ಕಳಪೆ ಗುಣಮಟ್ಟದ ಸರ್ವಿಸ್- ಹೋಂಡಾ ಡಿಲರ್ಸ್‌ ವಿರುದ್ಧ ಉಪವಾಸ ಧರಣಿ

Written By:

ಹೋಂಡಾ ಸ್ಕೂಟರ್ ಖರೀದಿಯಲ್ಲಿ ಮೋಸಹೋದ ವ್ಯಕ್ತಿಯೊಬ್ಬ ಕಳಪೆ ಗುಣಮಟ್ಟದ ಸರ್ವಿಸ್‌ನಿಂದಾಗಿ ಬೇಸತ್ತು ಕೊನೆಗೆ ತನ್ನ ಕುಟುಂಬಸ್ಥರೊಂದಿಗೆ ಉಪವಾಸ ಧರಣಿ ಕೈಗೊಂಡಿರುವ ಘಟನೆ ನಡೆದಿದೆ.

ರಸ್ತೆ ಪಕ್ಕಕ್ಕೆ ಹೀಗೆ ಉಪವಾಸ ಧರಣಿ ಕೈಗೊಂಡಿರುವ ಈ ವ್ಯಕ್ತಿಯ ಹೆಸರು ಕುಪ್ಪಸ್ಪಾಮಿ. ತಮಿಳುನಾಡಿನ ಧರ್ಮಪುರಂ ಬಳಿಯ ನಿವಾಸಿಯಾಗಿರುವ ಈತ ವೃತ್ತಿಯಲ್ಲಿ ಬೀದಿ ವ್ಯಾಪರಿಯಾಗಿದ್ದು, ಅಲ್ಪ ಸ್ವಲ್ಪ ಕೂಡಿಟ್ಟ ಹಣದಲ್ಲಿ ಕಳೆದ 6 ತಿಂಗಳು ಹಿಂದೆ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿ ಮಾಡಿದ್ರು.

ಆದ್ರೆ ಅದ್ಯಾವ ಗಳಿಗೆಯಲ್ಲಿ ಆ ಸ್ಕೂಟರ್ ಖರೀದಿ ಮಾಡಿದ್ರೋ ಗೊತ್ತಿಲ್ಲಾ. ಸ್ಕೂಟರ್ ಖರೀದಿ ಮಾಡಿದ ಒಂದು ವಾರದಲ್ಲೇ ರಿಪೇರಿಗೆ ಬಂದಿದೆ. ಮೊದಮೊದಲು ಇದು ಕಾಮನ್ ಎಂದು ಕೊಂಡಿದ್ದ ಕುಪ್ಪಸ್ವಾಮಿಗೆ ಪದೇ ಪದೇ ಅದೇ ಸಮಸ್ಯೆಯಿಂದಾಗಿ ಸಾಕು ಸಾಕಾಗಿದೆ.

ಹೀಗಾಗಿ ಸ್ಕೂಟರ್ ರೀಪೆರಿಗೆ ಶಾಶ್ವತ ಮುಕ್ತಿ ನೀಡುವಂತೆ ಹೋಂಡಾ ಡಿಲರ್ಸ್‌ ಹೊಂಬಾಲು ಬಿದ್ದಿದ್ದ ಕುಪ್ಪಸ್ಪಾಮಿ, ಪದೇ ಪದೇ ರಿಪೇರಿಗೆ ಬರುವ ಆಕ್ಟಿವಾ ಸ್ಕೂಟರ್ ಬದಲಿಗೆ ಬೇಡಿಕೆಯಿಟ್ಟಿದ್ದ.

ಆದ್ರೆ ಕಾಟಾಚಾರಕ್ಕೆ ಎಂಬಂತೆ ಹಳೇ ಸ್ಕೂಟರ್ ಅನ್ನು ಹತ್ತಾರು ಬಾರಿ ರಿಪೇರಿ ಮಾಡಿಕಳುಹಿಸಿದ್ದ ಹೋಂಡಾ ಬೈಕ್ ಡಿಲರ್ಸ್, ಕುಪ್ಪಸ್ಪಾಮಿ ಬೇಡಿಕೆಗೆ ಸಿಡಿಮಿಡಿಗೊಂಡಿದ್ದರು.

ಇದರಿಂದಾಗಿ ಬೇಸತ್ತ ಕುಪ್ಪಸ್ವಾಮಿ ಇಂದು ಧರ್ಮಪುರಿಯಲ್ಲಿರುವ ಹೋಂಡಾ ಶೋರಂ ಮುಂಭಾಗದಲ್ಲಿ ಕುಟುಂಬ ಸಮೇತ ಉಪವಾಸ ಧರಣಿ ಕೈಗೊಂಡಿದ್ದಾನೆ.

ಜೊತೆಗೆ ಯಾವುದೇ ಕಾರಣಕ್ಕೂ ಹೋಂಡಾ ಆಕ್ಟಿವಾ ಖರೀದಿ ಮಾಡಿ ತೊಂದರೆ ಸಿಲುಕಬೇಡಿ ಎಂಬ ನಾಮಫಲಕವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಬೈಕ್ ಡಿಲರ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೋಂಡಾ ಆಕ್ಟಿವಾ ಕಾರ್ಯಕ್ಷಮತೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕುಪ್ಪಸ್ವಾಮಿ ಧರಣಿಗೆ ಸಾವಿರಾರು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೋಂಡಾ ಆಕ್ಟಿವಾದಲ್ಲಿನ ಕೆಲವು ದೋಷಪೂರಿತ ತಂತ್ರಜ್ಞಾನಗಳ ಈ ಹಿನ್ನೆಲೆ ಈ ಸಮಸ್ಯೆ ಉಂಟಾಗಿದ್ದು, ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿರುವ ಹೋಂಡಾ ಉತ್ಪಾದಕರು ಕುಪ್ಪಸ್ವಾಮಿಗೆ ಆದ ಮೋಸವನ್ನು ಸರಿಪಡಿಸಿ ಗ್ರಾಹಕರ ಪರ ಬದ್ದತೆ ತೊರಬೇಕಿದೆ.

Read more on ಹೋಂಡಾ honda
English summary
Read in Kannada Kuppasamy Started a Hunger Strike for Poor Service.
Please Wait while comments are loading...

Latest Photos