ಕೇವಲ 7 ಲಕ್ಷ ಬೆಲೆಯ ಎಲೆಕ್ಟ್ರಿಕ್ ಕಾರಿಗೆ 1 ಕೋಟಿ ಖರ್ಚು ಮಾಡಿದ ಭೂಪ!

ಅಂಬಾನಿ ಕುಟುಂಬ, ಸಿನಿಮಾ ನಟರು, ಕ್ರಿಕೆಟಿಗರು, ಉದ್ಯಮಿಗಳು ತಮ್ಮ ವಾಹನಗಳನ್ನು ಇತರರಂತಲ್ಲದೇ ಪ್ರತ್ಯೇಕವಾಗಿರಿಸಲು ಬಯಸುತ್ತಾರೆ. ಇದಕ್ಕಾಗಿ ವಿಐಪಿ ನಂಬರ್ ಪ್ಲೇಟ್ ಹಾಗೂ ಕಸ್ಟಮೈಸ್ ಮಾಡಿಸಲು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ವಿಶೇಷ ಅಂದ್ರೆ ಇವರ ಕಾರುಗಳು ಸಹ ಅಷ್ಟೇ ದುಬಾರಿಯಾಗಿರುತ್ತವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರಿನ ನಂಬರ್‌ ಪ್ಲೇಟ್‌ಗಾಗಿ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿದ್ದಾರೆ. ಸಣ್ಣ ಬಜೆಟ್ ಕಾರಿಗೆ ವಿಐಪಿ ನಂಬರ್ ಪ್ಲೇಟ್ ಹಾಕುವ ಮೂಲಕ ಸಖತ್ ವೈರಲ್ ಆಗಿದ್ದಾರೆ.

ಈ ಕುರಿತ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ autojournal_india ಹಂಚಿಕೊಂಡಿದೆ. ಈ ಪೋಸ್ಟ್‌ನ ಮಾಹಿತಿಯ ಪ್ರಕಾರ, ಈ ನೋಂದಣಿ ಸಂಖ್ಯೆಯ ಬೆಲೆ 1 ಕೋಟಿ ರೂ. ಇದೆ. ಆದ್ರೆ ವಾಹನದ ಬೆಲೆ ಕೇವಲ 7 ಲಕ್ಷ ರೂ. ಆಗಿದೆ. ಈ ದುಬಾರಿ ವಿಐಪಿ ನಂಬರ್‌ ಪ್ಲೇಟ್ ಅನ್ನು ಎಂಜಿ ಮೋಟಾರ್‌ ಕಂಪನಿ ನೀಡುವ ಅತ್ಯಂತ ಅಗ್ಗದ ಬೆಲೆಯ ಕಾಮೆಟ್ ಇವಿ ಕಾರಿಗೆ ಅಳವಡಿಸಲಾಗಿದೆ.

mg-comet-owner-spent-rs-1-crore-for-vip-number-plate

ಇದು ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು. ಕಾರಿನ ಮೌಲ್ಯಕ್ಕಿಂತ ಸುಮಾರು 14 ಪಟ್ಟು ಮೌಲ್ಯದ ಸಂಖ್ಯೆಯನ್ನು ಹೊಂದಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಪೋಸ್ಟ್‌ನಲ್ಲಿ ಹೇಳಿದಂತೆ ಇದಕ್ಕೆ ನಿಜವಾಗಿಯೂ ಒಂದು ಕೋಟಿ ಖರ್ಚಾಗಿರುವ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ ಇಂತಹ ಸಿಂಗಲ್ ಡಿಜಿಟ್ ನಂಬರ್‌ಗಳನ್ನು ಪಡೆಯಬೇಕಾದರೇ ಸಾಮನ್ಯವಾಗಿಯೇ ತುಂಬಾ ವೆಚ್ಚಿಸಬೇಕಾಗುತ್ತದೆ.

ಸಣ್ಣ ಕಾರಿನ ವಿಶೇಷತೆಗಳು: ಎಂಜಿ ಕಾಮೆಟ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಾಗಿದ್ದು, ಇದನ್ನು ಮುಖ್ಯವಾಗಿ ನಗರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಸಣ್ಣ ಕಾರಾಗಿರುವುದರಿಂದ, 4 ಜನರಿಗೆ ಮಾತ್ರ ಸ್ಥಳಾವಕಾಶ ನೀಡಲಾಗಿದೆ. ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 230 ಕಿ.ಮೀ ಓಡಿಸಬಹುದು. ಸ್ಟ್ಯಾಂಡರ್ಡ್ ಎಸಿ ಚಾರ್ಜರ್‌ನೊಂದಿಗೆ, ಕೇವಲ 7 ಗಂಟೆಗಳಲ್ಲಿ ಪೂರ್ಣ ಜಾರ್ಜ್ ಮಾಡಬಹುದು.

mg-comet-owner-spent-rs-1-crore-for-vip-number-plate

ಇದು 17.3 ಕಿಲೋವ್ಯಾಟ್ ಐಪಿ 67-ರೇಟೆಡ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. 41 ಬಿಹೆಚ್‌ಪಿ ಪವರ್ ಮತ್ತು 110 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಮೂರು ಡ್ರೈವಿಂಗ್ ಮೋಡ್‌ಗಳನ್ನು ಸಹ ನೀಡಲಾಗಿದೆ. ಎಂಜಿ ಕಾಮೆಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.99 ಲಕ್ಷದಿಂದ ರೂ.9.53 ಲಕ್ಷ (ಎಕ್ಸ್‌ ಶೋರೂಂ) ಗಳಾಗಿದೆ.

ಪ್ರಸ್ತುತ ಎಂಜಿ ಮೋಟಾರ್ ಭಾರತದಲ್ಲಿ ಝಡ್ಎಸ್ ಇವಿ ಮತ್ತು ಕಾಮೆಟ್ ಎಂಬ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮೊದಲನೆಯದು ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ಮತ್ತೊಂದೆಡೆ ಕಾಮೆಟ್ ಸಣ್ಣ ಮೈಕ್ರೊ ಕಾರಾಗಿದೆ. ಇದನ್ನು ಮುಖ್ಯವಾಗಿ ನಗರ ಬಳಕೆಗಾಗಿ ಅತ್ಯಂತ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ, ಎಂಜಿ ಮೋಟಾರ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಪೋರ್ಟ್‌ಫೊಲಿಯೊವನ್ನು ವಿಸ್ತರಿಸಲು ನೊಡುತ್ತಿದೆ. ಇತ್ತೀಚಗೆ ತನ್ನ ಸಿಯುವಿ ವಿಭಾಗದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವ ಕುರಿತು ಘೋಷಿಸಿದೆ. ಇದು ಪ್ರೀಮಿಯಂ ಫ್ಯಾಮಿಲಿ ಕಾರಾಗಿದ್ದು, ವಿಂಡ್ಸರ್ ಎಂಬ ಹೆಸರನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 26, 2024, 13:58 [IST]
English summary
Mg comet owner spent rs 1 crore for vip number plate
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+