ಭಾರತದ ಹೆಮ್ಮೆ 'ಮನು ಭಾಕರ್' ಬಗ್ಗೆ ಯಾರಿಗೂ ಇದು ತಿಳಿದಿಲ್ಲ! ಈಗ ದೇಶವೇ ಹುಡುಕುತ್ತಿದೆ!
ಪ್ಯಾರಿಸ್ ಒಲಿಂಪಿಕ್ಸ್ 2024 ಇತ್ತೀಚೆಗೆ ಪ್ರಾರಂಭವಾಗಿದ್ದು, ಭಾರತ ಈಗಷ್ಟೇ ಪದಕದ ಖಾತೆ ತೆರೆದಿದೆ. ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಶೂಟರ್ ಅಭಿನವ್ ಬಿಂದ್ರಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ಕ್ರೀಡಾಪಟುಗಳು, ರಾಜಕಾರಣಿಗಳು, ಮತ್ತು ಚಲನಚಿತ್ರ ತಾರೆಯರು ಮನು ಭಾಕರ್ ಅವರಿಗೆ ಶುಭ ಹಾರೈಸಿದ್ದಾರೆ.
ಮನು ಭಾಕರ್ ಅವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿರುವುದರಿಂದ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿದ್ದಾರೆ. ಅಂತರ್ಜಾಲದಲ್ಲಿ ಅವರ ಕುರಿತ ಹಲವು ವಿಷಯಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಮನು ಭಾಕರ್ 2023 ರಲ್ಲಿಯೇ ಕ್ರೀಡೆಯನ್ನು ತೊರೆಯುವ ಬಗ್ಗೆ ಯೋಚಿಸಿದ್ದರು. ಪ್ಯಾರಿಸ್‌ನಲ್ಲಿ ಭಾರತದ ಮೊದಲ ಪದಕ ವಿಜೇತರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್‌ನಲ್ಲಿ ಇತಿಹಾಸ ಬರೆದ ನಂತರ ಮಾತನಾಡಿದ ಮನು ಭಾಕರ್, "ಇದು ಭಾರತಕ್ಕೆ ದೀರ್ಘಕಾಲದಿಂದ ಬಾಕಿ ಇರುವ ಪದಕವಾಗಿದೆ" ಎಂದು ಹೇಳಿದ್ದಾರೆ. ಆದರೆ ಅದೇ ಮನು ಭಾಕರ್ ಮೂರು ವರ್ಷಗಳ ಹಿಂದೆ ತನ್ನ ಮೊದಲ ಒಲಿಂಪಿಕ್‌ನಿಂದ ಬರಿಗೈಯಲ್ಲಿ ಮನೆಗೆ ಮರಳಿದ್ದರು. ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ವಿಫಲವಾದ ನಂತರ ಕಣ್ಣೀರಿಟ್ಟಿದ್ದರು.
ಟೋಕಿಯೊ ಒಲಿಂಪಿಕ್‌ನಲ್ಲಿ ಸೋತ ನೋವಿನಿಂದ ಹೊರಬರುವುದು ತುಂಬಾ ಕಷ್ಟಕರವಾಗಿತ್ತು. ಅವರು ಕ್ರೀಡೆಯನ್ನು ತೊರೆದು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದ್ದರು. ಆದರೆ ಶೂಟಿಂಗ್ ತನ್ನ ಜೀವನದ ಪ್ರಮುಖ ಭಾಗವೆಂದು ಕೊನೆಗೂ ಅರ್ಥಮಾಡಿಕೊಂಡರು. ಕಠಿಣ ಪರಿಶ್ರಮ, ಸತತ ಪ್ರಯತ್ನ, ಆತ್ಮ ವಿಶ್ವಾಸ ಇಂದು ನನ್ನನ್ನು ಇಲ್ಲಿಗೆ ತಲುಪಿಸಿದೆ ಎಂದಿದ್ದಾರೆ.

