ಗನ್ ಹಿಡಿದು ಟ್ರಾಫಿಕ್ ಜಾಮ್ ತೆರವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಒಂದು ದೊಡ್ಡ ಸಮಸ್ಯೆಯಾಗಿದೆ. ಟ್ರಾಫಿಕ್ ಜಾಮ್ ತೆರವುಗೊಳಿಸುವುದು ಟ್ರಾಫಿಕ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಕೆಲವು ನಗರಗಳಲ್ಲಿ ಟ್ರಾಫಿಕ್ ಜಾಮ್ ಆದಾಗ ರಾಜಕಾರಣಿಗಳು ತೆರಳಿ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಿ ಜನನಾಯಕ ಎನಿಸಿಕೊಳ್ಳುತ್ತಾರೆ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಆದರೆ ಉತ್ತರಪ್ರದೇಶದಲ್ಲಿ ರಾಜಕಾರಣಿಯೊಬ್ಬರು ತಾನು ಜನರ ಮುಂದೆ ತಾನೊಬ್ಬ ಪ್ರಭಾವಿ ರಾಜಕಾರಣಿ ಎಂದು ಸಾಬೀತುಪಡಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಆತ ಮಾಡಿರುವುದು ಟ್ರಾಫಿಕ್ ಜಾಮ್ ಆದಾಗ ಗನ್ ಹಿಡಿದು ಜನರಿಗೆ ಬೆದರಿಕೆ ಹಾಕಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆತನ ದರ್ಪ ಜನರ ಮುಂದೆ ನಡೆಯಲಿಲ್ಲ, ಸಾರ್ವಜನಿಕರು ಆತನಿಗೆ ಸರಿಯಾಗಿ ಗೂಸಾ ನೀಡಿ ಪಾಠ ಕಲಿಸಿದ್ದಾರೆ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಭಾರತದಲ್ಲಿ ಹಲವು ಕಡೆಗಳಲ್ಲಿ ರಾಜಕಾರಣಿಗಳು ತಮ್ಮ ದರ್ಪವನ್ನು ಜನರ ಮುಂದೆ ತೋರಿಸಿ ತಾನೊಬ್ಬ ಶಕ್ತಿಶಾಲಿ ಜನನಾಯಕ ಎನಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಇಂದು ಜನರು ವಿದ್ಯಾವಂತರಾಗಿದ್ದಾರೆ, ರಾಜಕಾರಣೆಗಳ ದಬ್ಬಾಳಿಕೆಯನ್ನು ಜನರು ಒಪ್ಪಿಕೊಳ್ಳುವುದಕ್ಕೆ ಸಿದ್ದರಿಲ್ಲ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಅದರೂ ರಾಜಕಾರಣಿಗಳು ಮಾತ್ರ ತಮ್ಮ ದರ್ಪವನ್ನು ತೋರಿಸಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಒಡೆತನದ ಖಾಸಗಿ ವಾಹನಗಳಲ್ಲಿ ಸ್ಟಿಕರ್‍‍ಗಳನ್ನು ಅಳವಡಿಸಿಕೊಳ್ಳುತ್ತಾರೆ. ಎಂಎಲ್ಎ, ಎಂಪಿ, ಪೊಲೀಸ್ ಈ ರೀತಿ ತಮ್ಮ ಖಾಸಗಿ ವಾಹನಗಳಲ್ಲಿ ಸ್ಟಿಕರ್‍‍ಗಳನ್ನು ದೊಡ್ಡ ಗಾತ್ರದಲ್ಲಿ ಹಾಕಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಇದನ್ನು ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಇನ್ನೂ ಕೆಲವು ಸರ್ಕಾರಿ ಅಧಿಕಾರಿಗಳು ಒಂದು ಹೆಚ್ಚೆ ಮುಂದೆ ಹೋಗಿ ತಮ್ಮ ಖಾಸಗಿ ಕಾರುಗಳಲ್ಲಿ ಸೈರನ್‍‍ಗಳನ್ನು ಅಳವಡಿಸಿಕೊಳ್ಳುತ್ತಾರೆ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಆದರೆ ಇದೀಗ ಹಲವು ರಾಜಕಾರಣಿಗಳು ಗನ್ ಅನ್ನು ಹೊಂದಿರುವುದು ಕೂಡ ಚರ್ಚೆಯಾಗುತ್ತಿದೆ. ಯುಪಿ ತಕ್ ಅಪ್ಲೋಡ್ ಮಾಡಿರುವ ವೀಡಿಯೊದಲ್ಲಿ ಜನರು ಮತ್ತು ರಾಜಕಾರಣಿಗಳ ನಡುವಿನ ಭಿನ್ನಾಭಿಪ್ರಾಯವನ್ನು ನೋಡಬಹುದು. ರಾಜಕಾರಣೆಯು ವೀಡಿಯೊದಲ್ಲಿ ಗನ್ ಅನ್ನು ತೋರಿಸುವುದು ವೀಡಿಯೊದಲ್ಲಿ ಇಲ್ಲವಾದರೂ ಅಲ್ಲಿಯ ಜನರು ರಾಜಕಾರಣೆಯ ವಿರುದ್ದ ಆರೋಪವನ್ನು ಮಾಡಿದ್ದಾರೆ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಈ ಘಟನೆಯು ಉತ್ತರ ಪ್ರದೇಶದ ಪಿಲಿಭಿತ್‍ನ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಹೇಳುವುದಾದರೆ ಟ್ರಾಫಿಕ್ ಜಾಮ್‍ನಲ್ಲಿ ಸಾವಿರಾರು ವಾಹನಗಳು ದೀರ್ಘಕಾಲದವರೆ ಸಿಲುಕಿಕೊಂಡಿದ್ದವು. ಈ ಸಾವಿರಾರು ವಾಹನದಲ್ಲಿ ಬಿಜೆಪಿ ರಾಜಕಾರಣಿಯ ಹೋಂಡಾ ಡಬ್ಲ್ಯು-ಆರ್‍‍ವಿ ಕಾರು ಕೂಡ ಸೇರಿದೆ.

