ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲೂ ಸಬಲೀಕರಣ ಸಾಧಿಸುತ್ತಿದ್ದಾರೆ. ಒಂದೆಡೆ ಇಡೀ ಸಂಸಾರವನ್ನು ಸಂಭಾಳಿಸಿಕೊಂಡು ಇನ್ನೊಂದೆಡೆ ಉದ್ಯೋಗದ ಸ್ಥಳದಲ್ಲಿಯೂ ದಕ್ಷ ವಾಗಿ ಕಾರ್ಯ ನಿರ್ವಹಿಸುವ ಅವರ ಆತ್ಮಸ್ಥೈರ್ಯ ಪುರಷರಲ್ಲಿ ಬರಲಾರದು.

By Rahul Ts

ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲೂ ಸಬಲೀಕರಣ ಸಾಧಿಸುತ್ತಿದ್ದಾರೆ. ಒಂದೆಡೆ ಇಡೀ ಸಂಸಾರವನ್ನು ಸಂಭಾಳಿಸಿಕೊಂಡು ಇನ್ನೊಂದೆಡೆ ಉದ್ಯೋಗದ ಸ್ಥಳದಲ್ಲಿಯೂ ದಕ್ಷ ವಾಗಿ ಕಾರ್ಯ ನಿರ್ವಹಿಸುವ ಅವರ ಆತ್ಮಸ್ಥೈರ್ಯ ಪುರಷರಲ್ಲಿ ಬರಲಾರದು. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿರುವ ಬೆಂಗಳೂರಿನ ಗ್ರಾಯಿತ್ರಿ ಅವರ ಸ್ಟೋರಿಯನ್ನು ಒಂದು ಬಾರಿ ಓದಲೇಬೇಕು.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಗಾಯತ್ರಿ ಆರ್ಥಿಕವಾಗಿ ಕಡುಬಡತನ ಹುಟ್ಟಿಬೆಳೆದ ಮಹಿಳೆ. ಹೊಟ್ಟೆಪಾಡಿಗಾಗಿ ಮೊದಮೊದಲ ವೃತ್ತಿಯಲ್ಲಿ ಆಯಾ ಕೆಲಸಕ್ಕೆ ಸೇರಿದ್ದ ಗಾಯಾತ್ರಿ ಅವರು ನಂತರದ ದಿನಗಳಲ್ಲಿ ಕಾರು ಚಾಲಕಿ ವೃತ್ತಿಯನ್ನೇ ಆರಂಭಿಸಿದ್ದೇ ಒಂದು ರೋಚಕ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ದೇಶದಲ್ಲಿ ಸದ್ಯ ಮಹಿಳೆಯರ ಸ್ವಾವಲಂಬನೆ ಜೀವನಕ್ಕಾಗಿ ಸಹಾಯವಾಗಲು ನೂರಾರು ಎನ್‌ಜಿಒ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಅಧೀನದ 'ಉನ್ನತ್ತಿ' ಎಂಬ ಎನ್‌ಜಿಓ ಕೂಡಾ ಒಂದು.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಕೇವಲ ವಾಹನ ತಯಾರಿಕೆಯಲ್ಲಿ ಮಾತ್ರವಲ್ಲದೆ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ನೇರವಾಗುತ್ತಿರುವ ಉನ್ನತ್ತಿ ಸಂಸ್ಥೆಯು, ಆಸಕ್ತ ಮಹಿಳೆಯರಿಗೆ ಚಾಲನಾ ತರಬೇತಿ ನೀಡುತ್ತಿರುವುದಲ್ಲದೇ ಚಾಲನಾ ವೃತ್ತಿಯನ್ನು ಹೇಗೆ ಸವಾಲಾಗಿ ಸ್ವಿಕರಿಸಬೇಕೆಂಬುವುದನ್ನು ತಿಳಿಸಿಕೊಡುತ್ತಿದೆ.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಇದೇ ವೇಳೆ ಡ್ರೈವಿಂಗ್ ಸ್ಕೂಲ್ ಒಂದರಲ್ಲಿ ಆಯಾ ಕೆಲಸ ನಿರ್ವಹಿಸುತ್ತಿದ್ದ ಗಾಯಿತ್ರಿ ಅವರು ಚಾಲನಾ ವೃತ್ತಿಯನ್ನು ಮಾಡಲೇಬೇಕೆಂಬ ಹಠದೊಂದಿಗೆ ಉನ್ನತ್ತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಲ್ಲದೇ ಚಾಲನಾ ಕಲಿಕೆಯನ್ನೇ ವೃತ್ತಿಯಾಗಿ ಸ್ವಿಕರಿಸಿದ್ದಾರೆ.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಬರೋಬ್ಬರಿ ಮೂರು ತಿಂಗಳು ಕಾಲ ಉನ್ನತ್ತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಗಾಯತ್ರಿಯವರು ಸದ್ಯ ಡ್ರೈವಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದು, ಖಾಸಗಿ ಸಂಸ್ಥೆಯೊಂದರ ಹೊಂಡಾ ಅರ್ಕಾರ್ಡ್ ಮತ್ತು ಆಡಿ ಕಾರುಗಳನ್ನು ಚಾಲನೆ ಮಾಡುತ್ತಿದ್ದಾರೆ.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಅಂದು ಆಯಾ ವೃತ್ತಿಯಲ್ಲಿ ತಿಂಗಳಿಗೆ 1,500 ಸಂಪಾದನೆ ಮಾಡುತ್ತಿದ್ದ ಗಾಯಿತ್ರಿ ಅವರು ಇದು ತಿಂಗಳಿಗೆ 42,000 ಸಾವಿರಕ್ಕೂ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ.

ವುಮೆನ್ಸ್‌ ಡೇ ಸ್ಪೆಷಲ್: ಈ ಮಹಿಳೆಯ ಸಾಧನೆಯನ್ನು ನೀವು ತಿಳಿಯಲೇಬೇಕು..

ಬಡತನದಲ್ಲೇ ಹುಟ್ಟಿಬೆಳೆದರೂ ಹೆಣ್ಣುಮಕ್ಕಳ ಬಾಳಲ್ಲಿ ಕಂಡುಬರುವ ಅಡೆತಡೆಗಳನ್ನು ಲೆಕ್ಕಿಸದೆ ತನ್ನ ಆತ್ಮವಿಶ್ವಾಸ ಮತ್ತು ಸಾಮರ್ಥ್ಯದಿಂದ ಡ್ರೈವಿಂಗ್ ಕಲಿತ ಗಾಯತ್ರಿಯವರು, ಉತ್ತಮ ಗಳಿಕೆ ಮಾಡುತ್ತಿರುವುದಲ್ಲದೇ ಸ್ವಂತ ಕ್ಯಾಬ್ ಒಂದನ್ನು ಖರೀದಿಸುವ ಯೋಜನೆಯಲ್ಲಿದ್ದಾರೆ.

Most Read Articles

Kannada
Read more on maruti suzuki
English summary
Women’s Empowerment — Bangalore Woman Goes From Sweeping To Driving An Audi.
Story first published: Thursday, March 8, 2018, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X