Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 13 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 14 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 14 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಕಳ್ಳತನವಾಗಿದ್ದ ರೋಲ್ಸ್ ರಾಯ್ಸ್ ಐಷಾರಾಮಿ ಕಾರನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿದ ಮಾಲೀಕ
ವಾಹನ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಹೊಸ ವಾಹನಗಳಲ್ಲಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಅಂಶಗಳನ್ನು ಅಳವಡಿಸಿಕೊಂಡಿದ್ದರೂ ಸಹ ಚಾಲಾಕಿ ಖದೀಮರು ಕೆಲವೊಮ್ಮೆ ಆಗಾಗ ತಮ್ಮ ಕಳ್ಳಬುದ್ದಿ ಪ್ರದರ್ಶನ ಮಾಡುವ ಮೂಲಕ ಯಶಸ್ವಿಯಾಗುತ್ತಿರುತ್ತಾರೆ.

ಖದೀಮರ ಪಟ್ಟಿಯಲ್ಲಿ ಸಾಮಾನ್ಯ ವಾಹನಗಳಿಂತಲೂ ದೊಡ್ಡ ಪ್ರಮಾಣದ ವಾಹನಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿರುತ್ತಾರೆ. ವಾಹನ ಕಳ್ಳತನ ತಡೆಯಲು ಹಲವಾರು ತಂತ್ರಜ್ಞಾನ ಮತ್ತು ಸುರಕ್ಷಾ ಸಾಧಾನಗಳನ್ನು ಬಳಕೆ ಮಾಡಿದರೂ ಸಹ ಕೆಲವೊಮ್ಮೆ ಸಣ್ಣಪುಟ್ಟ ಅಜಾಗೂರುಕತೆಗಳಿಂದಲೂ ವಾಹನಗಳು ಕಳ್ಳರ ಪಾಲಾಗುವ ಸಾಧ್ಯತೆಗಳಿರುತ್ತವೆ.

ವಾಹನಗಳ ಕಳ್ಳತನ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಿಂತಲೂ ಕಾರು ಕಳ್ಳತನ ಪ್ರಕರಣಗಳು ಮಾಲೀಕರ ಪಾಲಿಗೆ ದೊಡ್ಡ ಹೊಡೆತ ನೀಡುತ್ತವೆ. ಕೆಲವೊಮ್ಮೆ ವಾಹನಗಳ ಪತ್ತೆಯಾದರೂ ಕೂಡಾ ಅದು ಮೊದಲಿನಂತೆ ಹಿಂದಿರುಗಿ ಪತ್ತೆಯಾಗುವುದು ಸಾಕಷ್ಟು ವಿರಳ ಎನ್ನಬಹುದು.

ಏಕೆಂದರೆ ವಾಹನಗಳನ್ನು ಕದ್ದ ನಂತರ ಬಹುತೇಕ ಕಳ್ಳರ ಗುಂಪುಗಳು ಅವುಗಳನ್ನು ನೇರವಾಗಿ ಬಳಕೆ ಮಾಡುವುದಾಗಿ ಇಲ್ಲವೇ ಮತ್ತೊಬ್ಬರಿಗೆ ಮರುಮಾರಾಟ ಮಾಡುವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ಸಿಕ್ಕಿಕೊಳ್ಳುವ ಭಯದಿಂದ ಕದ್ದ ವಾಹನಗಳನ್ನು ಖದೀಮರು ನೇರವಾಗಿ ಮರುಮಾರಾಟ ಮಾಡುವ ಬದಲಾಗಿ ಅವುಗಳ ಬಿಡಿಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡುವುದೇ ಹೆಚ್ಚು.

ಇಂತಹ ಸಂದರ್ಭದಲ್ಲಿ ವಾಹನಗಳ ಪತ್ತೆಹಚ್ಚುವ ಪ್ರಕ್ರಿಯೆಗೆ ಹಿನ್ನಡೆ ಉಂಟಾಗುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ವಾಹನ ಕಳ್ಳತನ ಪ್ರಕರಣ ಪತ್ತೆಯಾಗದೇ ಹಾಗೆಯೇ ಉಳಿದುಕೊಂಡಿವೆ. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕೆಲವು ಕಾರುಗಳಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸಲು ಬೇಕಿರುವ ಕೆಲವು ತಂತ್ರಜ್ಞಾನ ಅಳವಡಿಸಿಕೊಂಡಿರುವುದು ಉತ್ತಮ ಬೆಳವಣಿಯಾಗಿದೆ.

ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್ ಸ್ಯಾಟನ್ ಐಲ್ಯಾಂಡ್‌ನ ಲೈಟ್‌ಹೌಸ್ ಹಿಲ್‌ನಲ್ಲಿ ನಡೆದ ರೋಲ್ಸ್ ರಾಯ್ಸ್ ಡಾನ್ ಕಾರು ಕಳ್ಳತನ ಪ್ರಕರಣವು ದಾಖಲಾದ ಕೆಲವೇ ಗಂಟೆಗಳಲ್ಲಿ ಭೇದಿಸಲು ಹೊಸ ಮಾದರಿಯ ತಂತ್ರಜ್ಞಾನದಿಂದಲೇ ಸಾಧ್ಯವಾಗಿದೆ ಎನ್ನಬಹುದು.

ನ್ಯೂಯಾರ್ಕ್ ಸ್ಯಾಟನ್ ಐಲ್ಯಾಂಡ್‌ನ ಲೈಟ್‌ಹೌಸ್ ಹಿಲ್‌ನಲ್ಲಿ ಜಾನ್ ಎಂಬುವವರು 2017ರ ರೋಲ್ಸ್ ರಾಯ್ಸ್ ಡಾನ್ ಎಡಿಸನ್ ಬಳಸುತ್ತಿದ್ದು, ಹೊಸ ಕಾರು ಮಾದರಿಗಾಗಿ ಜಾನ್ ತಮ್ಮ ಮನೆಯ ಹಿಂಬದಿಯಲ್ಲಿ ಪ್ರತ್ಯೇಕವಾದ ಪಾರ್ಕಿಂಗ್ ಸ್ಥಳವನ್ನು ಸಹ ನಿರ್ಮಾಣ ಮಾಡಿದ್ದಾರೆ.

ಪ್ರತಿ ಬಾರಿಯೂ ಕಾರನ್ನು ಬಳಕೆ ಮಾಡಿದ ನಂತರ ತಮ್ಮ ಕಾರನ್ನು ಸುರಕ್ಷಿತವಾಗಿ ಪಾರ್ಕಿಂಗ್ ಮಾಡುತ್ತಿದ್ದರೂ ಕೂಡಾ ಮೊನ್ನೆ ತಡರಾತ್ರಿ ದುಬಾರಿ ಕಾರನ್ನು ಕಳ್ಳರು ಭಾರೀ ತಯಾರಿಯೊಂದಿಗೆ ಕಳ್ಳತನ ಮಾಡಿದ್ದಾರೆ.

ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಜಾನ್ ಮನೆಗೆ ನುಗ್ಗಿದ ಐವರು ಕಳ್ಳರ ತಂಡವೊಂದು ಮನೆಯ ಗ್ಲಾಸ್ ಕಿಟಿಕಿಗಳನ್ನು ಒಡೆದು ಕೀ ಎಗರಿಸಿ ಕಾರನ್ನು ಕದ್ದಿದ್ದಾರೆ. ಕಳ್ಳತನದ ಸಂದರ್ಭದಲ್ಲಿ ಕಳ್ಳರಿಂದ ಆಗಬಹುದಾದ ಪ್ರಾಣಹಾನಿಯ ಭಯದಿಂದ ಯಾವುದಕ್ಕೂ ಪ್ರಕ್ರಿಯಿಸದೆ ಸುಮ್ಮುನಿದ್ದ ಮಾಲೀಕ ಜಾನ್, ತನ್ನ ಐಷಾರಾಮಿ ಕಾರು ತುಸು ದೂರಕ್ಕೆ ಹೋದ ನಂತರ ಕಿಲ್ ಸ್ವಿಚ್ ತಂತ್ರಜ್ಞಾನ ಬಳಕೆ ಮಾಡಿದ್ದಾರೆ.

ಕಿಲ್ ಸ್ವಿಚ್ ಪರಿಣಾಮ ಕಾರಿನ ನಿಯಂತ್ರಣವು ಕಳ್ಳರ ಕೈ ತಪ್ಪಿದ್ದು, ಕಿಲ್ ಸ್ವಿಚ್ ತಂತ್ರಜ್ಞಾನವು ಕಾರನ್ನು ಮುಂದಕ್ಕೆ ಚಲಿಸದಂತೆ ತಡೆಯುತ್ತದೆ. ಇದರಿಂದ ಕಕ್ಕಾಬಿಕ್ಕಿಯಾದ ಖದೀಮರು ಕಾರನ್ನು ಸ್ಟಾರ್ಟ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾದೇ ನಡುರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ತದನಂತರ ಜಿಪಿಎಸ್ ಸಹಾಯದೊಂದಿಗೆ ಕಾರು ನಿಲುಗಡೆ ಸ್ಥಳವನ್ನು ಪತ್ತೆಹಚ್ಚಿರುವ ಮಾಲೀಕನು ಕಳ್ಳರಿಗೆ ಶಾಕ್ ನೀಡಿದ್ದು, ಘಟನೆ ನಂತರ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬಿಸಿದ್ದಾರೆ.

ಕಳ್ಳರು ಮನೆಗೆ ನುಗ್ಗಿದಾಗ ಯಾವುದೇ ರೀತಿಯ ಪ್ರತಿರೋಧ ಒಡ್ಡದೆ ಪ್ರಾಣಹಾನಿಯಿಂದ ಬಚಾವ್ ಆದ ಕಾರು ಮಾಲೀಕನು ತಂತ್ರಜ್ಞಾನ ಸಹಾಯದಿಂದಲೇ ತನ್ನ ಕಾರನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಬಹುದು.

ರೋಲ್ಸ್ ರಾಯ್ಸ್ ಅತ್ಯಂತ ದುಬಾರಿ ಮತ್ತು ತಾಂತ್ರಿಕವಾಗಿ ಮುಂದುವರಿದ ಕಾರು ಮಾದರಿಯಾಗಿದ್ದು, ಈ ಕಾರುಗಳಲ್ಲಿ ಹಲವಾರು ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದೆ. ಹೀಗಾಗಿ ಈ ಕಾರಿನ ಐಷಾರಾಮಿ ಪ್ರಯಾಣದ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವುದು ಕಾರಿನ ರಕ್ಷಣೆಗೆ ಸಹಕಾರಿಯಾಗಿವೆ.

ಬಹುತೇಕ ರೋಲ್ಸ್ ರಾಯ್ಸ್ ಕಾರುಗಳ ಸಂಪರ್ಕವು ವಿಪಿಎನ್ ಮೂಲಕವೇ ನಿಯಂತ್ರಣ ಹೊಂದಿದ್ದು, ಕಳ್ಳತನದಂತಹ ಪ್ರಕರಣಗಳನ್ನು ಸುಲಭವಾಗಿ ವಿಫಲಗೊಳಿಸಲು ಕಿಲ್ ಸ್ವಿಚ್ ನಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಕಿಲ್ ಸ್ವಿಚ್ ಸಕ್ರಿಯಗೊಳಿಸಿದಾಗ ಕಾರು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿದ್ದು, ಕಿಲ್ ಸ್ವಿಚ್ ಆಫ್ ನಂತರವಷ್ಟೇ ಕಾರು ಚಾಲನೆ ಸಾಧ್ಯವಾಗಲಿದೆ. ಕಿಲ್ ಸ್ವಿಚ್ ಸೌಲಭ್ಯವು ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹಲವು ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಕಳ್ಳತನ ಪ್ರಕರಣಗಳ ಜೊತೆಗೆ ಕಾರುಗಳಿಗೆ ಹಾನಿ ಮಾಡುವಂತಹ ಪ್ರಕರಣಗಳನ್ನು ಭೇದಿಸಲು ಹೆಚ್ಚಿನ ಜಾಗೃತಿ ಜೊತೆಗೆ ತಂತ್ರಜ್ಞಾನ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.