ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಕಳೆದ ಒಂದು ದಶಕದಲ್ಲಿ ಹಲವಾರು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಆದರೆ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಈ ಮಾರುತಿ ಸ್ವೀಫ್ ಕಳೆದ 15 ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರೆಗಳಲ್ಲಿ ಒಂದಾಗಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಬ್ಯಾಂಡ್ ಮಾರುತಿ ಸುಜುಕಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ನಿರ್ವಹಣೆ ವೆಚ್ಚ ಮತ್ತು ಉತ್ತಮ ಸರ್ವಿಸ್ ನಿಂದಾಗಿ ಮಾರುತಿ ಸುಜುಕಿ ಕಾರುಗಳಿಗೆ ಬಹುಬೇಡಿಕೆಯನ್ನು ಹೊಂದಿದೆ. ಅಲ್ಲದೇ ಮಾರುತಿ ಸುಜುಕಿ ಕಾರುಗಳು ಉತಮ ರಿಸೇಲ್ ವ್ಯಾಲ್ಯೂ ಅನ್ನು ಹೊಂದಿದೆ.ಈ ಮಾರುತಿ ಸ್ವಿಫ್ಟ್ ಕಾರು ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಈ ಸ್ವಿಫ್ಟ್ ಕಾರನ್ನು ಹಲವಾರು ಜನರು ಮಾಡಿಫೈ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಈ ಮಾರುತಿ ಸ್ವಿಫ್ಟ್ ಕಾರು ಸ್ಪೋರ್ಟಿ ಲುಕ್ ಅನ್ನು ಹೊಂದಿರುವ ಕಾರು ಆಗಿದೆ. ಈ ಮಾರುತಿ ಸುಜುಕಿ ಸ್ವಿಫ್ಟ್ ಹಿಂಭಾಗದ ಎಂಜಿನ್ ಹೊಂದಿರುವ ಹಾಟ್ ಹ್ಯಾಚ್ ಆಗಿದ್ದರೆ ಹೇಗಿರಬಹುದು ಎಂಬುದನ್ನು ತೋರಿಸುವ ರೆಂಡರ್ ವೀಡಿಯೊ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಈ ವಿಡಿಯೋವನ್ನು ಝೆಫಿರ್ ಡಿಸೈನ್ಜ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ರೆಂಡರ್ ವೀಡಿಯೊದಲ್ಲಿ, ಅವರು ಸ್ವಿಫ್ಟ್ ಅನ್ನು ಸಂಪೂರ್ಣವಾಗಿ ಹಿಂಭಾಗದ ಎಂಜಿನ್ ಲೋ ರೈಡರ್ ಹಾಟ್ ಹ್ಯಾಚ್ ಆಗಿ ಮರುರೂಪಿಸಿದ್ದಾರೆ. ಈ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಮಾರುತಿ ಸ್ವಿಫ್ಟ್ ಕಾರು ಎಲ್ಲಾ ಕ್ರೋಮ್ ಅನ್ನು ತೆಗೆದುಹಾಕಲಾಗಿದೆ. ಸಂಪೂರ್ಣವಾಗಿ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ, ಈ ಹ್ಯಾಚ್‌ಬ್ಯಾಕ್ ನಲ್ಲಿ ಸ್ಮೋಕಿ ಹೆಡ್‌ಲ್ಯಾಂಪ್‌ಗಳೊಂದಿಗೆ ಪ್ರೊಜೆಕ್ಟರ್ ಮಾದರಿಯ ಲ್ಯಾಂಪ್ ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಟರ್ನ್ ಇಂಡಿಕೇಟರ್ ಗಳನ್ನು ಹೊಂದಿದೆ. ಸ್ಪ್ಲಿಟರ್‌ನೊಂದಿಗೆ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಇನ್ನು ಈ ಕಾರಿನ ಸೈಡ್ ಪ್ರೊಫೈಲ್‌ ನಲ್ಲಿ ಸಹ ಮರುವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸ್ಟಾಕ್ ಆವೃತ್ತಿಗಿಂತ ಅಗಲವಾಗಿವೆ ಮತ್ತು ವಿಶಾಲವಾದ ಬ್ಲ್ಯಾಕ್ ಅಲಾಯ್ ವ್ಹೀಲ್ ಮತ್ತು ಲೋ ಪ್ರೊಫೈಲ್ ಟೈರ್‌ಗಳನ್ನು ಹೊಂದಿಸಲು ಇದನ್ನು ಮಾಡಲಾಗಿದೆ. ಇನ್ನು ನಾಲ್ಕು ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಸೇರಿಸಿದ್ದಾರೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಇನ್ನು ಕಾರಿನ ಹಿಂಭಾಗದಲ್ಲಿ ಬದಲಾವಣೆಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಹಿಂದಿನ ಬಂಪರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಎಕ್ಸಾಸ್ಟ್ ಪೈಪ್ ಗಳು ಮತ್ತು ಎಂಜಿನ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಮಾರುತಿ ಸ್ವಿಫ್ಟ್ ಮುಂಭಾಗದ ಎಂಜಿನ್ ಹ್ಯಾಚ್ ಬ್ಯಾಕ್ ಆಗಿದೆ. ಆದರೆ ಇದನ್ನು ಮಾಡಿಫೈಗೊಳಿಸಿ ಹಿಂಬದಿ ವ್ಹೀಲ್ ಹಾಟ್ ಹ್ಯಾಚ್ ಬ್ಯಾಕ್ ಆಗಿ ಮಾಡಿದ್ದಾರೆ.

