Maruti suzuki EV: ಮಾರುತಿ ಮೊದಲ ಎಲೆಕ್ಟ್ರಿಕ್ ಕಾರಿನ ಬೆಲೆ ಸ್ಪಷ್ಟನೆ: ಬೇಸರಗೊಳಿಸುವ ನಿರ್ಧಾರ!
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಬಿಟ್ಟುಕೊಡದ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನಗಳ (Maruti suzuki EV) ವಿಚಾರದಲ್ಲಿ ಮಾತ್ರ ಹಿಂದುಳಿದಿದೆ. ಈಗ ಎಲೆಲಕ್ಟ್ರಿಕ್ ಕಾರುಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ತಮ್ಮ ಇವಿ ಕಾರನ್ನು ಮಾರುಕಟ್ಟೆಗೆ ಇಳಿಸುವ ಪ್ರಯತ್ನಗಳು ವೇಗಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಮಾರುತಿ ಸುಜುಕಿ ತನ್ನ ಚೊಚ್ಚಲ ಎಲೆಕ್ಟ್ರಿಕ್ ಕಾರನ್ನು 2025 ರ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಲಾಗಿದೆ. ಈ EV ಮಧ್ಯಮ ಗಾತ್ರದ SUV ವಿಭಾಗವನ್ನು ಗುರಿಯಾಗಿಸಿಕೊಂಡಿದೆ. ಕಂಪನಿಯು 2031 ರ ವೇಳೆಗೆ ಆರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಎಲ್ಲವೂ ಸರಿಯಾಗಿವೆ ಆದ್ರೆ ಮಾರುತಿ ಸುಜುಕಿ ಇವಿ ಕಾರುಗಳು ಮಾತ್ರ ಬಜೆಟ್ ಸ್ನೇಹಿ ಆಗಿರುವುದಿಲ್ಲ.

ಮೊದಲಿನಿಂದಲೂ ಭಾರತದಲ್ಲಿ ಬಜೆಟ್ ಸ್ನೇಹಿಯಾಗಿರುವುದರಿಂದಲೇ ಮಾರಾಟದಲ್ಲಿ ಮಾರುತಿ ಸುಜುಕಿ ಕಾರುಗಳು ಅಗ್ರಸ್ಥಾನದಲ್ಲಿವೆ. ಈಗ ಎಲೆಕ್ಟ್ರಿಕ್ ಕಾರುಗಳನ್ನು ಕೂಡ ಅಗ್ಗವಾಗಿ ಪರಿಚಯಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌ಸಿ ಭಾರ್ಗವ ಉತ್ತರಿಸಿ, ಸದ್ಯದಲ್ಲಿಯೇ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಆಯ್ಕೆಯನ್ನು ನೀಡುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ EV ಗಳು ಇರುವುದಿಲ್ಲ ಎಂದು ಹೇಳಿದರು. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯು ಗಣನೀಯವಾಗಿರುವುದಿಲ್ಲ. ಹೀಗಾಗಿ, ಈ ಬೆಲೆ ಶ್ರೇಣಿಯಲ್ಲಿ ಖರೀದಿಗಳನ್ನು ಪರಿಗಣಿಸುವಾಗ ಹೆಚ್ಚಿನ ಗ್ರಾಹಕರು ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುತ್ತಾರೆ.

ಈ ಸಂಭಾವ್ಯ ಗ್ರಾಹಕರಿಗೆ ಪ್ರಾಯೋಗಿಕತೆ ಪ್ರಮುಖ ಕಾಳಜಿಯಾಗಿರುತ್ತದೆ. ಅಂತಹ ವಾಹನಗಳನ್ನು ನಿಯಮಿತವಾಗಿ ಚಾರ್ಜ್ ಮಾಡುವುದು ಸವಾಲಿನ ಸಂಗತಿ, ಹೆಚ್ಚಿನ ವೆಚ್ಚದಲ್ಲಿ ಬಂದರೂ ಸಹ ಹೆಚ್ಚಿನ ರೇಂಜ್ ನೀಡುವ ವಾಹನಗಳನ್ನು ಗ್ರಾಹಕರು ಹುಡುಕುತ್ತಾರೆ. ಹೆಚ್ಚುವರಿಯಾಗಿ, ಕಾರು ಖರೀದಿದಾರರು EV ಅನ್ನು ಹೊಂದಲು ಅಗತ್ಯವಾದ ಷರತ್ತುಗಳನ್ನು ಹೊಂದಿರುವುದಿಲ್ಲ ಎಂದು ಭಾರ್ಗವ ಹೇಳಿದರು.
ಮಾರುತಿ ಸುಜುಕಿ eVX: ಈ ಎಲೆಕ್ಟ್ರಿಕ್ ಕಾರನ್ನು ಇದೇ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಪರಿಕಲ್ಪನೆಯ ಆಧಾರದ ಮೇಲೆ ಮುಂಬರುವ ಈ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರನ್ನು ಸದ್ಯ ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಪರೀಕ್ಷಿಸುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿತ್ತು.

ಎಲ್ಲಾ ಅಂದುಕೊಂಡಂತೆ ಆದರೆ ಇದೇ ಕಾರು ಮಾರುತಿಯವರ ಮೊದಲ ಎಲೆಕ್ಟ್ರಿಕ್ ಕಾರಾಗಲಿದೆ. ಸದ್ಯಕ್ಕೆ ಇವಿ ಮಾರುಕಟ್ಟೆಯು ಟಾಟಾ ಕಾರುಗಳ ಆಕ್ರಮಣದಿಂದ ಮಂದುವರೆಯುತ್ತಿದ್ದು, ಮಾರುತಿ ಇವಿಗಳು ಬಿಡುಗಡೆಯಾದ ನಂತರ ತೀವ್ರ ಪೈಪೋಟಿ ಎದುರಿಸಬೇಕಿದೆ. ಈಗಿರುವ ಎಲೆಕ್ಟ್ರಿಕ್ ಕಾರುಗಳಿಗಿಂತ ಆಕ್ರಮಣಕಾರಿ ಬೆಲೆಯಲ್ಲಿ ಮಾರುತಿ ಇವಿಗಳು ಬಿಡುಗಡೆಯಾದ್ರೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬುದು ನಮ್ಮ ಅಭಿಪ್ರಾಯ.
ಹೊಸ ಕಾರು ಹೊಸ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 60kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಅಂದಾಜು 500-520 ಕಿ.ಮೀ ವ್ಯಾಪ್ತಿಯನ್ನು ನೀಡುವುದಾಗಿ ಹೇಳಲಾಗುತ್ತಿದೆ. ವಾಹನವು 4.3 ಮೀಟರ್ ಉದ್ದ, 1.8 ಮೀಟರ್ ಅಗಲ ಮತ್ತು 1.6 ಮೀಟರ್ ಎತ್ತರವನ್ನು ಹೊಂದಿರುವ ನಿರೀಕ್ಷೆಯಿದೆ. ಇದು ಮುಂಬರುವ ಎಲೆಕ್ಟ್ರಿಕ್ SUVಗಳಾದ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ XUV400, MG ZS EV ಮತ್ತು ಉತ್ಪಾದನಾ-ಸ್ಪೆಕ್ ಟಾಟಾ ಕರ್ವ್ವಿ ಎಲೆಕ್ಟ್ರಿಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications