ಕೊಳಕ್ಕೆ ಧುಮುಕಿದ ಪೋರ್ಷೆ ಐಷಾರಾಮಿ ಕಾರು
ಹೊಸ ವರ್ಷಾರಂಭದಲ್ಲೇ ಬ್ಯಾಡ್ ನ್ಯೂಸ್ ಕೇಳಿಸಿಕೊಂಡಿದೆ. ಚೀನಾದಲ್ಲಿ ಈ ಘಟನೆ ವರದಿಯಾಗಿದ್ದು, ಐಷಾರಾಮಿ ಪೋರ್ಷೆ ಕಾರೊಂದು ಕೊಳಕ್ಕೆ ಧುಮುಕಿದ ಘಟನೆ ವರದಿಯಾಗಿದೆ.
ಚಾಲಕನ ಅಜಾಗರೂಕತೆಯೇ ಅಥವಾ ನ್ಯೂ ಇಯರ್ ಮತ್ತಿನಲ್ಲಿದ್ದ ಚಾಲಕ ಇಂತಹದೊಂದು ಎಡವಟ್ಟು ನಡೆಸಿದ್ದಾನೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಒಟ್ಟಿನಲ್ಲಿ ಕಾರು ಮಾಲಿಕನಿಗೆ ಮಾತ್ರ ಭಾರಿ ನಷ್ಟವುಂಟಾಗಿದೆ.

ಚೀನಾಕ್ಕೆ ಹೋಲಿಸಿದಾಗ ಭಾರತದಲ್ಲಿ ವಿರಳ ಮಾತ್ರದಲ್ಲಿ ಪೋರ್ಷೆ ಐಷಾರಾಮಿ ಕಾರುಗಳು ಕಾಣಸಿಗುತ್ತದೆ. ಅದರಲ್ಲೂ ಪೋರ್ಷೆ ಪನಮೆರಾ 3ಎಸ್ ಅಪಘಾತಕ್ಕೀಡಾದ ವರದಿ ಬಯಲಾಗಿದೆ.

ಚೀನಾದ ಚಾಜೌ ಪ್ರಾಂತ್ಯದಲ್ಲಿ ದುರಂತ ವರದಿಯಾಗಿದ್ದು, ಭಾರಿ ಮಳೆ ಸುರಿಯುತ್ತಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿಗಳು ಬಂದಿದೆ.

ಪ್ರಾಥಮಿಕ ತನಿಖಾ ವರದಿಯಲ್ಲಿ ಚಾಲಕ ನಿಯಂತ್ರಣ ತಪ್ಪಿರುವುದು ಇಷ್ಟು ದೊಡ್ಡ ನಷ್ಟಕ್ಕೆ ಕಾರಣವಾಗಿದೆ. ಇದು ಚೀನಾದ ಅದೃಷ್ಟ ಲೈಸನ್ಸ್ ನಂಬರ್ ಹೊಂದಿದ್ದರೂ ಮಾಲಿಕನ ಪಾಲಿಗೆ ದುರದೃಷ್ಟವಾಗಿ ಪರಿಣಮಿಸಿದೆ.

ಭಾರತದಲ್ಲಿ ಫೋರ್ಷೆ ಪನಮೆರಾ ಎಕ್ಸ್ ಶೋ ರೂಂ ಬೆಲೆ 1.43 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ. ಐಷಾರಾಮಿ ಕಾರಿಗೆ ಉಂಟಾಗಿರುವ ನಷ್ಟವನ್ನು ಸಂಸ್ಥೆ ಅಥವಾ ವಿಮೆ ಕಂಪನಿ ಭರಿಸಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.


Click it and Unblock the Notifications








