ಭೀಕರ ಅಪಾಘತದಲ್ಲೂ ಬದುಕುಳಿದ ಮಾರುತಿ ಕಾರಿನ ಪ್ರಯಾಣಿಕರು: ಯಾವುದು ಈ ಕಾರು?
ಮಾರುತಿ ಸುಜುಕಿಯ ಸ್ವಿಫ್ಟ್ ದೀರ್ಘಕಾಲದಿಂದಲೇ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಈ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005 ರಲ್ಲಿ ಬಿಡುಗಡೆಯಾಗಿತ್ತು. ಮೂರನೇ ತಲೆಮಾರಿನ ಸ್ವಿಫ್ಟ್ ಕಾರನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಮಾದರಿಯು ಜಾಗತಿಕ ಮಾರುಕಟ್ಟೆ-ಸ್ಪೆಕ್ ಮಾದರಿಯಲ್ಲಿ ಲಭ್ಯವಿರುವ ಕೆಲವು ವೈಶಿಷ್ಟ್ಯಗಳಿಲ್ಲದೆ ಬಂದಿದೆ.
ಹೊಸ ಮಾರುತಿ ಸ್ವಿಫ್ಟ್ ಕಾರು ಇತ್ತೀಚೆಗೆ ಅಪಘಾತ ಸಂಭವಿಸಿದೆ. ಇದರ ವೀಡಿಯೋವನ್ನು Raftar 7811 ಎಂಬ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದ ಪಂಕಿ ರತನ್‌ಪುರ ರಸ್ತೆಯಿಂದ ಈ ಅಪಘಾತ ಸಂಭವಿಸಿದೆ. ಹೊಸ ಮಾರುತಿ ಸ್ವಿಫ್ಟ್ ಕಾರಿನ ಡ್ರೈವರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ಹೊಚ್ಚ ಹೊಸದಾಗಿದೆ ಮತ್ತು ಅದರಲ್ಲಿ ನಂಬರ್ ಪ್ಲೇಟ್ ಕೂಡ ಇಲ್ಲ.

ಅಪಘಾತ ಸಂಭವಿಸಿದಾಗ ಎಲ್ಲಾ ಏರ್‌ಬ್ಯಾಗ್ ಗಳು ಓಪನ್ ಆಗಿದೆ. ಅಪಘಾತ ಚಿತ್ರವನ್ನು ನೋಡಿದಾಗ ಮುಂಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಈ ಘಟನೆಯಲ್ಲಿ ಬಂಪರ್, ಫೆಂಡರ್, ಹೆಡ್‌ಲ್ಯಾಂಪ್, ಬಾನೆಟ್ ಇತ್ಯಾದಿಗಳು ವಿರೂಪಗೊಂಡಿವೆ. ಸ್ವಿಫ್ಟ್‌ನಲ್ಲಿದ್ದವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವೀಡಿಯೊ ಕ್ಲಿಪ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗಳು ಆಗದೇ ಸೇಫ್ ಆಗಿದೆ.
ಹೊಸ ಮಾರುತಿ ಸ್ವಿಫ್ಟ್ ಕಾರು LXi, VXi, VXi (O), ZXi, ಮತ್ತು ZXi+ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಹಿಂದಿನ ಸ್ವಿಫ್ಟ್ ಕಾರಿನ ಬೆಲೆಗೆ ಹೋಲಿಸಿದರೆ ಅಂದಾಜು 25,000 ರೂ. ದುಬಾರಿಯಾಗಿದೆ. ಈ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಂದಿದೆ.

ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ (AGS) ಅನ್ನು ಜೋಡಿಸಲಾಗಿದೆ.
ಈ ಮಾರುತಿ ಸ್ವಿಫ್ಟ್ ಕಾರಿನ ಮ್ಯಾನುವಲ್ ರೂಪಾಂತರವು 24.80km ನಷ್ಟು ಮೈಲೇಜ್ ನೀಡಿದರೆ, AGS ರೂಪಾಂತರವು 25.75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರಿನ ಬುಕ್ಕಿಂಗ್ ಗಾಇ ರೂ.11 ಸಾವಿರ ಮುಂಗಡ ಹಣವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು. ನೂತನ ಸ್ವಿಫ್ಟ್ ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹಲವರ ಕುಟುಂಬದ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಈ ಮಾರುತಿ ಸ್ವಿಫ್ಟ್ ಅನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಬ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.
ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ 9 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಅನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








