ಪೆಟ್ರೋಲ್ ಬಂಕ್‌ನಲ್ಲಿ ಸ್ಟಂಟ್ ಡ್ರೈವಿಂಗ್; ಪೊಲೀಸರಿಂದ ತಕ್ಕ ಶಾಸ್ತಿ
ಅರಬ್ ರಾಷ್ಟ್ರದ ಪೆಟ್ರೋಲ್ ಬಂಕ್‌ವೊಂದರಲ್ಲಿ ಸ್ಟಂಟ್ ಡ್ರೈವಿಂಗ್ ನಡೆಸುತ್ತಿದ್ದ ಚಾಲಕನೋರ್ವರನ್ನು ದುಬೈ ಪೊಲೀಸರು ಬಂಧಿಸಿದ್ದು, ತಕ್ಕ ಶಾಸ್ತಿ ಮಾಡಿದ್ದಾರೆ.
ದುಬೈನ ಅಲ್ ಅವೀರ್ ಪೆಟ್ರೋಲ್ ಬಂಕ್‌ನಿಂದ ಈ ಘಟನೆ ವರದಿಯಾಗಿದ್ದು, ವಿಡಿಯೋ ಕೆಲವೇ ತಾಸಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡಿತ್ತು.

ದುಬೈನಲ್ಲಿ ಸ್ಟಂಟ್ ಡ್ರೈವಿಂಗ್ ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿದೆ. ಇದನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪ್ರಸ್ತುತ ನಿಸ್ಸಾನ್ ಪ್ಯಾಟ್ರೋಲ್ ಕಾರನ್ನು ಸವಾರ ಎರಡು ಚಕ್ರಗಳಲ್ಲಿ ನಿಲ್ಲಿಸುವ ಮೂಲಕ ಪೆಟ್ರೋಲ್ ಬಂಕ್ ಸುತ್ತ ವೀಲಿಂಗ್ ನಡೆಸುತ್ತಾರೆ.

ಇದಾದ ಬಳಿಕ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ದುಬೈ ಪೊಲೀಸ್, ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದಾರೆ.

ಸ್ವಲ್ಪವೂ ಎಡವಟ್ಟಾದರೆ ದೊಡ್ಡ ದುರಂತವೇ ಕಾದಿತ್ತು ಎಂದು ಪೊಲೀಸರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಎಮಿರೇಟ್ಸ್ ಚಾಲಕನೋರ್ವ ಅಡ್ಡಾದಿಡ್ಡಿ ಸ್ಟಂಟ್ ಚಾಲನೆಗಾಗಿ ಅಬುದಾಬಿ ಪೊಲೀಸರ ಬಲೆಗೆ ಬಿದ್ದಿದ್ದನು. ಇದಾದ ಬೆನ್ನಲ್ಲೇ ಮಗದೊಂದು ಪ್ರಕರಣ ಬೆಳಕಿಗೆ ಬಂದಿದೆ.


Click it and Unblock the Notifications








