ಕೆಲವು ದಿನಗಳ ಹಿಂದೆಯಷ್ಟೇ ಆಯೋಜನೆಯಾಗಬೇಕಾಗಿದ್ದ ನಂದಿ ಹಿಲ್ ಕ್ಲೈಂಬ್ ರೇಸ್ ಕಾರಣಾಂತರಗಳಿಂದಾಗಿ ರದ್ದುಗೊಂಡಿತ್ತು. ಇದರೊಂದಿಗೆ ಭಾರಿ ನಿರೀಕ್ಷೆಗಳೊಂದಿಗೆ ತಮ್ಮ ತಮ್ಮ ಕಾರು, ಬೈಕ್‌ಗಳೊಂದಿಗೆ ಆಗಮಿಸಿದ್ದ ರೇಸರ್‌ಗಳಿಗೆ ಸಾಕಾಷ್ಟು ನಿರಾಸೆ ಕಾದಿತ್ತು.
ಹಾಗಿದ್ದರೂ ಮೊದಲ ದಿನವಾದ ಜನವರಿ 21ರಂದು ರೇಸಿಂಗ್ ಅದ್ಭುತವಾಗಿ ನಡೆದಿತ್ತು. ತದಾ ಬಳಿಕ ನಡೆದ ಬೈಕ್ ಅವಘಡದ ಹಿನ್ನಲೆಯಲ್ಲಿ ರೇಸ್ ಸ್ಥಗಿತಗೊಳಿಸಲಾಗಿತ್ತು []. ಇದರೊಂದಿಗೆ ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ನಂದಿ ಬೆಟ್ಟಕ್ಕೆ ಆಗಮಿಸಿದ್ದ ರೇಸರ್‌ಗಳಿಗೆ ಅಪಾರ ನಷ್ಟವುಂಟಾಗಿತ್ತು.
ಇಷ್ಟೆಲ್ಲ ಘಟನೆಗಳ ನಡುವೆಯೂ ನಂದಿ ಬೆಟ್ಟ ರೇಸಿಂಗ್ ರೋಚಕ ಕ್ಷಣಗಳನ್ನು ಸೆರೆ ಹಿಡಿಯಲು ತೆರಳಿದ್ದ ನಮ್ಮ ತಂಡದವರಿಗೂ ಕೆಲವೊಂದು ಅಚ್ಚರಿ ಕಾದಿತ್ತು. ಇಂತಹ ರೋಮಾಂಚನ ಕ್ಷಣವನ್ನು ಕೆಳಗಿನ ಫೋಟೊ ಗ್ಯಾಲರಿ ಮೂಲಕ ನಿಮ್ಮೊಂದಿಗೂ ಹಂಚಿಕೊಳ್ಳಲು ನಾವು ಬಯಸುತ್ತಿದ್ದೇವೆ. ಇದಕ್ಕಾಗಿ ಮುಂದುವರಿಯಿರಿ...
ಮೊದಲ ದಿನ ಅಭ್ಯಾಸದಲ್ಲಿ ನಿರತರಾದ ಬೈಕ್ ರೇಸರ್
ನುರಿತ ಬೈಕ್ ರೇಸರ್‌ನ ಕ್ಲಾಸಿಕ್ ಲುಕ್
ಗುರಿ ಮಾತ್ರ ಮುಖ್ಯ
ಕಡಿದಾದ ತಿರುವು ಲೆಕ್ಕಕ್ಕಿಲ್ಲ.
ಅಯ್ಯೋ ಸ್ಕಿಡ್ ಆಯ್ತು ಬೈಕ್ - ರೇಸರ್ ಅಪಾಯದಿಂದ ಪಾರು
ಡರ್ಟ್ ರೈಡಿಂಗ್ ಕೌಶಲ್ಯ ಮೆರೆದ ರೇಸರ್
ಸಮತೋಲನ ಕಾಪಾಡಿಕೊಳ್ಳುತ್ತಿರುವ ರೇಸರ್
ನಂದಿ ಬೆಟ್ಟ ರೇಸ್ ರದ್ದಾಗಲಿರುವ ಕಾರಣಗಳಲ್ಲಿ ಇದೂ ಒಂದು!
