ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಎಲೆಕ್ಟ್ರಿಕ್ ವಾಹನಗಳಿಂದ ದೇಶಾದ್ಯಂತ ಈಗಾಗಲೇ ಹಲವಾರು ಕಡೆಗಳಲ್ಲಿ ಬೆಂಕಿ ಅವಘಡ ಪ್ರಕರಣಗಳು ಸಂಭಿಸಿದ್ದು, ಇದೀಗ ಮತ್ತೊಂದು ಘೋರ ದುರಂತ ನಡೆದಿದೆ. ತೆಲಂಗಾಣದ ಸಿಕಂದರ್‌ಬಾದ್‌ನಲ್ಲಿರುವ ಇವಿ ಸ್ಕೂಟರ್ ಶೋರೂಂ ಒಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸುಮಾರು ಎಂಟು ಜನ ಸಾವನ್ನಪ್ಪಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ತೆಲಂಗಾಣದ ಸಿಕಂದರ್‌ಬಾದ್‌ನಲ್ಲಿರುವ ರೂಬಿ ಇವಿ ಸ್ಕೂಟರ್ ಶೋರೂಂನಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ಸಿಲುಕಿದ ಸುಮಾರು 8 ಜನ ಪ್ರಾಣ ಕಳೆದುಕೊಂಡಿರುವುದಲ್ಲದೆ ಹಲವರಿಗೆ ಗಂಭೀರ ಗಾಯಗಳಾಗಿವೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಬಹುಮಹಡಿ ಕಟ್ಟದಲ್ಲಿರುವ ರೂಬಿ ಎಲೆಕ್ಟ್ರಿಕ್ ಶೋರೂಂ ನೆಲ ಮಹಡಿಯಲ್ಲಿದ್ದು, ತದನಂತರ ಮಹಡಿಗಳಲ್ಲಿ ವಸತಿ ಸೌಲಭ್ಯ ಹೊಂದಿರುವ ಹೋಟೆಲ್ ತೆರೆಯಲಾಗಿತ್ತು. ಶೋರೂಂನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕೆಲವೇ ನಿಮಿಷಗಳಲ್ಲಿ ಬೆಂಕಿ ಕೆನ್ನಾಲಿಗೆ ಶೋರೂಂ ಮಾತ್ರವಲ್ಲ ಹೋಟೆಲ್ ಮಹಡಿಗೂ ಹಬ್ಬಿಕೊಂಡಿದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ರೂಬಿ ಶೋರೂಂನಲ್ಲಿದ್ದ ಸಿಬ್ಬಂದಿ ತಕ್ಷಣಕ್ಕೆ ಹೊರಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಹೋಟೆಲ್‌ನಲ್ಲಿದ್ದ ಗ್ರಾಹಕರಿಗೆ ಬೆಂಕಿ ಅವಘಡವು ತಕ್ಷಣಕ್ಕೆ ಗಮನಕ್ಕೆ ಬಂದಿಲ್ಲ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಕೆಲವು ನಿಮಿಷಗಳಲ್ಲಿ ಸಾಧ್ಯವಾದಷ್ಟು ಗ್ರಾಹಕರು ಹೋಟೆಲ್‌ನಿಂದ ಹೊರಕ್ಕೆ ಬಂದಿದ್ದು, ಇನ್ನು ಕೆಲವರಿಗೆ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಬರಲು ಸಾಧ್ಯವಾಗದೆ ಅಲ್ಲಿಯೇ ದಟ್ಟವಾದ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಇನ್ನು ಕೆಲವರು ಅಗ್ನಿ ಅವಘಡದಿಂದ ತಪ್ಪಿಸಿಕೊಳ್ಳಲು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನ ಬಂದಿದ್ದಾರೂ ಅಷ್ಟರಲ್ಲಿ ಹಲವರು ಪ್ರಾಣಕಳೆದುಕೊಂಡಿದ್ದರು.