ಸವಾರರೇ ಎಚ್ಚರ! ನಮಗೇ ತಿಳಿಯದಂತೆ ನಮ್ಮೊಂದಿಗೆ ಪ್ರಯಾಣಿಸುತ್ತಿವೆ... ನೋಡಿಕೊಳ್ಳಿ ಒಮ್ಮೆ!

ನಾಗರಹಾವುಗಳು ಬೇಸಿಗೆಯಲ್ಲಿ ಪೊದೆಗಳನ್ನು ಬಿಟ್ಟು ತಂಪಾಗಿರುವ ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ. ಅಂತೆಯೇ ಇತ್ತೀಚೆಗೆ ಹೀರೋ ಪ್ಲೆಷರ್ ಸ್ಕೂಟರ್‌ನ ಮುಂಭಾಗದ ಶೀಲ್ಡ್‌ನಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಿಸಲಾಗಿದೆ. ರಕ್ಷಣೆ ವೇಳೆ ಮಾಡಲಾದ ವೀಡಿಯೊದಲ್ಲಿ, ಸ್ಕೂಟರ್‌ನ ಹೆಡ್‌ಲೈಟ್ ಕವರ್‌ನಿಂದ ಹಾವನ್ನು ಹೊರತೆಗೆಯುತ್ತಿದ್ದಾಗ ಅದು ತುಂಬಾ ಕೋಪಗೊಂಡಿರುವುದನ್ನು ಕಾಣಬಹುದು. ಸ್ಕೂಟರ್‌ನ ಹ್ಯಾಂಡಲ್ ಬಾರ್‌ಗೆ ಕಚ್ಚಲು ಮುಂದಾಗುತ್ತಿರುವುದು ಸಹ ಕಂಡುಬಂದಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಹಾವು ಸಂರಕ್ಷಕ ರಾಜೇಶ್ ಇಂದೋರಿ ಎಂಬುವವರು ಸ್ಕೂಟರ್‌ನಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ವಿಡಿಯೋದಲ್ಲಿ ಹಾವಿನ ರಕ್ಷಣೆಗೆ ಸ್ಥಳಾವಕಾಶ ಕಲ್ಪಿಸಲು ಹೆಡ್‌ಲೈಟ್ ಕವರ್ ಅನ್ನು ಸಡಿಲಗೊಳಿಸಲಾಗಿತ್ತು. ಏಕೆಂದರೆ ಹೆಡ್‌ಲೈಟ್ ಕವರ್ ಒಳಗೆ ಹಾವು ಸಿಲುಕಿಕೊಂಡಿದ್ದು, ಹೆಡ್ ಲೈಟ್ ಹೌಸಿಂಗ್‌ನಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಹಾವು ಸ್ವಲ್ಪ ದಪ್ಪವಾಗಿದ್ದ ಕಾರಣ ಕವರ್‌ನಿಂದ ಹೊರಬರಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಹಾವು ಕಚ್ಚಲು ಮುಂದಾಗುವುದನ್ನು ಸಹ ನೋಡಬಹುದು.

rescue-of-the-cobra-hidden-in-the-scooter-headlight-cover

ಆದರು ಕೂಡ ರಾಜೇಶ್ ಇಂದೋರಿ ಹಾವನ್ನು ಹೊರತೆಗೆಯುವುದನ್ನು ಮುಂದುವರಿಸಿದ್ದರು. ಕೊನೆಗೆ ತುಸು ಹೊರಬಂದ ನಂತರ ಹಾವು ಎಲ್ಲೆಡೆ ವಿಷವನ್ನು ಬಿಡುತ್ತಿದೆ ಎಂದು ಆತ ವಿಡಿಯೋದಲ್ಲಿ ತೋರಿಸಿದ್ದಾರೆ. ನಾಗರಹಾವು ಒಮ್ಮೆ ಹೊರಚಿಮ್ಮುವ ವಿಷದ ಪ್ರಮಾಣವು ಅನೇಕ ವಯಸ್ಕರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕೊನೆಗೂ ಹಾವನ್ನು ಯಶಸ್ವಿಯಾಗಿ ಹೊರತೆಗೆದು ಸ್ಕೂಟರ್ ಮಾಲೀಕ ನಿಟ್ಟುಸಿರು ಬಿಡುವಂತೆ ಮಾಡಿದರು.

