ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

Posted By:

ಲಕ್ಷಗಟ್ಟಲೆ ರುಪಾಯಿ ಖರ್ಚು ಮಾಡಿ ಜನರು ಐಷಾರಾಮಿ ಮರ್ಸಿಡಿಸ್ ಬೆಂಝ್ ಗಾಡಿಗಳನ್ನು ಖರೀದಿಸುತ್ತಾರೆ. ಹಾಗಿರುವಾಗ ಈ ಆಡಂಬರದ ಕಾರನ್ನು ಒಂದು ಕೋಳಿಗೆ ಹೋಲಿಸಿದರೆ ಹೇಗೆ..?

ಹೌದು, ಸ್ವತ: ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಬಿಡುಗಡೆ ಮಾಡಿರುವ ನೂತನ ಪ್ರಚಾರ ವೀಡಿಯೊದಲ್ಲಿ ಈ ಕುರಿತು ವಿವರಣೆ ನೀಡಲಾಗಿದೆ.

ಅಂದ ಹಾಗೆ ಸದಾ ನೂತನ ತಂತ್ರಗಾರಿಕೆಯನ್ನು ಪ್ರಸ್ತುತಪಡಿಸುವುದರಲ್ಲಿ ಖ್ಯಾತಿ ಪಡೆದಿರುವ ಮರ್ಸಿಡಿಸ್ ಬೆಂಝ್, ತನ್ನ ನೂತನ 'ಮ್ಯಾಜಿಕ್ ಬಾಡಿ ಕಂಟ್ರೋಲ್' ಸಸ್ಫೆಷನ್ ತಂತ್ರಜ್ಞಾನವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಕೋಳಿಗಳ ಜತೆ ಹೋಲಿಸಲಾಗಿದೆ.

ಅಷ್ಟಕ್ಕೂ ಸಸ್ಫೆಷನ್ ಎಂದರೇನು? ಹಾಗೆಯೇ ಬೆಂಝ್ ಚಿಕನ್ ಟೆಕ್ನಾಲಜಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ಸಸ್ಫೆಷನ್

ಸಸ್ಫೆಷನ್

ಸುಲಭವಾಗಿ ವಿವರಿಸಬಹುದಾದರೆ ಒರಟು ರಸ್ತೆಯಲ್ಲಿ ಚಲಿಸುವಾಗ ಘರ್ಷಣೆಯನ್ನು ತಗ್ಗಿಸಲು ವಾಹನದ ಚಕ್ರಗಳಿಗೆ ಅಳವಡಿಸಲಾದ ಸಲಕರಣೆಯನ್ನು ಸಸ್ಫೆಷನ್ ಎನ್ನುತ್ತಾರೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಇದೀಗ 2014 ಮರ್ಸಿಡಿಸ್ ಬೆಂಝ್ ಎಸ್‌550 ಕಾರಿಗೆ ನೂತನ ಸಸ್ಫೆಷನ್ ತಂತ್ರಜ್ಞಾನವನ್ನು ಆಳವಡಿಸಲಾಗುತ್ತಿದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಇದರಂತೆ ಬೆಂಝ್ ಬಿಡುಗಡೆ ಮಾಡಿರುವ ತಾಜಾ ಜಾಹೀರಾತಿನಲ್ಲಿ ಕೋಳಿಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸುವ ಮೂಲಕ ನೂತನ ಸಸ್ಫೆಷನ್ ತಂತ್ರಜ್ಞಾನವನ್ನು ಉತ್ತೇಜಿಸುವ ಪ್ರಯತ್ನ ಮಾಡಲಾಗಿದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಬೆಂಝ್ ನೂತನ ಯೋಜನೆಗೆ ಸಾಮಾಜಿಕ ತಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಜಾಹಿರಾತಿಗಾಗಿ ವಿಶೇಷವಾಗಿ ರೂಪಿಸಲಾದ ಆಡಿಯೋ ಸಿಸ್ಟಂ ಮನಸೆಳೆಯುತ್ತಿದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಒಟ್ಟಿನಲ್ಲಿ ಬೆಂಝ್‌ನ ನೂತನ ಮ್ಯಾಜಿಕ್ ಬಾಡಿ ಕಂಟ್ರೋಲ್ ಪ್ರಯಾಣಿಕರಿಗೆ ಆರಾಮದಾಯಕ ಪಯಾಣವನ್ನು ಖಾತ್ರಿಪಡಿಸುತ್ತಿದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಬೆಂಝ್ ಮ್ಯಾಜಿಕ್ ಬಾಡಿ ಕಂಟ್ರೋಲ್ ಎಲ್ಲ ರಸ್ತೆದಲ್ಲಿಯೂ ಪ್ರಯಾಣಿಕರಿಗೆ ಸ್ಥಿರತೆಯ ಪ್ರಯಾಣದ ಅನುಭವ ನೀಡುತ್ತದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಈ ಮೂಲಕ ಬೆಂಝ್ ಇಂಟೆಲಿಜೆಟ್ ಡ್ರೈವ್ ಪ್ರಚಾರ ಮಾಡುವ ಪ್ರಯತ್ನ ಮಾಡಲಾಗಿದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ಅದೇ ಹೊತ್ತಿಗೆ ಬೆಂಝ್ ಮ್ಯಾಜಿಕ್ ರೈಡ್ ಕಂಟ್ರೋಲ್, ರಸ್ತೆಗಳಲ್ಲಿ ಉಬ್ಬು ಮುಂತಾದ ಇಕ್ಕಟ್ಟಾದ ಪ್ರದೇಶದ ಎದುರಾದಾಗ ಚಾಲಕ ಹಾಗೂ ವಾಹನ ಚಾಸೀಸ್‌ಗೆ ಸ್ಥಿರತೆ ಪ್ರದಾನ ಮಾಡುತ್ತದೆ.

ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?

ರಸ್ತೆ ಅಡ್ಡಾದಿಡ್ಡಿಗಳನ್ನು ಕ್ಷಿಪ್ರವಾಗಿ ವೀಕ್ಷಿಸುವ ನಿಟ್ಟಿನಲ್ಲಿ ವಿಂಡ್ ಶೀಲ್ಡ್ ಮೇಲ್ಗಡೆ ಸೆನ್ಸಾರ್, ಮ್ಯಾಗ್ನಿಟಿಕ್ ಡ್ಯಾಂಪರ್ ಹಾಗೂ ಕ್ಯಾಮೆರಾಗಳನ್ನು ಲಗತ್ತಿಸಲಾಗಿರುತ್ತದೆ. ಇದು ಪ್ರತಿ ಸೆಕೆಂಡುನಲ್ಲೂ ಸಸ್ಫೆಷನ್ 100ಕ್ಕಿಂತಲೂ ಹೆಚ್ಚು ಸಲ ಹೊಂದಾಣಿಸಲು ನೆರವಾಗಲಿದೆ. ಒಟ್ಟಿನಲ್ಲಿ 60 ಲಕ್ಷದಷ್ಟು ದುಬಾರಿ ಬೆಲೆಬಾಳುವ ಬೆಂಝ್‌ಗೆ ಚಿಕನ್ ತಂತ್ರಜ್ಞಾನ ಆಳವಡಿಸಲಾಗುತ್ತಿದೆ.

ವೀಡಿಯೊ ವೀಕ್ಷಿಸಿ

English summary
As part of Mercedes-Benz Intelligent Drive MAGIC BODY CONTROL ensures optimum driving comfort.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark