ಟೊಯೊಟಾ ಐ-ರೋಡ್ ಎಲೆಕ್ಟ್ರಿಕ್ ಗಾಡಿಗೆ ಗ್ರೀನ್ ಸಿಗ್ನಲ್

By Nagaraja

ವರ್ಷಾರಂಭದಲ್ಲಿ ನಡೆದ ಜಿನೆವಾ ಆಟೋ ಶೋದಲ್ಲಿ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾದ ಟೊಯೆಟಾ ಅತಿ ವಿಶೇಷ ಭವಿಷ್ಯದ ವಾಹನವೊಂದನ್ನು ಪ್ರದರ್ಶಿಸಿತ್ತು. ಪ್ರಸ್ತುತ ಐ-ರೋಡ್ ವಿದ್ಯುತ್ ಚಾಲಿತ ವಾಹನ ಉತ್ಪಾದನಾ ವರ್ಷನ್‌ಗೆ ಸಜ್ಜಾಗುತ್ತಿದ್ದು, ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ.

ವಾಹನ ಜಗತ್ತಿನಲ್ಲಿ ನೀವು ನೋಡುತ್ತಿರುವಂತೆಯೇ ಬಹುತೇಕ ಕಾನ್ಸೆಪ್ಟ್ ವಾಹನಗಳು ಉತ್ಪಾದನಾ ವರ್ಷನ್ ಪಡೆದುಕೊಳ್ಳುವುದು ತೀರಾ ವಿರಳವಾಗಿದೆ. ಇವೆಲ್ಲದರ ನಡುವೆ ವಿಶಿಷ್ಟ ವಿನ್ಯಾಸ ಪಡೆದುಕೊಂಡಿರುವ ಟೊಯೊಟಾದ 'ಐ ರೋಡ್' ನಿರ್ಮಾಣ ಸಿದ್ಧಗೊಂಡಿರುವುದು ಖುಷಿಯ ವಿಚಾರವಾಗಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಜೆಟ್ ಫೈಟರ್‌ನಿಂದ ಸ್ಪೂರ್ತಿ ಪಡೆದುಕೊಂಡು ಈ 'ಐ ರೋಡ್' ವಿದ್ಯುತ್ ಚಾಲಿತ ವಾಹನವನ್ನು ರೂಪಿಸಲಾಗಿದೆ. ಸದ್ಯ ಎಂಜಿನಿಯರ್‌ಗಳು ಇದರ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ನಗರ ಪ್ರದೇಶದ ಸಂಚಾರಕ್ಕೆ ಐ ರೋಡ್ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ. ಇದು ವಿಪರೀತ ವಾಹನ ದಟ್ಟಣೆಯನ್ನು ಕುಂಠಿತಗೊಳಿಸುವುದಲ್ಲದೆ ಸುಲಭ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿಕೊಡಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ವೈಯಕ್ತಿಕ ಖಾಸಗಿ ಸಂಚಾರ ವಾಹಕವಾಗಿರುವ ಟೊಯೊಟಾ ಐ ರೋಡ್ ಎಲೆಕ್ಟ್ರಿಕ್ ವಾಹನ, ಎರಡು ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿರಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಐ ರೋಡ್ ವಿದ್ಯುತ್ ಚಾಲಿತ ವಾಹನದ ಇನ್ನೊಂದು ಪ್ರಮುಖ ಅಂಶವೆಂದರೆ ಇದು ತಿರುವಿನಲ್ಲಿ ಬೈಕ್ ತರಹನೇ ಕೆಲಸ ಮಾಡಲಿದೆ. ಇದಕ್ಕಾಗಿ ಸಸ್ಪೆಷನ್ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಪ್ರಸ್ತುತ 5 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಐರೋಡ್ ಗಂಟೆಗೆ 45 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 50 ಕೀ.ಮೀ. ರೇಂಜ್ ಗುರಿಯಿರಿಸಿಕೊಳ್ಳಲಾಗಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಜಪಾನ್ ನಗರದಲ್ಲಿ ಸ್ಥಿತಗೊಂಡಿರುವ ಟೊಯೊಟಾ ಸಿಟಿಯಲ್ಲಿ ಕಂಪನಿಯ ಹಾರ್ಮನಿಯಸ್ ಮೊಬಿಲಿಟಿ ನೆಟ್‌ವರ್ಕ್ ಜಾಲದಲ್ಲಿ ಈ ನೂತನ ವಾಹನ ಕೆಲಸ ಮಾಡಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಮೇಲೆ ಉಲ್ಲೇಖಿಸಲಾದ ನಗರದಲ್ಲಿ 2014ರ ವೇಳೆಗೆ 100ರಷ್ಟು ಐ ರೋಡ್ ಯುನಿಟ್‌ಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಲಾಗಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಈ ಮೂರು ಚಕ್ರದ ವಾಹನ 2,350ಎಂಎಂ ಉದ್ದ ಹಾಗೂ 1,445ಎಂಎಂ ಎತ್ತರವಿರಲಿದೆ. ಹಾಗೆಯೇ ಇದರ ವೀಲ್ ಬೇಸ್ 1,700ಎಂಎಂ ಆಗಿರಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಟೊಯೊಟಾದ ಆಟೋಮ್ಯಾಟಿಕ್ ಆಕ್ಟಿವ್ ಲೀನ್ ವ್ಯವಸ್ಥೆಯು ಈ ತಿಚಕ್ರ ಕಾರು ತಿರುವು ಪಡೆಯಲು ನೆರವಾಗಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಎಲೆಕ್ಟ್ರಿಕ್ ವಾಹನವಾಗಿದ್ದರಿಂದ ಸಹಜವಾಗಿಯೇ ಐ-ರೋಡ್ ಹೊಗೆ ಹೊರಸೂಸುವಿಕೆ ಅಂಶ ಶೂನ್ಯವಾಗಿದ್ದು, ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದೆ.

ಟೊಯೊಟಾ 'ಐ ರೋಡ್' ತ್ರಿಚಕ್ರ ವಿದ್ಯುತ್ ಚಾಲಿತ ವಾಹನ

ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಈ ತ್ರಿಚಕ್ರ ಕಾರಿನಲ್ಲಿ ಬಳಸಲಾಗಿದೆ. ಮೂರು ತಾಸುಗಳಷ್ಟು ಚಾರ್ಜ್ ಮಾಡಿದ್ದಲ್ಲಿ 50 ಕೀ. ಮೀ. ತನಕ ಸಂಚರಿಸಲು ಸಾಧ್ಯವಾಗಲಿದೆ.

More from DriveSpark

Article Published On: Tuesday, October 22, 2013, 14:02 [IST]
English summary
Toyota's i-Road three-wheeler concept is set to make it off the drawing board and onto the road. Toyota has unveiled the all-new i-ROAD EV concept images ahead of its world debut at the 2013 Geneva Motor Show. Toyota i-ROAD is a personal mobility vehicle (PMV), a new, flexible form of transport designed for city streets. Seating two in tandem and under cover, i-ROAD is an electric vehicle with a range of up to 30 miles (50km) on a single charge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+