ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಕಳೆದ ವಾರವಷ್ಟೇ ಬಿಎಂಡಬ್ಲ್ಯು ಸಂಸ್ಥೆಯು ತನ್ನ ದುಬಾರಿ ಬೆಲೆಯ ಮೊದಲ 7 ಸೀಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಖರೀದಿ ಪ್ರಕ್ರಿಯೆ ಇದೀಗ ಜೋರಾಗಿದೆ. ಹತ್ತು ಹಲವು ಹೊಸ ತಂತ್ರಜ್ಞಾನಗಳ ಪ್ರೇರಣೆ ಹೊಂದಿರುವ ಎಕ್ಸ್7 ಕಾರು ಖರೀದಿಗಾಗಿ ಈಗಾಗಲೇ ಹಲವಾರು ಉದ್ಯಮಿಗಳು, ನಟರು ಬುಕ್ಕಿಂಗ್ ಸಲ್ಲಿಸಿದ್ದು, ಬಹುಭಾಷಾ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕೂಡಾ ಎಕ್ಸ್7 ಕಾರನ್ನು ಇದೀಗ ತಮ್ಮದಾಗಿಸಿಕೊಂಡಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ನಟನೆ, ಚಿತ್ರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಗೋಪಿ ಸುಂದರ್ ಸದ್ಯ ದಕ್ಷಿಣ ಭಾರತದ ಬಹುತೇಕ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದು, ಬಾಲಿವುಡ್‌ನಲ್ಲೂ ಕೂಡಾ ಬಹುಬೇಡಿಕೆಯ ಚಿತ್ರ ಸಾಹಿತಿಯಾಗಿದ್ದಾರೆ. ಹಿನ್ನಲೆ ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿರುವ ಗೋಪಿ ಸುಂದರ್, 2006ರಲ್ಲಿ ಮಲಯಾಳಂನಲ್ಲಿ ಬಂದ ನೋಟ್‌ಬುಕ್ ಚಿತ್ರದ ಮೂಲಕ ಸಂಗೀತ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ತದನಂತರ ನಟನಾಗಿ, ಚಿತ್ರ ಸಾಹಿತಿಯಾಗಿ, ಹಿನ್ನಲೆ ಸಂಗೀತಗಾರನಾಗಿ ಮಿಂಚಿರುವ ಗೋಪಿ ಸುಂದರ್ ಇದುವರೆಗೆ ಸುಮಾರು 150 ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಇದೀಗ ಬಿಎಂಡಬ್ಲ್ಯು ಸಂಸ್ಥೆಯ ಎಕ್ಸ್7 ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಬಿಎಂಡಬ್ಲ್ಯು ನಿರ್ಮಾಣದ ಮೊದಲ 7 ಸೀಟರ್ ಎಸ್‌ಯುವಿ ಮಾದರಿಯಾದ ಎಕ್ಸ್7 ಐಷಾರಾಮಿ ಕಾರು ಹಲವು ವಿಶೇಷತೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಡಿಸೈನ್ ಫ್ಯೂರ್ ಎಕ್ಸ್‌ಲೆನ್ಸ್ ತಂತ್ರಜ್ಞಾನ ವಿನ್ಯಾಸ ಹೊಂದಿರುವ ಹೊಸ ಎಕ್ಸ್7 ಕಾರು ಎಕ್ಸ್ ಸರಣಿ ಕಾರು ಮಾದರಿಗಳಲ್ಲೇ ಅತಿ ವಿನೂತ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

2018ರ ಅಕ್ಟೋಬರ್ ಆರಂಭದಲ್ಲೇ ಭಾರತವನ್ನು ಹೊರತುಪಡಿಸಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಎಕ್ಸ್7 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಆದರೆ ದೇಶಿಯ ಮಾರುಕಟ್ಟೆಗಾಗಿ ಕೆಲವು ಬದಲಾವಣೆ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಇದೀಗ ಎಕ್ಸ್7 ಮಾದರಿಯು ಬಿಡುಗಡೆಯಾಗಿದ್ದು, ಐಷಾರಾಮಿ ಎಸ್‌ಯುವಿ ಕಾರು ಪ್ರಿಯರ ಬೇಡಿಕೆಯೆಂತೆ ಎಕ್ಸ್7 ಆವೃತ್ತಿಯನ್ನು ಎಕ್ಸ್‌ಡ್ರೈವ್ 40ಐ ಮತ್ತು ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಎನ್ನುವ ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯನ್ನ ರೂ.98.90 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಎಕ್ಸ್‌ಡ್ರೈವ್ 40ಐ ಮತ್ತು ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಎರಡು ಮಾದರಿಗಳು ಒಂದೇ ರೀತಿಯಾಗಿ ಬೆಲೆ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಜನಪ್ರಿಯ ಎಕ್ಸ್ ರೇಂಜ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ 7 ಸೀಟರ್ ಆಸನವುಳ್ಳ ಎಕ್ಸ್7 ಕಾರು ಮಾದರಿಯನ್ನು ಹೊರತರುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ಎಕ್ಸ್‌ಡ್ರೈವ್ 40ಐ ಮಾದರಿಯು ಪೆಟ್ರೋಲ್ ಎಂಜಿನ್‌ನಲ್ಲಿ ಮತ್ತು ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಮಾದರಿಯು ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಎಂಜಿನ್ ಸಾಮರ್ಥ್ಯ

