ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

By Nagaraja

ಸ್ಯಾಂಡಲ್‌ವುಡ್‌ನ 'ಪವರ್ ಸ್ಟಾರ್' ಖ್ಯಾತಿಯ ಪುನೀತ್ ರಾಜ್ ಕುಮಾರ್, ಸರಿ ಸುಮಾರು 15 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಬೈಕ್‌ವೊಂದನ್ನು ಖರೀದಿಸಿದ್ದಾರೆ. ಈ ಮೂಲಕ ಮಗದೊಮ್ಮೆ ತಮ್ಮ ಬೈಕ್ ಪ್ರೇಮವನ್ನು ತೋರ್ಪಡಿಸಿದ್ದಾರೆ.

Also Read : ಅಮೆರಿಕ ಬ್ರಾಂಡ್ ಇಂಡಿಯನ್ ಶೈಲಿಯಲ್ಲಿ ಗ್ರಾಂಡ್ ಎಂಟ್ರಿ

ಈ ಹಿಂದೆಯೂ ಹಲವು ಬಾರಿ ದುಬಾರಿ ಬೈಕ್ ಗಳನ್ನು ಖರೀದಿಸಿರುವ ಪುನೀತ್ ಈಗ ಅಮೆರಿಕದ ಐಕಾನಿಕ್ ಇಂಡಿಯನ್ ಮೋಟಾರ್ ಸೈಕಲ್ಸ್‌ ಸಂಸ್ಥೆಯ ಬೆಳ್ಳಿ ಬಣ್ಣದ ಸ್ಕೌಟ್ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಪ್ರಸಕ್ತ ಸಾಲಿನ ವರ್ಷಾರಂಭದಲ್ಲಿ ಆಫ್ ರೋಡ್ ದೈತ್ಯ ಪೊಲರಿಸ್ ಸಹಭಾಗಿತ್ವದಲ್ಲಿ ಭಾರತ ಪ್ರವೇಶ ಪಡೆದಿರುವ ಇಂಡಿಯನ್ ಮೋಟಾರ್‌ಸೈಕಲ್ ಕ್ರೂಸರ್ ಶ್ರೇಣಿಯ ಮೋಟಾರ್ ಸೈಕಲ್ ಗಳನ್ನು ಮಾರಾಟ ಮಾಡುತ್ತದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಬರೋಬ್ಬರಿ 1131 ಸಿಸಿ ಲಿಕ್ವಿಡ್ ಕೂಲ್ಡ್ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸ್ಕೌಟ್ ಕ್ರೂಸರ್ ಬೈಕ್ 244 ಕೆ.ಜಿ ತೂಕವನ್ನು ಹೊಂದಿದೆ. ಇದು ಗರಿಷ್ಠ 100 ಅಶ್ವಶಕ್ತಿ (97.7 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

1901ನೇ ಇಸವಿಯಲ್ಲಿ ಅಸ್ಥತ್ವಕ್ಕೆ ಬಂದಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ತನ್ನದೇ ಆದ ಕ್ರೂಸರ್ ವ್ಯಕ್ತಿತ್ವವನ್ನು ಮೈಗೂಡಿಸಿ ಬಂದಿದೆ. ಪ್ರಸ್ತುತ ದೇಶದ ವಾಹನ ಮಾರುಕಟ್ಟೆಯ ಸಾಮರ್ಥ್ಯವನ್ನು ಅರಿತುಕೊಂಡಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ದುಬಾರಿ ಬೈಕ್ ಗಳನ್ನು ಪರಿಚಯಿಸಿದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ದೇಶಕ್ಕೆ ಪ್ರವೇಶಿಸುತ್ತಿರುವ ಇಂಡಿಯನ್ ಮೋಟಾರ್ ಸೈಕಲ್ ಬೆಂಗಳೂರು ಶೋ ರೂಂ (ಬೆಂಗಳೂರಿನಲ್ಲಿ ಎಲ್ಲಿ?) ಮುಖಾಂತರ ಆಸಕ್ತ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಹೋರಿಜನ್ ಪವರ್ ವಿಂಡ್ ಶೀಲ್ಡ್, ಟೈರ್ ಪ್ರೆಶರ್ ಮಾನಿಟರಿಂಗ್, ರಿಮೋಟ್ ಲಾಕಿಂಗ್ ಟ್ರಂಕ್, ಸ್ಯಾಡಲ್ ಬ್ಯಾಗ್, ಟ್ಯಾನ್ ಲೆಥರ್ ಸೀಟು, ಕ್ರೂಸ್ ಕಂಟ್ರೋಲ್ ಜೊತೆಗೆ ಎಬಿಎಸ್ ವ್ಯವಸ್ಥೆಗಳು ಇಂಡಿಯನ್ ಬೈಕ್ಸ್ ಗಳ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ.