ಹೊರತೆಗೆದ ನಂತರ ಹಾವನ್ನು ರಸ್ತೆಯ ಮೇಲೆ ಬಿಟ್ಟು ಶಾಂತವಾಗಿಸಿದ್ದಾರೆ. ಹಾವಿಗೆ ತೊಂದರೆಯಿದೆ ಎಂದು ಭಾವಿಸಿದಾಗ ಮಾತ್ರ ಅದು ಕಚ್ಚಲು ಮುಂದಾಗುತ್ತದೆ, ಈಗ ಯಾರನ್ನು ಕಚ್ಚುತ್ತಿಲ್ಲ ಎಂದು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ. ಹಾಗಾಗಿ ಹಾವನ್ನು ಕಂಡಾಗ ಗಾಬರಿಗೊಂಡು ಅದನ್ನು ಕೊಲ್ಲಲು ಮುಂದಾಗಬಾರದು, ಬದಲಿಗೆ ಅದಕ್ಕೆ ದಾರಿ ಬಿಟ್ಟರೇ ಅದರ ಪಾಡಿಗೆ ಅದು ಹೋಗುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ.

rescue-of-the-cobra-hidden-in-the-scooter-headlight-cover

ಹಾವು ಶಾಂತಗೊಂಡ ನಂತರ ನಿಧಾನವಾಗಿ ಹಾವಿನ ಮುಂದೆ ಚೀಲವನ್ನು ಇರಿಸಿ ಒಳಗೆ ಹೋಗುವಂತೆ ಮಾಡಿದರು. ಕೆಲವು ದಿನಗಳ ಹಿಂದೆ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಈ ಘಟನೆಯಲ್ಲಿ ಹೆಲ್ಮೆಟ್ ಒಳಗೆ ಸೇರಿಕೊಂಡಿದ್ದ ಸಣ್ಣ ವಿಷಕಾರಿಯಲ್ಲದ ಹಾವನ್ನು ಹೆಲ್ಮೆಟ್‌ನಿಂದ ರಕ್ಷಿಸಲಾಗಿದೆ. ಸಾಮಾನ್ಯವಾಗಿ ಹಾವುಗಳು ನಮ್ಮ ಪರಿಚಿತ ಸ್ಥಳಗಳಲ್ಲಿ ವಾಸವಿರುವ ಬಗ್ಗೆ ಗೊತ್ತೇ ಆಗುವುದಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಈ ಹಾವನ್ನು ಹೆಲ್ಮೆಟ್‌ನ ಒಳಭಾಗದಲ್ಲಿನ ಮೇಲ್ಭಾಗದಿಂದ ರಕ್ಷಿಸಲಾಯಿತು, ಅಲ್ಲಿ ಸಾಮಾನ್ಯವಾಗಿ ಹಾವು ವಾಸಿಸುತ್ತಿದೆ ಎಂದು ಯಾರೂ ಶಂಕಿಸುವುದಿಲ್ಲ. ಈ ಹೆಲ್ಮೆಟ್ ಹೊಂದಿದ್ದ ವ್ಯಕ್ತಿಯು ಉದ್ಯಾನವನದೊಳಗೆ ಇದ್ದಾಗ ಹಾವು ಸೇರಿಕೊಂಡಿದೆ ಎಂದು ವರದಿಯಾಗಿದೆ. ಇದರ ನಂತರ, ಪ್ರಾಣಿ ಸಂರಕ್ಷಕರು ಸ್ಥಳಕ್ಕೆ ಬಂದು ಈ ಸಣ್ಣ ಹಾವನ್ನು ಹೆಲ್ಮೆಟ್ ನಿಂದ ರಕ್ಷಿಸಿದ್ದರು.

ಇದು ವಿಷಕಾರಿಯಲ್ಲದ ಸಾಮಾನ್ಯ ಟ್ರಿಂಕೆಟ್ ಹಾವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇಂತಹ ಹಾವುಗಳು ಸಾಮಾನ್ಯವಾಗಿ ಪೊದೆಗಳ ಸುತ್ತಲೂ ಕಂಡುಬರುತ್ತವೆ. ನಮ್ಮ ಸುತ್ತಮುತ್ತಲಿನ ಹವಾಮಾನ ಬದಲಾವಣೆಯು ಹಾವುಗಳನ್ನು ನಮ್ಮ ವಾಸಸ್ಥಳಗಳಿಗೆ ಹತ್ತಿರವಾಗುವಂತೆ ಮಾಡುತ್ತಿದೆ. ಸವಾರರು ಎಚ್ಚರಿಂದ ತಮ್ಮ ವಾಹನಗಳನ್ನು ಆಗಾಗ್ಗೆ ಪರಿಶೀಲಿಸುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 20, 2024, 16:03 [IST]
English summary
Rescue of the cobra hidden in the scooter headlight cover
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+