ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಪಾಕಿಸ್ತಾನ ಕೊಟ್ಟ ಉಡುಗೊರೆ ಏನು ಗೊತ್ತಾ?

ಒಲಂಪಿಕ್ಸ್‌ನಲ್ಲಿ ಚಿನ್ನವನ್ನು ಗೆಲ್ಲುವುದು ಪ್ರತಿ ಆಟಗಾರರ ಕನಸಾಗಿರುತ್ತದೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ (Arshad Nadeem) ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ಧಕ್ಕಿಸಿಕೊಂಡಿದ್ದಾರೆ. ಸಂಪ್ರದಾಯದಂತೆ ಒಲಂಪಿಕ್ಸ್‌ನಲ್ಲಿ ಗೆದ್ದವರಿಗೆ ಸರ್ಕಾರ ಹಾಗೂ ಪ್ರಮುಖರಿಂದ ಉಡುಗೊರೆಗಳು ಬರುವುದು ಸಾಮಾನ್ಯ. ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಮಂಗಳವಾರ 100 ಮಿಲಿಯನ್ ಪಿಕೆಆರ್ ಮೌಲ್ಯದ ಚೆಕ್ ಮತ್ತು ಹೋಂಡಾ ಸಿವಿಕ್ ಕಾರನ್ನು ಬಹುಮಾನವಾಗಿ ನೀಡಿದ್ದಾರೆ.

ನದೀಮ್ ಚಿನ್ನದ ಪದಕ ಗೆಲ್ಲುವ ಮೂಲಕ ಪಾಕಿಸ್ತಾನದ 32 ವರ್ಷಗಳ ಒಲಿಂಪಿಕ್ಸ್​ ಇತಿಹಾಸದಲ್ಲಿ ಪದಕದ ಬರವನ್ನು ನೀಗಿಸಿದ್ದಾರೆ. ಈ ಹಿಂದೆ, 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಇದು ಪಾಕಿಸ್ತಾನದ ಕೊನೆಯ ಪದಕವಾಗಿತ್ತು. ಇದೀಗ ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅರ್ಷದ್​ಗೆ ಪಾಕಿಸ್ತಾನದಾದ್ಯಂತ ಬಹುಮಾನಗಳ ಸುರಿಮಳೆಯಾಗುತ್ತಿದೆ.

paris-olympics-arshad-nadeem-honda-civic-car-gifted-by-cm-maryam-nawaz

ಇದೀಗ ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್ ಮಂಗಳವಾರ ಮಿಯಾನ್ ಚನ್ನುನಲ್ಲಿರುವ ನದೀಮ್ ಅವರ ಮನೆಗೆ ತೆರಳಿ 100 ಮಿಲಿಯನ್ ಪಿಕೆಆರ್ (PKR) ಮೌಲ್ಯದ ಚೆಕ್ ಮತ್ತು ಪಿಎಕೆ (PAK) -92.97 ವಿಶೇಷ ನೋಂದಣಿ ಸಂಖ್ಯೆಯ ಹೊಸ ಹೋಂಡಾ ಸಿವಿಕ್ ಕಾರನ್ನು ಹಸ್ತಾಂತರಿಸಿದರು.

ಮರ್ಯಮ್ ನವಾಜ್ ಅವರು ಅರ್ಷದ್ ಅವರ ತರಬೇತುದಾರ ಸಲ್ಮಾನ್ ಇಕ್ಬಾಲ್ ಬಟ್ ಅವರಿಗೂ 5 ಮಿಲಿಯನ್ ಪಿಕೆಆರ್ ಮೌಲ್ಯದ ಚೆಕ್ ಹಸ್ತಾಂತರಿಸಿದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅರ್ಷದ್ ನದೀಮ್ ಮತ್ತು ಅವರ ಕುಟುಂಬಕ್ಕೆ ಪ್ರಧಾನಿ ನಿವಾಸದಲ್ಲಿ ಭೋಜನಕೂಟವನ್ನು ಸಹ ಆಯೋಜಿಸುವುದಾಗಿ ಘೋಷಿಸಿದ್ದಾರೆ.

paris-olympics-arshad-nadeem-honda-civic-car-gifted-by-cm-maryam-nawaz

ಪಾಕಿಸ್ತಾನ ಸರ್ಕಾರ ಸೇರಿದಂತೆ ದೇಶದ ಇನ್ನೀತರ ಗಣ್ಯರು ಅರ್ಷದ್​ಗೆ ಭಾರೀ ಮೊತ್ತದ ಬಹುಮಾನ ನೀಡಿದ್ದಾರೆ. ಪಾಕಿಸ್ತಾನದ ಉದ್ಯಮಿಯೊಬ್ಬರು ನದೀಮ್​ಗೆ 4 ಲಕ್ಷ (ಭಾರತದ ಕರೆನ್ಸಿ) ರೂಪಾಯಿ ಮೌಲ್ಯದ ಆಲ್ಟೊ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಇದೇ ಆಲ್ಟೊ ಕಾರು 23 ಲಕ್ಷ ಪಿಕೆಆರ್ ಬೆಲೆಗೆ ಮಾರಾಟವಾಗುತ್ತಿದೆ.

ಪಾಕಿಸ್ತಾನದ ಹೋಂಡಾ ಸಿವಿಕ್ ವಿಶೇಷತೆಗಳು: ಆ ದೇಶದಲ್ಲಿ ಹೊಸ ಹೋಂಡಾ ಸಿವಿಕ್ ಬೆಲೆಯು 86.59 ಲಕ್ಷದಿಂದ 98.99 ಲಕ್ಷ ಪಿಕೆಆರ್ ಆಗಿದೆ. ಈ ಕಾರು 1498cc ಪೆಟ್ರೋಲ್ ಎಂಜಿನ್‌ ಜೊತೆಗೆ ಆಟೋಮ್ಯಾಟಿಕ್ (CVT) ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದರ ಮೈಲೇಜ್ ಬಗ್ಗೆ ಹೇಳುವುದಾದ್ರೆ ಪ್ರತಿ ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡುತ್ತದೆ.

paris-olympics-arshad-nadeem-honda-civic-car-gifted-by-cm-maryam-nawaz

ವೈಶಿಷ್ಟ್ಯಗಳು: 9 ಇಂಚಿನ ಆಂಡ್ರಾಯ್ಡ್ ಆಧಾರಿತ ನ್ಯಾವಿಗೇಷನ್, ಯುಎಸ್‌ಬಿ ಮತ್ತು ಆಕ್ಸಿಲರಿ ಕೇಬಲ್, USB ಚಾರ್ಜರ್, ಮುಂಭಾಗ ಮತ್ತು ಹಿಂಭಾಗ ಸೇರಿದಂತೆ 4 ಸ್ಪೀಕರ್‌ಗಳು, ಎರಡು ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್ / ಹಿಲ್ ಹೋಲ್ಡ್ ಕಂಟ್ರೋಲ್ / ಡೌನ್‌ಹಿಲ್ ಬ್ರೇಕ್ ಕಂಟ್ರೋಲ್ (HHC/ HAC / DBC) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 14, 2024, 13:27 [IST]
English summary
Paris olympics arshad nadeem honda civic car gifted by cm maryam nawaz
Read more on off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+