ಆಗಾಮಿ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

Posted By:

ಲಿಮೊಸಿನ್ ಕಾರಂತೂ ಜನಸಾಮಾನ್ಯರ ಕೈಗೆಟಕಲ್ಲ. ಅಮೆರಿಕ ಅಧ್ಯಕ್ಷರಂತಹ ಜಗತ್ತಿನ ಅಗ್ರಗಣ್ಯ ವ್ಯಕ್ತಿಗಳಲ್ಲಿ ಮಾತ್ರ ಲಿಮೊಸಿನ್ ಕಾರಿದೆ. ಅತ್ಯಂತ ಹೆಚ್ಚು ಭದ್ರತಾ ವ್ಯವಸ್ಥೆ ಹೊಂದಿರುವ ಕಾರುಗಳಲ್ಲಿ ಗುರುತಿಸಿಕೊಂಡಿರುವ ಲಿಮೊಸಿನ್ ಯಾವುದೇ ರೀತಿಯ ದಾಳಿಗಳನ್ನು ಎದುರಿಸುವಂತಹ ಶಕ್ತಿ ಹೊಂದಿರುತ್ತದೆ.

ಒಬಾಮ ಕಾರಿನಲ್ಲಿ ಒಂದು ಬ್ಯೂಟಿಫುಲ್ ರೈಡ್

ಅಂತಹ ಅಮೆರಿಕ ಅಧ್ಯಕ್ಷರ ಕಾರೀಗ ಹೈಟೆಕ್ ಟಚ್ ಪಡೆಯುತ್ತಿದೆ. ಹೌದು, ಆಗಾಮಿ ಅಮೆರಿಕ ಅಧ್ಯಕ್ಷರು ಹೈಟೆಕ್ ಲಿಮೊಸಿನ್ ಕಾರನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ಸದ್ಯ ಬರಾಕ್ ಒಬಾಮಾ ಬಳಿ 'ದಿ ಬೀಸ್ಟ್' ಎಂಬ ಗರಿಷ್ಟ ಸುರಕ್ಷಾ ತಂತ್ರಾಂಶ ಹೊಂದಿರುವ ಲಿಮೊಸಿನ್ ಕಾರಿದೆ. ಅಮೆರಿಕದ ರಹಸ್ಯ ದಳ ಹೇಳುವ ಪ್ರಕಾರ ಮುಂಬರುವ ಅಧ್ಯಕ್ಷರೂ ಇದಕ್ಕಿಂತಲೂ ಹೈಟೆಕ್ ತಂತ್ರಗಾರಿಕೆಗಳನ್ನು ಒಳಗೊಂಡಿರುವ ಲಿಮೊಸಿನ್ ಕಾರನ್ನು ಪಡೆಯಲಿದ್ದಾರೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ಈ ಸಂಬಂಧ ಬಿಡ್ ಕೋರಿಕೆ ಆರಂಭವಾಗಿದ್ದು, ಅಮೆರಿಕದ ಕಾರು ತಯಾರಕ ಸಂಸ್ಥೆಗಳು ತಮ್ಮ ಬಿಡ್ ಸಲ್ಲಿಸಬಹುದಾಗಿದೆ. ಆದರೆ ಅವುಗಳು ಆಧುನಿಕ ಆಟೋಮೋಟಿವ್ ತಂತ್ರಜ್ಞಾನ ಹಾಗೂ ಭದ್ರತೆಗಳನ್ನು ಹೊಂದಿರಬೇಕಾಗುತ್ತದೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ನಿಮ್ಮ ಮಾಹಿತಿಗಾಗಿ, ಸರಿ ಸುಮಾರು 30 ವರ್ಷಗಳಷ್ಟು ಅಮೆರಿಕ ಅಧ್ಯಕ್ಷೀಯ ಲಿಮೊಸಿನ್ ಕಾರುಗಳನ್ನು ಜನರಲ್ ಮೋಟಾರ್ಸ್‌ನ ಐಷಾರಾಮಿ ವಿಭಾಗ ಪೂರೈಸುತ್ತಿತ್ತು.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ಸದ್ಯ ಅಮೆರಿಕ ಅಧ್ಯಕ್ಷರ ಕಾರು ಹೇಗಿರಬೇಕು ಅದರಲ್ಲಿರುವ ಅಗತ್ಯಗಳೇನು ಎಂಬಿತ್ಯಾದಿ ವಿವರಗಳನ್ನು ಗೌಪ್ಯವಾಗಿಡಲಾಗಿದ್ದು, ಫೋರ್ಡ್ ಹಾಗೂ ಕ್ಲೈಸ್ಲರ್‌ಗಳಂತಹ ಸಂಸ್ಥೆಗಳು ಸವಾಲುಗಳನ್ನು ಸ್ವೀಕರಿಸಲು ಹಾಗೆಯೇ ವಿಶ್ವದ ಅತ್ಯುನ್ನತ ಭದ್ರತೆ ಹಾಗೂ ಹೈ ಪ್ರೊಫೈಲ್ ಕಾರು ನಿರ್ಮಿಸಲು ಉತ್ಸುಕತೆ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ನಿಮ್ಮ ಮಾಹಿತಿಗಾಗಿ ಬೀಸ್ಟ್ ಕಾರು 2009ನೇ ಇಸವಿಯಿಂದ ಅಮೆರಿಕ ಅಧ್ಯಕ್ಷರ ಸೇವೆಯಲ್ಲಿದೆ. ಇದೀಗ ಕಾರಿನ ತಂತ್ರಜ್ಞಾನವನ್ನು ಇನ್ನಷ್ಟು ವೃದ್ಧಿಸುವ ಯೋಜನೆಯ ಭಾಗವಾಗಿ ಬಿಡ್ ಕರೆಯಲಾಗಿದ್ದು, ಒಟ್ಟು ನಾಲ್ಕು ಹಂತಗಳಲ್ಲಾಗಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ನಿಮಗಿದು ಗೊತ್ತೆ? ಒಬಾಮಾ ಪ್ರಯಾಣಿಸುವ ಲಿಮೊಸಿನೆ ಕಾರಿನಂತಹ ಅಡ್ವಾನ್ಸಡ್ ತಂತ್ರಜ್ಞಾನದ ಕಾರು ಜಗತ್ತಿನಲ್ಲಿ ಬೇರೆ ಎಲ್ಲೂ ಇಲ್ಲ. ಇದು ಕಸ್ಟಮೈಸ್ಡ್ ಕಾರು. ರಾಕೇಟ್, ಗ್ರೇನೆಡ್ ಹಾಗೂ ರಾಸಾಯನಿಕ ದಾಳಿಯಿಂದಲೂ ಪಾರಾಗುವ ಶಕ್ತಿ ಇದಕ್ಕಿದೆ.

ಮುಂದಿನ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಲಿಮೊಸಿನ್ ಗಾಡಿ

ಗನ್, ಗ್ರೇನೆಡ್, ಬಾಂಬ್ ದಾಳಿಗಳಿಂದ ಪಾರಾಗುವಂತಹ ಬುಲೆಟ್ ಪ್ರೂಫ್ ಕಿಟಕಿಗಳನ್ನು ಇದು ಹೊಂದಿದೆ. ಇದರ ಬಾಡಿ ಎಂಟು ಇಂಚು ದಪ್ಪದ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಕಾರಿನ ಟೈರ್ ಬ್ಲಾಸ್ಟ್ ಆದರೂ ವೀಲುಗಳ ಮೂಲಕವೇ ಸಾಗಬಹುದು.

Please Wait while comments are loading...

Latest Photos