ಕೇವಲ 22 ವರ್ಷದ ಮನು ಭಾಕರ್, ಇತರ ಯುವತಿಯಂತೆಯೇ ಇನ್ಸ್ಟಾಗ್ರಾಮ್‌ನಲ್ಲಿ ಸಕ್ರಿಯಾಗಿದ್ದಾರೆ. ಆದರೆ ಕಾರು, ಬೈಕ್‌ಗಳಿಗೆ ಸಂಬಂಧಿಸಿದ ಯಾವುದೇ ಫೋಟೋಗಳು ಅಥವಾ ವೀಡಿಯೊಗಳು ಇಲ್ಲ. ಮನು ಭಾಕರ್ ಅವರ ಪೋಸ್ಟ್‌ಗಳು ಹೆಚ್ಚಾಗಿ ಶೂಟಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಪ್ರವಾಸಗಳಿಗೆ ಸಂಬಂಧಿಸಿವೆ. ಆದರೆ ಒಂದು ಫೋಟೋದಲ್ಲಿ ಮಾತ್ರ ಮನು ಭಾಕರ್ ಕಾರೊಂದಿಗೆ ಬಹಳ ಹತ್ತಿರದಲ್ಲಿ ನಿಂತಿರುವುದನ್ನು ನೋಡಬಹುದು.
ಇದು ಬಹುಶಃ ಮನು ಭಾಕರ್ ಬಳಸಿದ ಕಾರು ಎಂದು ನಾವು ಭಾವಿಸಿದ್ದೇವೆ. ಅದು ಎಂಜಿ ಗ್ಲೋಸ್ಟರ್, ಇದು ಫುಲ್‌ಸೈಜ್ ಎಸ್‌ಯುವಿಯಾಗಿದೆ. ಎಂಜಿ ಗ್ಲೋಸ್ಟರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್‌ಗೆ ಪೈಪೋಟಿ ನೀಡುತ್ತದೆ. ಎಂಜಿ ಗ್ಲೋಸ್ಟರ್ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.38.80 ಲಕ್ಷಗಳಾಗಿದೆ. ಟಾಪ್ ವೇರಿಯೆಂಟ್ ಬೆಲೆ 43.87 ಲಕ್ಷ ರೂ. ಎಕ್ಸ್ ಶೋರೂಂ ಇದೆ.
ಮನು ಭಾಕರ್ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲವಾದರೂ ಅವರು ಶೀಘ್ರದಲ್ಲೇ ಕಾರುಗಳ ಉಡುಗೊರೆಗಳನ್ನು ಪಡೆಯಲಿದ್ದಾರೆ. ಸಾಮಾನ್ಯವಾಗಿ ಒಲಿಂಪಿಕ್ಸ್ ನಂತಹ ಕ್ರೀಡೆಗಳಲ್ಲಿ ಗೆದ್ದು ಭಾರತಕ್ಕೆ ಹೆಸರು ತಂದುಕೊಡುವವರಿಗೆ, ಅನೇಕ ಪ್ರಮುಖ ಕಂಪನಿಗಳು ಕಾರುಗಳನ್ನು ಉಡುಗೊರೆಯಾಗಿ ನೀಡುತ್ತವೆ. ಅದರಲ್ಲೂ ಮಹೀಂದ್ರಾ ಕಂಪನಿಯು ಸದಾ ಮುಂದಿರುತ್ತದೆ.
ಒಟ್ಟಾರೆ ಅತಿ ಸಣ್ಣ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ಮನು ಭಾಕರ್, ಖಂಡಿತ ಈ ಬಾರಿ ಭಾರತದಲ್ಲಿ ಹೊಸ ಕಾರನ್ನು ಮಹೀಂದ್ರಾದಿಂದ ಉಡುಗೊರೆಯಾಗಿ ಪಡೆಯುವ ಸಾಧ್ಯತೆಯಿದೆ. ಜೊತೆಗೆ ಪ್ರಮುಖರಿಂದ ಯಾವೆಲ್ಲಾ ಉಡುಗೊರೆಗಳನ್ನು ಪಡೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಮನು ಭಾಕರ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








