ಎರಡು ಟ್ರಕ್‌ಗಳ ನಡುವೆ ಸಿಲುಕಿ ನಜ್ಜುಗುಜ್ಜಾದರೂ ಪ್ರಯಾಣಿಕರು ಪಾರು: ಯಾವುದೀ ಕಾರು?

ಸಾಮಾನ್ಯವಾಗಿ ವಾಹನ ಚಾಲನೆ ವೇಳೆ ಎಚ್ಚರ ವಹಿಸಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಭಾವಿಸುತ್ತೇವೆ. ಆದರೆ ಇದು ಸತ್ಯಕ್ಕೆ ದೂರದ ಮಾತು, ಕೆಲವೊಮ್ಮೆ ನಾವು ಎಚ್ಚರಿಕೆ ವಹಿಸಿದರೂ ಇತರರ ತಪ್ಪುಗಳಿಂದಾಗಿ ಅಪಘಾತಗಳು ಸಂಭವಿಸಿದ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ಇಂಥದ್ದೇ ಅಪಘಾತ ನಡೆದಿದ್ದು ಮಹೀಂದ್ರಾ ಸ್ಕಾರ್ಪಿಯೋ-ಎನ್ (Scorpio-N) ಎಸ್‌ಯುವಿಗೆ ವೇಗವಾಗಿ ಬಂದ ಅನಿಯಂತ್ರಿತ ಟ್ರಕ್ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್, ಈ ಭಯಾನಕ ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ. ಈ ಅಪಘಾತವು ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ಬಳಿ ನಡೆದಿದೆ.

ವರದಿಗಳ ಪ್ರಕಾರ, ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಧ್ಯಮ ಘಾತ್ರದ ಟ್ರಕ್ ಹಿಂದೆ ಹೋಗುತ್ತಿತ್ತು. ಹಾಗೆಯೇ ಕಾರಿನ ಹಿಂದೆಯೂ ಇನ್ನೊಂದು ಟ್ರಕ್ ಬರುತ್ತಿತ್ತು, ಇದ್ದಕ್ಕಿದ್ದಂತೆ ಕಾರಿನ ಮುಂದಿದ್ದ ಟ್ರಕ್ ರಸ್ತೆ ಉಬ್ಬು ಬಂದಿದ್ದರಿಂದ ಬ್ರೇಕ್ ಹೊಡೆದು ನಿಧಾನಗೊಳಿಸಿದೆ. ಇದರ ನಂತರ, ಮಹೀಂದ್ರಾ ಸ್ಕಾರ್ಪಿಯೋ-ಎನ್ ಚಾಲಕ ಕೂಡ ಕಾರನ್ನು ನಿಧಾನಗೊಳಿಸಿದ್ದಾನೆ.

mahindra-scorpio-n-and-truck-accident-passengers-safe

ದುರದೃಷ್ಟವಶಾತ್, ಮಹೀಂದ್ರಾ ಸ್ಕಾರ್ಪಿಯೋ-ಎನ್ ಹಿಂದೆ ಬರುತ್ತಿದ್ದ ಟ್ರಕ್ ಸಮಯಕ್ಕೆ ಸರಿಯಾಗಿ ಬ್ರೇಕ್ ಮಾಡಲು ಸಾಧ್ಯವಾಗದೇ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೋ-ಎನ್ ಹಿಂಭಾಗ ಹಾಗೂ ಮುಂಭಾಗದಲ್ಲಿದ್ದ ಎರಡೂ ಟ್ರಕ್‌ಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಸಂಪೂರ್ಣ ನಾಶವಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಾರಿನ ಹೆಡ್ ಲೈಟ್‌ಗಳು, ಬಾನೆಟ್, ಬಂಪರ್, ಗ್ರಿಲ್ ಮತ್ತು ಎಂಜಿನ್‌ ಸೇರಿದಂತೆ ಹೆಚ್ಚಿನ ಭಾಗಗಳು ಹಾನಿಯಾಗಿವೆ. ಹಾಗೆಯೇ ಸಂಪೂರ್ಣ ಹಿಂಭಾಗ ಸಹ ನಾಶವಾಗಿದೆ. ಈ ಎಸ್‌ಯುವಿಯ ಮೂರನೇ ಸಾಲಿನ ಭಾಗವು ಎರಡನೇ ಸಾಲಿನಲ್ಲಿ ವಿಲೀನಗೊಂಡಿದೆ. ರೂಫ್ ಸೇರಿದಂತೆ ಎರಡೂ ಮಧ್ಯದ ಬಾಗಿಲುಗಳು ಸಹ ಪುಡಿ-ಪುಡಿಯಾಗಿವೆ. ಇಷ್ಟು ಭೀಕರ ಅಪಘಾತದಲ್ಲೂ ಚಾಲಕ ಮತ್ತು ಪ್ರಯಾಣಿಕರು ಬದುಕುಳಿದಿದ್ದಾರೆ.