ಸ್ವಿಫ್ಟ್ ರೂಫ್ ಮೇಲೆ ದೊಡ್ಡ ಸ್ಪಾಯ್ಲರ್ ಕೂಡ ಹೊಂದಿದೆ. ರೆಂಡರ್ ವೀಡಿಯೊದಲ್ಲಿ ರೂಫ್ ಬಾಕ್ಸ್ ಅನ್ನು ಸಹ ಕಾಣಬಹುದು. ಮಾರುಕಟ್ಟೆಯಲ್ಲಿರುವ ಮಾರುತಿ ಸ್ವಿಫ್ಟ್ ಕಾರು ರಿಯರ್ ವೀಲ್ ಡ್ರೈವ್ ಕಾರನ್ನು ಹೊಂದಿಲ್ಲ. ಇನ್ನು ಈ ವಿಡಿಯೋ ಟೈಟಲ್ ನಲ್ಲಿ ಟ್ವಿನ್ ಟರ್ಬೋ ಕಾನ್ಸೆಪ್ಟ್ ಎಂದು ಬರೆಯಲಾಗಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಇನ್ನು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ತಲೆಮಾರಿನ ಮಾದರಿಯನ್ನು ಭಾರತದಲ್ಲಿ 2017ರ ಆರಂಭದಲ್ಲಿ ಮಾರುತಿ ಸುಜುಕಿ ಕಂಪನಿಯು ಪರಿಚಯಿಸಿತು. ಈ ಮಾರುತಿ ಸುಜುಕಿ ಸ್ವಿಫ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಇಂಡೋ-ಜಪಾನೀಸ್ ತಯಾರಕರು ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗಾಗಿ ಎಸ್-ಸಿಎನ್‌ಜಿ ಸ್ಪೆಕ್ ಸ್ವಿಫ್ಟ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಈ ಸ್ವಿಫ್ಟ್ ಸಿಎನ್‌ಜಿ ಕಾರನ್ನು ಎಂಟ್ರಿ ಲೆವೆಲ್ ಎಲ್‌ಎಕ್ಸ್‌ಐ ರೂಪಾಂತರದಲ್ಲಿ ಮಾತ್ರ ನೀಡಬಹುದು. ಈ ಮೂಲಕ ಸ್ವಿಫ್ಟ್ ಸಿಎನ್‌ಜಿ ಕಾರಿನ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸ್ವಿಫ್ಟ್ ಸಿಎನ್‌ಜಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಪರಿಚಯಿಸಬಹುದು ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಸ್ವಿಫ್ಟ್ ಸಿಎನ್‌ಜಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಫೇಸ್‌ಲಿಫ್ಟ್‌ ಕಾರಿನಲ್ಲಿ 1.2-ಲೀಟರ್ ಡ್ಯುಯಲ್ ಜೆಟ್ 12 ಎನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ವಿಫ್ಟ್ ಕಾರಿನಲ್ಲಿ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ(ಹೆಡ್‌ಲೈಟ್‌ಗಳು, ಡಿಆರ್‌ಎಲ್‌ಗಳು, ಟೈಲ್‌ಲೈಟ್‌ಗಳು) ಅನ್ನು ಹೊಂದಿದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಇನ್ನು 7 ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. . ಈ ಸಿಸ್ಟಂ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಕೂಡ ಹೊಂದಿದೆ. ಮಲ್ಟಿ-ಕಲರ್ ಎಂಐಡಿ, ಫ್ಲಾಟ್ ಸಂಯೋಜಿತ ಕಂಟ್ರೋಲ್ ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಇತ್ಯಾದಿಗಳೊಂದಿಗೆ ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.

ಹಿಂಭಾಗದ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರಿನ ರೆಂಡರ್ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬರ್

ಈ ಸ್ವಿಫ್ಟ್ ಕಾರಿನ ಮುಂಭಾಗದಲ್ಲಿ ಕ್ರೋಮ್ ಆಕ್ಸೆಂಟ್ ಹೊಂದಿರುವ ಆಕರ್ಷಕ ಕ್ರಾಸ್ ಮೆಶ್ ಗ್ರಿಲ್ ಮತ್ತು ಗ್ರಿಲ್ ಸುತ್ತಲು ನೀಡಲಾಗಿರುವ ಕಪ್ಪು ಪಟ್ಟಿಯು ಕಾರಿನ ಹೊಸ ಲುಕ್ ಅನ್ನು ಹೆಚ್ಚಿಸಿದೆ. ಮಾರುತಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಫೋರ್ಡ ಫಿಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ. ಈ ಸ್ವಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
English summary
Maruti suzuki swift as a rear engined hot hatch render video details
Story first published: Monday, August 16, 2021, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X