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದ ಸಿಬ್ಬಂದಿಯು ಹೋಟೆಲ್ ಉಳಿದಿದ್ದ ಇತರೆ ಗ್ರಾಹಕರು ಮತ್ತು ಸಿಬ್ಬಂದಿಯನ್ನು ರಕ್ಷಿಸುವ ಮೂಲಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತೆಲಂಗಾಣದ ಟಿಆರ್ ಎಸ್ ಸರ್ಕಾರವು ತನಿಖೆಗೆ ಆದೇಶ ನೀಡಿದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಅಗ್ನಿ ದುರಂತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಿಕಂದರಾಬಾದ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪ್ರಾಣಹಾನಿಯಾಗಿರುವುದು ಬೇಸರ ತರಿಸಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಹಾಗೆಯೇ ಮೃತರಿಗೆ ಮತ್ತು ಗಾಯಾಳುಗಳಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ ರೂ. 2 ಲಕ್ಷ ಮತ್ತು ರೂ. 50,000 ರೂಪಾಯಿ ಪರಿಹಾರ ಒದಗಿಸಲಾಗುವುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಮಾಹಿತಿಗಳ ಪ್ರಕಾರ, ರೂಬಿ ಮೋಟಾರ್ಸ್ ಶೋರೂಂನಲ್ಲಿದ್ದ ಇ-ಬೈಕ್ ಬ್ಯಾಟರಿ ಅಥವಾ ಜನರೇಟರ್ ಸ್ಫೋಟಗೊಂಡ ಪರಿಣಾಮವೇ ವೇಗವಾಗಿ ಬೆಂಕಿಯ ಕೆನ್ನಾಲಿಗೆ ಹಬ್ಬಿಕೊಂಡಿರುವ ಸಾಧ್ಯತೆ ಬಗ್ಗೆ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಇನ್ನು ದೇಶಾದ್ಯಂತ ಇವಿ ವಾಹನಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ವಿಚಾರವು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಗ್ರಾಹಕರ ಸುರಕ್ಷತೆಗಾಗಿ ಹೊಸ ಇವಿ ವಾಹನಗಳಲ್ಲಿ ಇದೀಗ ಹಲವಾರು ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಕಳೆದ ಕೆಲ ತಿಂಗಳ ಹಿಂದಷ್ಟೇ ದೇಶಾದ್ಯಂತ ದಾಖಲಾದ ಸರಣಿ ಇವಿ ವಾಹನಗಳಲ್ಲಿನ ಅಗ್ನಿ ಅವಘಡಗಳು ಗ್ರಾಹಕರ ಆಯ್ಕೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಸುರಕ್ಷಾ ಮಾನದಂಡಗಳು ಹೊಸ ಇವಿ ವಾಹನಗಳಿಗೆ ಉತ್ತಮ ಸುರಕ್ಷತೆ ನೀಡುತ್ತಿದೆಯಾದರೂ ಕೂಡಲೇ ಕಡ್ಡಾಯ ಜಾರಿ ಅವಶ್ಯಕತೆಯಿದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಇವಿ ವಾಹನಗಳಲ್ಲಿ ಈ ಹಿಂದೆ ನಡೆದ ಅಗ್ನಿ ಅವಘಡಗಳ ಕುರಿತಾಗಿ ಕುಲಂಕೂಶವಾಗಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಕೇಂದ್ರ ಸಾರಿಗೆ ಸಚಿವಾಲಯವು ಅಕ್ಟೋಬರ್ 1ರಿಂದಲೇ ಹೊಸ ಸುರಕ್ಷಾ ಮಾನದಂಡಗಳನ್ನು ಜಾರಿಗೆ ತರಲು ಮುಂದಾಗಿದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಇವಿಗಳಲ್ಲಿ ಸ್ಫೋಟಗಳಿಗೆ ಕೆಲವು ಬಾರಿ ಇತರೆ ತಾಂತ್ರಿಕ ದೋಷಗಳು ಕಾರಣವಾದರೆ ಇನ್ನು ಕೆಲವು ಪ್ರಕರಣಗಳಲ್ಲಿ ಬೇಸಿಗೆಯ ಉಷ್ಣತೆಯ ಹೆಚ್ಚಾಗಿರುವುದು ಕಾರಣವೆಂದು ವಾದಿಸಲಾಗಿತ್ತು. ಆದರೆ ಘಟನೆಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿದ್ದ ಸಾರಿಗೆ ಸಚಿವಾಯವು ಮತ್ತು ನಿಖರ ಕಾರಣವಾಗಳು ಮತ್ತು ಪರಿಹಾರ ಕ್ರಮಗಳ ಕುರಿತು ಸಮಿತಿಗೆ ಶಿಫಾರಸುಗಳನ್ನು ನೀಡುವಂತೆ ಮನವಿ ಮಾಡಿತ್ತು.