ದುಬೈನಲ್ಲಿ ಫ್ಲ್ಯಾಟ್ ಖರೀದಿಸಿದರೆ ಐಷಾರಾಮಿ ಕಾರು ಉಚಿತ!
ದುಬೈನಲ್ಲಿ ದುಡಿಯುತ್ತಿರುವ ನೀವು ಮನೆಯೊಂದನ್ನು ಖರೀದಿಸುವ ಇರಾದೆಯಲ್ಲಿದ್ದೀರಾ? ದುಬಾರಿ ಮನೆಯೊಂದನ್ನು ಖರೀದಿಸುವ ಆರ್ಥಿಕ ಪರಿಸ್ಥಿತಿ ನಿಮ್ಮಲಿದ್ದಲ್ಲಿ ನಾವಿಂದು ಹೇಳಿಕೊಡಲಿರುವ ಆಫರುಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದಿರಿ.
ಮರ್ಸಿಡಿಸ್ ಬೆಂಝ್ ಗರಡಿಯಲ್ಲಿರುವ 10 ಕ್ಲಾಸಿಕ್ ಕಾರುಗಳು
ಹೆಸರಾಂತ ದಮಕ್ (DAMAC) ಪ್ರೊಪರ್ಟಿಸ್ ಈ ಹೊಸ ವರ್ಷದ ವೇಳೆಯಲ್ಲಿ ವಿಶೇಷ ಆಫರುಗಳನ್ನು ಒದಗಿಸುತ್ತಿದ್ದು, ದುಬೈನಲ್ಲಿ ಫ್ಲ್ಯಾಟ್ ವೊಂದನ್ನು ಖರೀದಿಸಿದ್ದಲ್ಲಿ ಐಷಾರಾಮಿ ಕಾರುಗಳನ್ನು ಸಂಪೂರ್ಣವಾಗಿಯೂ ಉಚಿತವಾಗಿ ನೀಡುತ್ತಿದೆ.

ಹೊಸ ವರ್ಷದಲ್ಲಿ ನಡೆಯುತ್ತಿರುವ 'ದುಬೈ ಶಾಂಪಿಂಗ್ ಫೇಸ್ಟಿವಲ್' ಅಂಗವಾಗಿ ದಮಕ್ ಆಯೋಜಿಸುತ್ತಿರುವ ವಿಶೇಷ ಆಫರ್ 2016 ಜನವರಿ 01ರಿಂದ ಫೆಬ್ರವರಿ 01ರ ವರೆಗೆ ಮುಂದುವರಿಯಲಿದೆ.

ದುಬೈ ತಳಹದಿಯ ಪ್ರಾಪರ್ಟಿ ಡೆವಲಪರ್ಸ್ ಕಂಪನಿಯಾಗಿರುವ ದಮಕ್ ಐಷಾರಾಮಿ ಅಪಾರ್ಟ್‌ಮೆಂಟ್ ಗಳನ್ನು ಮಾರಾಟ ಮಾಡುತ್ತಿದೆ. ಇದರಂತೆ ಗ್ರಾಹಕರಿಗೆ ವಿಶೇಷ ಆಫರುಗಳನ್ನು ಮುಂದಿಟ್ಟಿದೆ.

ದಮಕ್ ಪ್ರೊಪರ್ಟಿಸ್‌ನಿಂದ ಫ್ಲ್ಯಾಟ್ ಖರೀದಿಸುವ ಗ್ರಾಹಕರಿಗೆ ಲಂಬೋರ್ಗಿನಿ ಅಥವಾ ಬಿಎಂಡಬ್ಲ್ಯು ಐಷಾರಾಮಿ ಕಾರುಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು.

ಇದರಲ್ಲಿ ಬಿಎಂಡಬ್ಲ್ಯು 7 ಸಿರೀಸ್, ಬಿಎಂಡಬ್ಲ್ಯು 6 ಸಿರೀಸ್ ಹಾಗೂ ಲಂಬೋರ್ಗಿನಿ ಹ್ಯುರಕನ್ ಗಳಂತಹ ಐಷಾರಾಮಿ ಕಾರುಗಳನ್ನು ನಿಮ್ಮದಾಗಿಸುವ ಅವಕಾಶವಿರುತ್ತದೆ.

ಹಾಗೊಂದು ವೇಳೆ ನಿಮಗೆ ಕಾರಿನ ಅವಶ್ಯಕತೆ ಇಲ್ಲವಾದ್ದಲ್ಲಿ ನೀವು ಪಾವತಿಸುವ ಮೊತ್ತದಲ್ಲಿ ಭಾರಿ ರಿಯಾಯಿತಿ ದರವನ್ನು ನೀಡಲಾಗುವುದು.

ದುಬೈನ ಹೆಸರಾಂತ ಪ್ರದೇಶಗಳಲ್ಲಿ ದಮಕ್ ಪ್ರೊಪರ್ಟಿಸ್ ತನ್ನ ಲಗ್ಷುರಿ ಅಪಾರ್ಟ್‌ಮೆಂಟ್ ಗಳನ್ನು ನಿರ್ಮಿಸಿದ್ದು, ಆಸಕ್ತರು ಪ್ರಾರಂಭದಲ್ಲಿ ಒಟ್ಟು ಮೊತ್ತದ ಶೇಕಡಾ 20ರಷ್ಟು ಡೌನ್ ಪೇಮೆಂಟ್ ಮಾಡಬೇಕಾಗಿದೆ.

ಅಂದ ಹಾಗೆ ದಮಕ್ ಪ್ರೀಮಿಯಂ ಫ್ಲ್ಯಾರ್ಟ್ ಗಳ ದರ 1.26 ಕೋಟಿ ರುಪಾಯಿಗಳಿಂದ ಪ್ರಾರಂಭವಾಗುತ್ತದೆ.

ಇದೇ ಅವಧಿಯಲ್ಲಿ ದುಬೈ ಶಾಂಪಿಂಗ್ ಫೇಸ್ಟಿವಲ್ ನಡೆಯುತ್ತಿರುವುದರಿಂದ ಭಾರಿ ಸಂಖ್ಯೆಯ ಮಾರಾಟವನ್ನು ದಮಕ್ ನಿರೀಕ್ಷಿಸುತ್ತಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಬಹುಮಹಡಿ ಕಟ್ಟಡ


Click it and Unblock the Notifications








