈರ ಸೈನ್ಸ್-ಫಿಕ್ಷನ್ ಸಿನಿಮಾ 'ಕಲ್ಕಿ 2898 AD' ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

Kalki 2898 AD s Bujji

ಈ ಸೂಪರ್ ಹಿಟ್ ಚಿತ್ರದಲ್ಲಿ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬುಜ್ಜಿ (Bujji) ಎಂಬ ವಾಹನ ಬಾರೀ ಸುದ್ದಿ ಮಾಡಿದೆ. ಸಿನಿಮಾದಲ್ಲಿ ನಟ ಪ್ರಭಾಸ್ ನಿರ್ವಹಿಸಿದ ಭೈರವನ ಪಾತ್ರಕ್ಕೆ ರೈಡರ್ ಆಗಿ ಈ ವಿಶೇಷ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಬುಜ್ಜಿ (Bujji) ಎಂದು ಹೆಸರನ್ನು ನೀಡಿದ್ದಾರೆ. ಈ AI-ಚಾಲಿತ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವು ಬ್ಯಾಟ್‌ಮ್ಯಾನ್ ಬ್ಯಾಟ್‌ಮೊಬೈಲ್ ಮತ್ತು ಐರನ್ ಮ್ಯಾನ್ ಜಾರ್ವಿಸ್ ಅನ್ನು ಈ ವಾಹನವು ನೆನಪಿಸುತ್ತದೆ.

ಟೀಸರ್ ಬಿಡುಗಡೆಯಾದಾಗಿನಿಂದ ಬುಜ್ಜಿ ಎಂಬ ವಾಹನ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ದೈತ್ಯ ಬುಜ್ಜಿ ವಾಹನವನ್ನು ದಕ್ಷಿಣ ಬೆಂಗಳೂರಿನ ಫೋರಮ್ ಮಾಲ್‌ನಲ್ಲಿ ಪ್ರದರ್ಶಿಸಲಾಗಿದೆ. ಇಂದು ಮತ್ತು ನಾಳೆ (ಜುಲೈ 27 & 28) ಈ ಮಾಲ್‌ನಲ್ಲಿ ಬುಜ್ಜಿ ವಾಹನ ಪ್ರದರ್ಶನವಿರುತ್ತದೆ. ಹೆಚ್ಚಿನ ಜನರು ಈ ವಾಹನವನ್ನು ನೋಡಲು ಮಾಲ್‌ಗೆ ಬರುತ್ತಿದ್ದಾರೆ.

Kalki 2898 AD s Bujji

ಈ ಬುಜ್ಜಿ ಕಾರನ್ನು ನೋಡಿದವರೆಲ್ಲರೂ ಇದನ್ನು ಜರ್ಮನಿ ಅಥವಾ ಜಪಾನ್‌ನಲ್ಲಿ ತಯಾರಿಸಲಾಗಿದೆ ಎಂದು ಭಾವಿಸುತ್ತಾರೆ. ಹಾಗಿದ್ದಲ್ಲಿ, ನೀವು ತಪ್ಪು ತಿಳಿಕೊಂಡಿದ್ದಾರೆ. ಏಕೆಂದರೆ ಈ ಕಾರು ಸಂಪೂರ್ಣವಾಗಿ ನಮ್ಮ ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ. ಈ ಕಾರನ್ನು ಮಹೀಂದ್ರಾ ಮೋಟಾರ್ಸ್ ಮತ್ತು ಜಯಂ ಮೋಟಾರ್ಸ್ ಜಂಟಿಯಾಗಿ ತಯಾರಿಸಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಮಹೀಂದ್ರಾ ಸ್ಥಾವರದಲ್ಲಿ ತಯಾರಿಸಲಾಗಿದೆ.

ಇನ್ನು ರೂ. 7 ಕೋಟಿ ವೆಚ್ಚದಲ್ಲಿ ಮಹೀಂದ್ರಾ ಈ ಕಾರನ್ನು ತಯಾರಿಸಿದೆ. ಸಾಮಾನ್ಯ ಕಾರುಗಳಿಗಿಂತ ಭಿನ್ನವಾಗಿ, ಬುಜ್ಜಿ ವಿಭಿನ್ನ ಶೈಲಿಯ ಸ್ಟೀರಿಂಗ್ ವೀಲ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಎರಡು ದೊಡ್ಡ ಟೈರ್ ಮತ್ತು ಹಿಂಭಾಗದಲ್ಲಿ ಮತ್ತೊಂದು ದೊಡ್ಡ ಟೈರ್ ಗಳನ್ನು ಹೊಂದಿವೆ. ಬುಜ್ಜಿ ವಾಹನದ ಮುಂಭಾಗದ ಟೈರ್ ರಿಮ್ ಗಾತ್ರ 34.5 ಇಂಚುಗಳು, ಉದ್ದ 6075 mm, ಅಗಲ 3380 mm ಮತ್ತು ಎತ್ತರ 2186 mm ಆಗಿದೆ.

Kalki 2898 AD s Bujji

ಬುಜ್ಜಿ ವಾಹನವು ವೈಜ್ಞಾನಿಕ ಕಾಲ್ಪನಿಕ ಕಾರು. ಇದು ಮೊದಲು ಅನಾವರಣಗೊಂಡಾಗಿನಿಂದ, ಕಲ್ಕಿ ಅಭಿಮಾನಿಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿತು. ಈ ಕಾರು ಮಿನಿ ಬಸ್ ಗಾತ್ರದಲ್ಲಿದೆ. ಇದು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರ ಮತ್ತು ಸುಮಾರು ಆರು ಟನ್ ತೂಕವನ್ನು ಹೊಂದಿದೆ. ಇದರ ತೂಕ ದೇಶದಲ್ಲಿ ಲಭ್ಯವಿರುವ ಕಾರುಗಳ ತೂಕಕ್ಕಿಂತ ಐದು ಪಟ್ಟು ಹೆಚ್ಚು ಇದೆ.

ವಾಹನವು ಸಂಪೂರ್ಣ ಗಾಜಿನ ಮೇಲ್ಭಾಗವನ್ನು ಹೊಂದಿದೆ ಮತ್ತು ಒಂದೇ ಚಾಲಕ ಸೀಟನ್ನು ಹೊಂದಿದೆ. 47kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 126 bhp ಪವರ್ ಅನ್ನು ಉತ್ಪಾದಿಸುತ್ತದೆ ಮತ್ತು 9,800Nm ಟಾರ್ಕ್ ಅನ್ನು ಉತ್ಪಾದಿಸುವ ಟ್ವಿನ್ ಏರ್-ಕೂಲ್ಡ್ ಕಿರ್ಲೋಸ್ಕರ್ ಇಂಡಕ್ಷನ್ ಮೋಟಾರ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 27, 2024, 15:26 [IST]
English summary
Kalki 2898 ad movie bujji car displayed in bengaluru details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+