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದ ಸೂಚನೆ ಮೇರೆಗೆ ಎಆರ್‌ಸಿಎಲ್ ಹೈದರಾಬಾದ್ ನಿರ್ದೇಶಕ ಟಾಟಾ ನರಸಿಂಗ್ ರಾವ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಧಾನ ಸಂಶೋಧನಾ ವಿಜ್ಞಾನಿ ಸುಬ್ಬಾ ರೆಡ್ಡಿ, ಸೆಂಟರ್ ಫಾರ್ ಫೈರ್, ಎಕ್ಸ್‌ಪ್ಲೋಸಿವ್ ಮತ್ತು ಎನ್ವಿರಾನ್‌ಮೆಂಟ್ ಸೇಫ್ಟಿ (ಸಿಎಫ್‌ಇಇಎಸ್) ವಿಜ್ಞಾನಿ ಎಂ.ಕೆ ಜೈನ್ ಮತ್ತು ಐಐಟಿ ಮದ್ರಾಸ್ ಪ್ರೊಫೆಸರ್ ದೇವೇಂದ್ರ ಜಾಲಿಹಾಲ್ ಅವರನ್ನು ಒಳಗೊಂಡ ತಜ್ಞರ ಸಮಿತಿಯು ಘಟನೆಯನ್ನು ಕುಲಂಕೂಶವಾಗಿ ಪರಿಶೀಲನೆ ಮಾಡಿ ಬೆಂಕಿ ಅವಘಡಗಳಿಗೆ ಕಾರಣಗಳು ಮತ್ತು ಅಪಘಡಗಳನ್ನು ತಡೆಯಲು ಹಲವಾರು ಕಠಿಣ ಶಿಫಾರಸ್ಸು ಸಲ್ಲಿಸಿದ್ದಾರೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ತಜ್ಞರ ಸಮಿತಿ ಶಿಫಾರಸ್ಸು ಆಧರಿಸಿ ಬ್ಯಾಟರಿ ಸುರಕ್ಷತಾ ಮಾನದಂಡಗಳಲ್ಲಿ ಹೆಚ್ಚುವರಿ ಸುರಕ್ಷತಾ ಅವಶ್ಯಕತೆಗಳನ್ನು ಪ್ರತಿಪಾದಿಸಲಾಗಿದ್ದು, ಈ ಹೊಸ ನಿಯಮಾವಳಿಗಳು ಅಕ್ಟೋಬರ್ 1 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿವೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಕೇಂದ್ರ ಸರ್ಕಾರವು ಜಾರಿಗೆ ಮಾಡಲಾಗುತ್ತಿರುವ ತಿದ್ದುಪಡಿಗೊಳಪಡಿಸಲಾದ ಬ್ಯಾಟರಿ ಸುರಕ್ಷತಾ ಮಾನದಂಡಗಳು ಬ್ಯಾಟರಿ ಸ್ಫೋಟಗಳನ್ನು ಗಣನೀಯವಾಗಿ ತಗ್ಗಿಸಲಿದ್ದು, ಉತ್ಪಾದನೆಯ ನಂತರ ಪ್ರತಿ ಇವಿ ಮಾದರಿಯನ್ನು ವಿವಿಧ ಹಂತಗಳಲ್ಲಿ ಪರಿಕ್ಷೆಗೊಳಪಡಿಸಿ ನಂತರವೇ ಮಾರಾಟ ಮಾಡಬೇಕಾಗುತ್ತದೆ.

ನಿಲ್ಲದ ಇವಿ ವಾಹನಗಳ ದುರಂತ: ಶೋರೂಂನಲ್ಲಿ ನಡೆದ ಬೆಂಕಿ ಅವಘಡಕ್ಕೆ 8 ಜನ ಬಲಿ!

ಇವಿ ವಾಹನಗಳ ಬ್ಯಾಟರಿಯಲ್ಲಿ ಕಂಡುಬರುವ ಬೆಂಕಿ ಅವಘಡಗಳಿಗೆ ಇನ್ಮುಂದೆ ವಾಹನ ತಯಾರಕ ಮತ್ತು ಬ್ಯಾಟರಿ ಪೂರೈಕೆ ಸಂಸ್ಥೆಗಳೇ ಹೊಣೆಯಾಗಬೇಕಿದ್ದು, ಬ್ಯಾಟರಿಗಳಲ್ಲಿ ಸುಧಾರಿತ ಕೂಲಿಂಗ್ ತಂತ್ರಜ್ಞಾನ ಸೇರಿದಂತೆ ಪ್ರಮುಖ ಬದಲಾವಣೆಗಳಿಗೆ ಶಿಫಾರಸ್ಸು ಮಾಡಲಾಗಿದೆ.

More from DriveSpark

Article Published On: Tuesday, September 13, 2022, 18:39 [IST]
English summary
Massive fire in electric vehicle showroom 8 people killed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+