ಆಯಾಮ

ಆಯಾಮ

ಚಕ್ರಾಂತರ 1562 ಎಂಎಂ

ಸೀಟು ಎತ್ತರ 635 ಎಂಎಂ

ಒಟ್ಟಾರೆ ಅಗಲ 880 ಎಂಎಂ

ಒಟ್ಟಾರೆ ಎತ್ತರ 1207

ಗ್ರೌಂಡ್ ಕ್ಲಿಯರನ್ಸ್ 135 ಎಂಎಂ

ಒಟ್ಟಾರೆ ಉದ್ದ 2311 ಎಂಎಂ

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಇನ್ನುಳಿದಂತೆ ಡಿಜಿಟಲ್ ಟ್ಯಾಕೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್, ಎಂಜಿನ್ ತಾಪಮಾನ, ಕಡಿಮೆ ಇಂಧನ ಮಾಹಿತಿ, ಹೆಡ್ ಲೈಟ್ ಬ್ರೇಕ್ ಲೈಟ್, ಟರ್ನ್ ಸಿಗ್ನಲ್, ಲೈಸನ್ಸ್ ಪ್ಲೇಟ್ ಲೈಟ್, ಸ್ಪೀಡೋಮೀಟರ್ ಮತ್ತು ಇಂಡಿಕೇಟರ್ ಲೈಟ್ಸ್ ಗಳ ಸೇವೆ ಇರಲಿದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಆರು ಸ್ಪೀಡ್ ಗೇರ್ ಹೊಂದಿರುವ ಇಂಡಿಯನ್ ಸ್ಕೌಟ್, ಆಧುನಿಕ ಚಾಲನಾ ತಂತ್ರಗಾರಿಕೆ ಹಾಗೂ ಹಗುರ ಭಾರದ ಚಾಸೀ ನಯವಾದ ಚಾಲನೆ ಜೊತೆಗೆ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಇವೆಲ್ಲದಕ್ಕೂ ಮಿಗಿಲಾಗಿ ಗ್ರಾಹಕರು ತಮ್ಮ ಬಯಕೆಗೆ ಅನುಗುಣವಾಗಿ ಕಸ್ಟಮೈಸ್ಡ್ ಮಾಡುವ ಅವಕಾಶವನ್ನು ಇಂಡಿಯನ್ ಮೋಟಾರ್ ಸೈಕಲ್ಸ್ ಒದಗಿಸುತ್ತದೆ.

ಇಂಡಿಯನ್ ಸ್ಕೌಟ್ ಬೈಕ್‌ನಲ್ಲಿ ಪವರ್ ಸ್ಟಾರ್ ಪುನೀತ್ ಅಬ್ಬರ!

ಒಟ್ಟಿನಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿಂಗ್ ನಡೆಸುತ್ತಿರುವ ಪುನೀತ್ ರಾಜ್ ಕುಮಾರ್ ಅವರಿಗೆ ಈ ಬೆಳ್ಳಿ ಬಣ್ಣದ ಇಂಡಿಯನ್ ಸ್ಕೌಟ್ ಬೈಕ್ ಪರಿಪೂರ್ಣ ಆಯ್ಕೆಯಾಗಿರಲಿದೆ.

ಮತ್ತಷ್ಟು

ದೊಡ್ಮನೆ ಹುಡುಗ ಪುನೀತ್ ಸೂಪರ್ ಬೈಕ್ ಕರಾಮತ್ತು


More from DriveSpark

Article Published On: Monday, September 14, 2015, 9:56 [IST]
English summary
Powerstar Puneeth Rajkumar Proud owner of Indian Motorcycles Smoke Silver Scout
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+