ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

By Nagaraja

ಬಹುಶ: ಇದಕ್ಕಾಗಿರಬಹುದು ಕಲಾವಿದನ ಸೃಷ್ಟಿ ಅನ್ನೋದು. ಕಲಾವಿದರೊಬ್ಬರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಬಿಡುತ್ತಾರೆ ಎಂಬುದಕ್ಕೆ ಇಂದೊಂದು ಉತ್ತಮ ಉದಾಹರಣೆಯಾಗಿದೆ.

ಇಲ್ಲೊಬ್ಬ ವಿನ್ಯಾಸಗಾರ ಹಳೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರನ್ನೇ ರೋಲ್ಸ್ ರಾಯ್ಸ್ ಆಗಿ ಪರಿವರ್ತಿಸಿದ್ದಾರೆ. ಸದ್ಯ ತಮ್ಮ ಕನಸಿನ ಕಾರು ರೂಪಿಸುವುದರಲ್ಲಿ ಯಶಸ್ವಿಯಾಗಿರುವ ಈತ ಅತೀವ ಸಂತಸದಲ್ಲಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಆತ ಹೇಗೆ ತಮ್ಮ ಯೋಜನೆಯಲ್ಲಿ ಯಶಸ್ವಿಯಾದರು? ಜೊತೆಗೆ ಆಕರ್ಷಕ ಚಿತ್ರಗಳಿಗಾಗಿ ಚಿತ್ರ ಸಂಪುಟದತ್ತ ಭೇಟಿ ಕೊಡಿರಿ.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಕಜಕಿಸ್ತಾನದ ಯುವ ಆಟೋ ಮೆಕ್ಯಾನಿಕ್ ರುಸ್ಲಾನ್ ಮುಕನೋವ್ ಎಂಬಾತರೇ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದರು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಬಿಎಂಡಬ್ಲ್ಯು ಅಧೀನತೆಯಲ್ಲಿರುವ ತಮ್ಮ ಕನಸಿನ ರೋಲ್ಸ್ ರಾಯ್ಸ್ ಫಾಟಂ ಪಡೆಯುವುದು ಈ ಯುವ ಮೆಕ್ಯಾನಿಕ್ ಅವರ ಗುರಿಯಾಗಿತ್ತು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಆದರೆ ನೈಜ ರೋಲ್ಸ್ ರಾಯ್ಸ್ ಖರೀದಿಗೆ ಸಾಕಷ್ಟು ದುಡ್ಡು ಬೇಕಾಗಿದ್ದರಿಂದ ತಮ್ಮ ಯೋಚನೆ ಕೈಬಿಟ್ಟಿದ್ದರು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಈ ರೀತಿಯಾಗಿ ಆಟೋ ಮೆಕ್ಯಾನಿಕ್‌ನಲ್ಲಿ ನುರಿತ ತರಬೇತಿ ಪಡೆದ ಅವರ ಮನದಲ್ಲಿ ಬೆಂಝ್ ತಲಹದಿಯಲ್ಲಿ ಹೊಸ ರೋಲ್ಸ್ ರಾಯ್ಸ್ ತಯಾರಿಸುವ ಯೋಚನೆ ಹುಟ್ಟಿಕೊಂಡಿತ್ತು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಬಳಿಕ ಇದಕ್ಕಾಗಿ ಅವಿರತ ಪ್ರಯತ್ನ ನಡೆಸಿದರು. ಆರಂಭದಲ್ಲಿ ಕುಟುಂಬ ವರ್ಗಗಳಿಂದಲೇ ಟೀಕೆ ಎದುರಾದರೂ ಬರ ಬರುತ್ತಾ ರುಸ್ಲಾನ್ ಸಾಧನೆಯನ್ನು ಎಲ್ಲರು ಮೆಚ್ಚಿದರು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಯಥಾವತ್ತಾಗಿ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವ ರಸ್ಲನ್, ಸಾಕಷ್ಟು ರೇಖಾಚಿತ್ರ ಬಿಡಿಸಿದ ಬಳಿಕ ತಮ್ಮ ಯೋಜನೆಯಲ್ಲಿ ಯಶ ಕಂಡಿದ್ದರು.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಇಲ್ಲಿ ಬರಿ ರೋಲ್ಸ್ ರಾಯ್ಸ್ ಕಾರಿನ ಕಾರ್ಬನ್ ಪ್ರತಿ ಪಡೆಯಲು ರುಸ್ಲಾನ್ ಇರಾದೆಯಾಗಿರಲಿಲ್ಲ. ಬದಲಾಗಿ ತಮ್ಮ ಬಯಕೆಯಂತೆ ಕನಸಿನ ಕಾರಿಗೆ ಕೆಲವೊಂದು ಮಾರ್ಪಾಡುಗಳನ್ನು ತಂದಿದ್ದಾರೆ.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಅವರಿಗೆ ಈ ಎಲ್ಲ ಮಾರ್ಪಾಡುಗಳನ್ನು ತರಲು ಅಂದಾಜು 3000 ಅಮೆರಿಕನ್ ಡಾಲರ್ ಖರ್ಚಾಗಿವೆಯಂತೆ. ಅವರೆ ಹೇಳುವ ಪ್ರಕಾರ ಹಣಕಾಸಿನ ಅಭಾವದಿಂದಾಗಿ ಯೋಜನೆ ವಿಳಂಬವಾಗಿದೆ ಎಂದಿದ್ದಾರೆ.

ಕನಸಿನ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತನೆಯಾದ ಬೆಂಝ್

ಒಟ್ಟಿನಲ್ಲಿ ಅತ್ಯಾಕರ್ಷಕ ರೋಲ್ಸ್ ರಾಯ್ಸ್ ಕಾರನ್ನು ತಯಾರಿಸುವಲ್ಲಿ ರುಸ್ಲಾನ್ ಯಶಸ್ವಿಯಾಗಿದ್ದಾರೆ. ಇದವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

More from DriveSpark

Article Published On: Friday, July 18, 2014, 14:46 [IST]
English summary
Old Mercedes Benz turns into Rolls-Royce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+