ಮೋಡವನ್ನು ಬೆನ್ನತ್ತಿ ರೇಸರುಗಳ ದಂಡು
ಮೋಡಿಫೈಡ್ ಕಾರು
ರಿಯರ್ ಡ್ರೈವ್ ಹ್ಯಾಚ್‌ಬ್ಯಾಕ್
ಕಾರಿನ ಮುಂಭಾಗದಲ್ಲೇ ಎಕ್ಸಾಸ್ಟ್ ರಂಧ್ರ
ರೇಸ್ ಕಾರಾಗಿ ಪರಿವರ್ತನೆಯಾದ ಝೆನ್
ಅತಿ ವಿರಳವಾಗಿ ಕಾಣಸಿಗುವ ಝನ್ ಕಾರುಗಳಲ್ಲಿ ಇದೂ ಒಂದು.
ಮಾರುತಿ ಎಸ್ಟೀಮ್ ಶೋ
ವೇಗಕ್ಕೆ ಮಗದೊಂದು ಹೆಸರು ನಂದಿ ಬೆಟ್ಟ
ಕ್ಷಮಿಸಿ ನಾವು ಹೀಗೆ...
ಅಲ್ಲಿ ಎಲ್ಲವೂ ರೋಚಕ ಅತ್ಯಾದ್ಭುತ
ಎಲ್ಲರ ಕುತೂಹಲಕ್ಕೆ ಕಾರಣವಾದ ಅಪೂರ್ವ ಕಾರು
ಕಾರು, ಬೈಕ್ ಮಾತ್ರವಲ್ಲ ಅಲ್ಲಿ ಡ್ರಾನ್ ಪ್ರಮುಖ ಆಕರ್ಷಣೆಯಾಗಿತ್ತು.
ಅಂದತೆಯ ಪ್ರತೀಕ ಮಾರುತಿ
ಮಗದೊಂದು ನೋಟ
ಬೆಂಗಳೂರು ನಗರದಲ್ಲೂ ರೇಸ್‌ಗೆ ಕೊರತೆಯಿಲ್ಲ
ಹಸಿರು ತೋರಣದೊಂದಿಗೆ ಬಂದಿಳಿದ ಮಹಾರಾಜ
ಇಕೊಸ್ಪೋರ್ಟ್ ನೋಟ ಬದಲಾಯ್ತು
ರೇಸ್ ರದ್ದಾಗಿದ್ದರಿಂದ ನಿರಾಸೆಯೊಂದಿಗೆ ಮರಳಿದ ರೇಸರ್‌ಗಳು.
ತಡೆಯಿರಿ ನಂದಿ ಬೆಟ್ಟದಲ್ಲಿ ಇದೆಲ್ಲ ಸಾಮಾನ್ಯ ಬಿಡಿ
ಕಣ್ಮಣ ಸೆಳೆದ ಮತ್ತೊಂದು ರೇಸ್ ಕಾರು
ಸ್ವಲ್ವ ತಾಳಿರಿ, ನಾವು ಇದ್ದೀವಿ ಜೊತೆಗೆ...ರೇಸರ್‌ಗಳ ಹಿಂದೆ ದೌಡಾಯಿಸಿದ ಶ್ವಾನ ಪಡೆ
ಅಯ್ಯೋ. ತುಂಬಾ ಕಷ್ಟಪಟ್ಟು ರೇಸ್ ನೋಡಲು ಬಂದಿದ್ದೀವಿ. ರೇಸ್ ರದ್ದಾಗಿರುವುದು ತುಂಬಾನೇ ಬೇಸರವನ್ನುಂಟು ಮಾಡಿದೆ. ಮುಂದಿನ ವರ್ಷವಾದರೂ ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಹಾರೈಸೋಣವೇ! ಹ್ಯಾಪಿ ರೈಡಿಂಗ್...


Click it and Unblock the Notifications