mahindra-scorpio-n-and-truck-accident-passengers-safe

ಅತ್ಯಂತ ಸುರಕ್ಷಿತ ಕಾರು ಸ್ಕಾರ್ಪಿಯೋ-ಎನ್: ಮಹೀಂದ್ರಾ ಸ್ಕಾರ್ಪಿಯೋ-ಎನ್‌ಗೆ ಗ್ಲೋಬಲ್ NCAP, 5-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಈ ಎಸ್‌ಯುವಿ ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 29.25 ಪಾಯಿಂಟ್‌ಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 28.93 ಪಾಯಿಂಟ್‌ಗಳನ್ನು ಗಳಿಸಿದೆ. ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ ಉತ್ತಮ ರಕ್ಷಣೆ ನೀಡುವ ಗುಣಮಟ್ಟವನ್ನು ಹೊಂದಿದೆ.

ಕ್ರಾಷ್ ಪರೀಕ್ಷೆಯಲ್ಲಿ ಮುಂಭಾಗದ ಪ್ರಯಾಣಿಕರ ಎದೆಯ ಭಾಗಕ್ಕೆ ಅಲ್ಪ ರಕ್ಷಣೆ, ಮೊಣಕಾಲುಗಳಿಗೆ ಉತ್ತಮ ರಕ್ಷಣೆ ನೀಡಿದೆ. ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ತಲೆ, ಎದೆ, ಹೊಟ್ಟೆ ಮತ್ತು ಸೊಂಟಕ್ಕೆ ಉತ್ತಮ ರಕ್ಷಣೆಯನ್ನು ನೀಡಿದೆ. ಸೈಡ್ ಪೋಲ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ತಲೆ, ಹೊಟ್ಟೆ ಮತ್ತು ಸೊಂಟಕ್ಕೆ ಉತ್ತಮ ರಕ್ಷಣೆಯನ್ನು ನೀಡಿದ್ರೆ, ಎದೆಯ ರಕ್ಷಣೆಯಲ್ಲಿ ದುರ್ಬಲವಾಗಿದೆ ಎಂದು ರೇಟ್ ಮಾಡಲಾಗಿದೆ.

mahindra-scorpio-n-and-truck-accident-passengers-safe

3 ವರ್ಷದ ಡಮ್ಮಿ ಗೊಂಬೆಗೆ ಚೈಲ್ಡ್ ಸೀಟ್ ಸಂಪೂರ್ಣ ರಕ್ಷಣೆಯನ್ನು ನೀಡುವ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ ತಲೆಗೆ ಉತ್ತಮ ರಕ್ಷಣೆಯಿದೆ. 18 ತಿಂಗಳ ಮಗುವಿಗೆ ಮಕ್ಕಳ ಆಸನವು ತಲೆಗೆ ಒಡ್ಡಿಕೊಳ್ಳುವುದನ್ನು ತಡೆದಿರುವುದಾಗಿ ವರದಿ ಮಾಡಲಾಗಿದೆ. ಟೆಸ್ಟ್ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಸೀಟ್ ಬೆಲ್ಟ್ ಪ್ರಿ-ಟೆನ್ಷನರ್ ಮತ್ತು ಲೋಡ್ ಲಿಮಿಟರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಐಎಸ್‌ಒಫಿಕ್ಸ್ ಅನ್ನು ಅಳವಡಿಸಿ ಟೆಸ್ಟ್ ಮಾಡಲಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, July 4, 2024, 16:25 [IST]
English summary
Mahindra scorpio n and truck accident passengers safe
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+