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಇದೇ ಸಂದರ್ಭದಲ್ಲಿ ರಾಜಕಾರಣಿಯು ಟ್ರಾಫಿಕ್ ಜಾಮ್ ಅನ್ನು ಸರಿಪಡಿಸಲು ಗನ್ ಹಿಡಿದು ಸಿನಿಮಾ ಶೈಲಿಯಲ್ಲಿ ತೆರಳುತ್ತಾರೆ. ಅಲ್ಲಿ ಇದ್ದ ಜನರು ಒಂದು ಕ್ಷಣ ಆಶ್ಚರ್ಯದಿಂದ ಬೆದರಿ ಹೋಗುತ್ತಾರೆ. ರಾಜಕಾರಣಿಯು ತನ್ನ ಗನ್ ಅನ್ನು ತೋರಿಸಿ ದರ್ಪ ಮೆರೆಯಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮೊದಲೆ ಟ್ರಾಫಿಕ್ ಸಿಲುಕಿ ಕೆಂಡ ಮಂಡಲವಾಗಿದ್ದರು. ರಾಜಕಾರಣಿಯ ದರ್ಪ, ದೌಲತ್ತನ್ನು ನೋಡಿ ಸಿಟ್ಟಿಗೆದ್ದು ರಾಜಕಾರಣಿಯ ವಿರುದ್ದ ತಿರುಗಿ ಬಿದ್ದರು. ರಾಜಕಾರಣಿಯನ್ನು ಕಾರಿನಲ್ಲೇ ಎಳೆದಾಡಿ ಗೂಸಾ ನೀಡಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಲ್ಲಿಯ ಸ್ಥಳೀಯ ಪೊಲೀಸರು ಕಾನೂನಿನ ಅಡಿಯಲ್ಲಿ ಸೂಕ್ತವಾದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಆತನು ಗನ್‍ ಬಳಸಲು ಪರವಾನಿಗೆಯನ್ನು ಹೊಂದಿಲ್ಲ ಎಂದಾದರೆ ಆತ ಜೈಲು ಪಾಲಾಗುವುದು ಖಚಿತವಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಗನ್ ಹಿಡಿದು ಟ್ರಾಫಿಕ್ ಜಾಮ್ ತೆರೆವುಗೊಳಿಸಲು ಹೋದ ರಾಜಕಾರಣಿಗೆ ಬಿತ್ತು ಗೊಸಾ

ಆದರೆ ಇದೊಂದು ಜನರು ಬಿಚ್ಚಿಬೀಳುವ ಗಂಭೀರವಾದ ಪ್ರಕರಣವಾಗಿದೆ. ಅಲ್ಲಿಯ ಸ್ಥಳೀಯ ಸಾರ್ವಜನಿಕರು ಆತನಿಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಆತ ಟ್ರಾಫಿಕ್ ಜಾಮ್ ಉಂಟಾದ ಸಂದರ್ಭದಲ್ಲಿ ಜನರಿಗೆ ಮನವಿ ಮಾಡಿ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಿದ್ದರೆ, ಆತ ನಿಜವಾದ ಜನನಾಯಕನಾಗುತ್ತಿದ್ದರು. ಆದರೆ ತಾನೊಬ್ಬ ರಾಜಕಾರಣಿ ಎಂದು ದರ್ಪ ತೊರಲು ಮುಂದಾಗಿದ್ದಾರೆ. ಇದು ಇಂತಹ ರಾಜಕಾರಣಿಗಳಿಗ ಸರಿಯಾದ ಪಾಠವಾಗಿದೆ.

Article Published On: Thursday, October 17, 2019, 15:06 [IST]
English summary
UP Politician Attempts Using A Gun To Clear Traffic; Gets Roughed Up By The Public - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+