ಎಕ್ಸ್7 ಕಾರು ಎಕ್ಸ್‌ಡ್ರೈವ್ 40ಐ ಮತ್ತು ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಮಾದರಿಗಳಲ್ಲಿ ಖರೀದಿ ಲಭ್ಯವಿರಲಿದ್ದು, ಪೆಟ್ರೋಲ್ ಮಾದರಿಯು 3-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು ಕೂಡಾ 3.0-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಇದರಲ್ಲಿ ಪೆಟ್ರೋಲ್ ಮಾದರಿಯು 335-ಬಿಎಚ್‌ಪಿ, 450-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಮಾದರಿಯು 260-ಬಿಎಚ್‌ಪಿ, 620-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎರಡು ಮಾದರಿಯಲ್ಲೂ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಇನ್ನು ಎಕ್ಸ್7 ಕಾರು 5151-ಎಂಎಂ ಉದ್ದ, 1805-ಎಂಎಂ ಎತ್ತರ, 2000-ಎಂಎಂ ಅಗಲ ಮತ್ತು 3105-ಎಂಎಂ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್6 ಕಾರಿಗಿಂತಲೂ 9-ಎಎಂ ಹೆಚ್ಚಿನ ಉದ್ದ ಮತ್ತು 3 ಇಂಚಿನಷ್ಟು ಕಡಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿರಲಿದ್ದು, ಎಕ್ಸ್‌ ಸ್ಯಾಂಡ್, ಎಕ್ಸ್ ಗ್ರ್ಯಾವೆಲ್, ಎಕ್ಸ್‌ ರಾಕ್ಸ್ ಮತ್ತು ಎಕ್ಸ್‌ ಸ್ನೋ ಎನ್ನುವ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಹೊಸ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲೂ ಸಾಕಷ್ಟು ಗಮನಸೆಳೆಯಲಿವೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಹಾಗೆಯೇ ಎಕ್ಸ್7 ಎಸ್‍ಯುವಿ ಕಾರು ಮುಂಭಾಗದಲ್ಲಿ ಚೌಕಾಕಾರದ ಮತ್ತು ಉದ್ದನೆಯ ಸಿಗ್ನೇಚರ್ ಗ್ರೀಲ್ ಅನ್ನು ಪಡೆದುಕೊಂಡಿರಲಿದ್ದು, ಬಿಎಂಡಬ್ಲ್ಯು ನಿರ್ಮಾಣದ ಬೇರೆ ಯಾವುದೇ ಕಾರಿಗೂ ನೀಡಲಾಗದ ಗ್ರೀಲ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಹಾಗೆಯೇ ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಸಹ ಒದಗಿಸಲಾಗಿದೆ. ಭವಿಷ್ಯದಲ್ಲಿ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳನ್ನು ಆಯ್ಕೆಯಾಗಿ ನೀಡಲಾಗುವುದು ಎನ್ನಲಾಗಿದ್ದು, ಈ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳು ಸಾಧಾರಣ ಎಲ್ಇಡಿ ಹೆಡ್‍ಲ್ಯಾಂಪ್‍ಗಳಿಗಿಂತಲೂ ಎರಡು ಪಟ್ಟು ಅಧಿಕ ಬೆಳಕನ್ನು ಹೊರಸೂಸಬಲ್ಲವು.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಇದರೊಂದಿಗೆ ಕಾರಿನ ಹಿಂಭಾಗದಲ್ಲಿ 2 ಸೆಕ್ಷನ್ ವಿಭಜಿತ ಟೈಲ್‍ಗೇಟ್ ವಿನ್ಯಾಸವನ್ನು ನೀಡಲಾಗಿದ್ದು, 326-ಲೀಟರ್‍‍ನಷ್ಟು ಬೂಟ್ ಸ್ಪೇಸ್ ಅನ್ನು ಇದು ಪಡೆದುಕೊಳ್ಳಲಿದೆ. ಇದಲ್ಲದೇ ಎರಡನೆಯ ಮತ್ತು ಮೂರನೆಯ ಸೀಟ್ ಅನ್ನು ಫೋರ್ಡ್ ಮಾಡಿದಲ್ಲಿ ಸುಮಾರು 2,120-ಲೀಟರ್‍‍ನಷ್ಟು ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಕಾರಿನ ಒಳವಿನ್ಯಾಸ

ಮೇಲೆ ಹೇಳಿದ ಹಾಗೆ ಇದು ಬಿಎಂಡಬ್ಲ್ಯು ಮೊದಲ 7 ಆಸನವುಳ್ಳ ಮೊದಲ ಎಸ್‍ಯುವಿ ಕಾರಾಗಿದ್ದು, ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಮಧ್ಯದಲ್ಲಿರುವ ಸೀಟ್‍‍ಗಳನ್ನು ತುಸು ದೊಡ್ಡದಾಗಿಯೇ ನೀಡಲಾಗಿದೆ. ಜೊತೆಗೆ ಈ ಕಾರು ಫೋರ್ ಜೋನ್ ಕ್ಲೈಮೇಟ್ ಕಂಟ್ರೋಲ್, ಏಂಬಿಯೆಂಟ್ ಲೈಟ್ನಿಂಗ್, 3 ಸೆಕ್ಷನ್ ಪನೋರಮಿಕ್ ಗ್ಲಾಸ್ ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದ್ದು, 12-ಇಂಚಿನ ಟ್ವಿನ್ ಸ್ಕ್ರೀನ್‍ಗಳನ್ನು ಸಹ ಒದಗಿಸಲಾಗಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್7 ಖರೀದಿಸಿದ ಸಂಗೀತ ನಿರ್ದೇಶಕ ಗೋಪಿ ಸುಂದರ್

ಸುರಕ್ಷತೆಗೂ ಎಕ್ಸ್7 ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕಿಂಗ್ ಕಂಟ್ರೊಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಕ್ರ್ಯಾಶ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್, ಎಮರ್ಜೆನ್ಸಿ ವೀಲ್ಹ್ ಮತ್ತು 6 ಏರ್ ಬ್ಯಾಗ್‌ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Music director Gopi Sundar buy new BMW x7. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X