ರಷ್ಯಾ ಸುಂದರಿ ಶರಪೋವಾ ಪೋರ್ಷೆ ಬ್ರಾಂಡ್ ಅಂಬಾಸಿಡರ್
ಹಿಂದೊಮ್ಮೆ 'ಟೆನಿಸ್ ಸುಂದರಿ' ಪಟ್ಟ ಕಟ್ಟಿಕೊಂಡಿದ್ದ ರಷ್ಯಾದ ಜನಪ್ರಿಯ ಟೆನಿಸ್ ತಾರೆ ಮರಿಯಾ ಶರಪೋವಾ, ಇದೀಗ ವಿಶ್ವದ ಅತಿ ದುಬಾರಿ ಸ್ಪೋರ್ಟ್ಸ್ ಕಾರು ಉತ್ಪಾದಕರಲ್ಲಿ ಒಂದಾಗಿರುವ ಪೋರ್ಷೆ ಕಂಪನಿಯ ನೂತನ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಜರ್ಮನಿಯ ಐಷಾರಾಮಿ ಕಾರು ಕಂಪನಿಯೊಂದಿಗೆ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಶರಪೋವಾ ಸಹಿ ಹಾಕಿದ್ದಾರೆ. ಈ ಮುಖಾಂತರ ಜಗತ್ತಿನೆಲ್ಲೆಡೆ ಪೋರ್ಷೆ ಪ್ರಚಾರ ಕಾರ್ಯದಲ್ಲಿ ಶರಪೋವಾ ಭಾಗಿಯಾಗಲಿದ್ದಾರೆ.
ಅಂದ ಹಾಗೆ ಶರಪೋವಾಗೆ ಇಂತಹ ಅದೃಷ್ಟ ಒಲಿಯುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ 2006ನೇ ಇಸವಿಯಲ್ಲಿ ಲ್ಯಾಂಡ್ ರೋವರ್ ಜತೆಯೂ ಇದೇ ರೀತಿಯ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹಾಗಿದ್ದರೆ ಪೋರ್ಷೆ ಜತೆ ರಷ್ಯಾ ಟೆನಿಸ್ ಸುಂದರಿಯ ಆಕರ್ಷಕ ಫೋಟೊ ಗ್ಯಾಲರಿ ನೋಡೋಣ ಬನ್ನಿ...

ಟೆನಿಸ್ ರಂಗದಲ್ಲಿ ಹಲವು ಏರುಬೀಳುಗಳನ್ನು ಕಂಡಿರುವ ಶರಪೋವಾ, ಗಾಯದ ಸಮಸ್ಯೆಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಬಳಿಕ ಟೆನಿಸ್ ರಂಗಕ್ಕೆ ಭರ್ಜರಿ ರಿ ಎಂಟ್ರಿ ಕೊಡುವಲ್ಲಿ ಯಶಸ್ವಿಯಾಗಿದ್ದರು.

ಶರಪೋವಾ ಜನಪ್ರಿಯತೆಯನ್ನು ಮನಗಂಡಿರುವ ಪೋರ್ಷೆ, ತನ್ನ ಬ್ರಾಂಡ್‌ಗೆ ಪ್ರಮುಖ ರಾಯಭಾರಿಯಾಗಿ ನೇಮಕಗೊಳಿಸಿದೆ.

ಮಹಿಳಾ ರಾಯಭಾರಿಯನ್ನು ಪೋರ್ಷೆ ನೇಮಕಗೊಳಿಸಿರುವುದು ಕುತೂಹಲ ಅನಿಸಿದರೂ ಯಾವುದೇ ಅಚ್ಚರಿಗೆ ಕಾರಣವಾಗಿಲ್ಲ.

ಅಂದ ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...




















Click it and Unblock the Notifications








