ರಸ್ತೆ ಮೇಲಿನ ಅರಮನೆಯಂತಿರುವ ಕಾರಿನ ಒಡೆಯ ಈ ಖ್ಯಾತ ನಟ: ಅಂತಹದ್ದೇನಿದೆ ವಿಶೇಷತೆಗಳು?
ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಬಾಲಿವುಡ್ ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚೆ ಇರುತ್ತದೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಐಷಾರಾಮಿ ಮತ್ತು ದುಬಾರಿ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ಜೋಡಿ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಹೊಚ್ಚ ಹೊಸ ಲೆಕ್ಸಸ್ ಎಂಪಿವಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಎಸ್‍ಯುವಿಯ ವೀಡಿಯೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ರಣಬೀರ್ ಕಪೂರ್ ವಾಹನದಿಂದ ಇಳಿಯುವುದನ್ನು ಕಾಣಬಹುದು.
ನಟ ಈ ವಾಹನದೊಂದಿಗೆ ಕಾಣಿಸಿಕೊಂಡಿರುವುದು ಬಹುಶಃ ಇದೇ ಮೊದಲು. ಈ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ನಾವು ಭಾರತೀಯ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಯ ಹೊರಗೆ ರಣಬೀರ್ ಅವರ ಲೆಕ್ಸಸ್ LM 350h ಐಷಾರಾಮಿ ಎಂಪಿವಿಯನ್ನು ನೋಡುತ್ತೇವೆ. ಈ ಹೊಸ ಲೆಕ್ಸಸ್ LM 350 ಮಿನಿವ್ಯಾನ್‌ನ ವಿಶೇಷತೆಗಳು ಇಲ್ಲಿದೆ.

ವಿನ್ಯಾಸ: ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಬಗ್ಗೆ ಹೇಳುವುದಾದರೆ, ಇದು ಉತ್ತಮ ಏರೋಡೈನಾಮಿಕ್ಸ್‌ಗಾಗಿ ವಿನ್ಯಾಸದಲ್ಲಿ ಹೊಸ ನವೀಕರಣಗಳನ್ನು ಮಾಡಲಾಗಿದೆ. ಹೊಸ ವಿನ್ಯಾಸದಲ್ಲಿರುವ ಹೊರಭಾಗಗಳು ಹೊಸ ಸ್ಪಿಂಡಲ್ ಬಾಡಿ ಫ್ರಂಟ್ ಗ್ರಿಲ್ ವಿನ್ಯಾಸ ಮತ್ತು ಕ್ರೋಮ್ ಅಸ್ಸೆಂಟ್ ಗಳನ್ನು ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ. ಈ ಐಷಾರಾರಾಮಿ ಮಿನಿವ್ಯಾನ್ ರಸ್ತೆಯಲ್ಲಿ ಹೋಗುವಾಗ ಎಲ್ಲರೂ ನೋಡುವಂತಹ ಮಾಸ್ ಲುಕ್ ಹೊಂದಿದೆ.
ಒಳಭಾಗ: ಈ ಮಿನಿವ್ಯಾನ್ ಒಳಭಾಗವು ಐಷಾರಾಮಿಯಾಗಿದೆ. ಇದು 6/7 ಸೀಟುಗಳ ಆವೃತ್ತಿಗಳು ಹೆಚ್ಚಿನ ಗೋಚರತೆಗಯನ್ನು ಕಡಿಮೆ ಮಾಡುತ್ತದೆ. ಇನ್ನು 4 ಸೀಟುಗಳ ಆವೃತ್ತಿಯು ಕಸ್ಟಮೈಸ್ ಆಯ್ಕೆಯನ್ನು ನೀಡುತ್ತದೆ. ಇದು ಒಂದು ವಿಭಾಗ ಮತ್ತು 48 ಇಂಚಿನ ಅಗಲದ ಡಿಸ್ ಪ್ಲೇ ಯುನಿಟ್ ನೊಂದಿಗೆ ಕಂಡುಬರುತ್ತದೆ. ಇದು ಹಿಂತೆಗೆದುಕೊಳ್ಳುವ ಗ್ಲಾಸ್ ವಿಭಾಗವನ್ನು ಸಹ ಹೊಂದಿದೆ, ಅದು ಮುಂಭಾಗವನ್ನು ಹಿಂದಿನ ವಿಭಾಗಗಳಿಂದ ಪ್ರತ್ಯೇಕಿಸುತ್ತದೆ.

ಫೀಚರ್ಸ್: ಈ ಐಷಾರಾಮಿ ಮಿನಿವ್ಯಾನ್ ಮಾದರಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಟೇಬಲ್ ಮತ್ತು ಲೆದರ್ ಸುತ್ತುವ ಮೇಲ್ಮೈಗಳಿಂದ ಕೂಡಿದೆ. ಅತ್ಯುತ್ತಮವಾದ ಸೌಕರ್ಯವನ್ನು ನೀಡುವ ದೊಡ್ಡ ಸೀಟುಗಳನ್ನು ಸಹ ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಅದರ ಒಳಾಂಗಣದ ಒಂದು ಭಾಗವಾಗಿದೆ.
ಉದ್ದಳತೆ: ಈ ಲೆಕ್ಸಸ್ LM ಮಿನಿವ್ಯಾನ್ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ. ಹೊಸ ಲೆಕ್ಸಸ್ LM 5,125 mm ಉದ್ದ, 1,890 mm ಅಗಲ ಮತ್ತು 1,945 mm ಎತ್ತರವನ್ನು ಹೊಂದಿದೆ. ಇನ್ನು ಈ ಲೆಕ್ಸಸ್ ಮಿನಿವ್ಯಾನ್ 3,000 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಲೆಕ್ಸಸ್ LM 350h ADAS ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿವೆ.
ಎಂಜಿನ್: ಈ ಲೆಕ್ಸಸ್ LM 350h 2.5-ಲೀಟರ್, 4-ಸಿಲಿಂಡರ್, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಐಷಾರಾಮಿ ಎಂಪಿವಿ 250 PS ಮತ್ತು 239 Nm ಗರಿಷ್ಠ ಟಾರ್ಕ್‌ನ ಸಂಯೋಜಿತ ಪವರ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ಲೆಕ್ಸಸ್ LM ಡೋರುಗಳು ಇ-ಲ್ಯಾಚ್ ಸಿಸ್ಟಂನೊಂದಿಗೆ ಅಳವಡಿಸಲ್ಪಟ್ಟಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








