1.90 ಕೋಟಿ ರು.ಗಳ ಚೆಕ್ ಹಿಂದಿರುಗಿಸಿದ ಆಟೋ ಚಾಲಕ

By Nagaraja

ಇಂದಿನ ಯುಗದಲ್ಲಿ ಪ್ರಾಮಾಣಿಕವಾಗಿ ಮೆರೆಯುವ ವ್ಯಕ್ತಿಗಳನ್ನು ಕಾಣಸಿಗುವುದೇ ಬಲು ಅಪರೂಪ. ಹಾಗಿರುವಾಗ ಯುವ ಜನಾಂಗಕ್ಕೆ ಮಾದರಿಯಾಗಿರುವ ರಿಕ್ಷಾ ಚಾಲಕನೊಬ್ಬ ಬರೋಬ್ಬರಿ 1.90 ಕೋಟಿ ರು.ಗಳ ಚೆಕ್ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಗುಜರಾತ್‌ನಿಂದ ಇದು ವರದಿಯಾಗಿದ್ದು, ಟಾಟಾ ನ್ಯಾನೋ ಕಾರು ನಿರ್ಮಾಣ ಘಟಕಕ್ಕಾಗಿ ಸನಂದ್‌ನಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಮೂರು ಬಿಘಾ ಭೂಮಿಗೆ ಪ್ರತಿಯಾಗಿ ತನ್ನ ಹೆಸರಿಗೆ ನೀಡಿದ್ದ 1.90 ಕೋಟಿ ರು.ಗಳ ಚೆಕನ್ನು ಆಟೋ ಚಾಲಕ ರಾಜು ಭಾರ್ವಾಡ್ ವಾಪಾಸು ಕೊಟ್ಟಿದ್ದಾರೆ.

ಈ ಹಿಂದೆ ತಮ್ಮ ಹೆಸರನಲ್ಲಿದ್ದ ಜಮೀನನ್ನು ರಾಜು ಮಾರಾಟ ನಡೆಸಿದ್ದರು. ಆದರೆ ಹೊಸ ಮಾಲಕ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿರದ ಕಾರಣ ಪರಿಹಾರದ ಮೊತ್ತ ರಾಜು ಅವರ ತಾಯಿ ಬಾಲುಬೆನ್ ಹೆಸರಿಗೆ ಬಂದಿತ್ತು. ಆದರೆ ತನ್ನದಲ್ಲದ ಜಮೀನಿಗೆ ಪರಿಹಾರ ಪಡೆದುಕೊಳ್ಳಲು ಹಿಂದೇಟು ಹಾಕಿರುವ ರಾಜು ಚೆಕ್ ಹಿಂತಿರುಗಿಸಿದ್ದಾರೆ.

ಅಷ್ಟಕ್ಕೂ ರಾಜುವಿಗೆ ನೀಡಿದ ಚೆಕ್ ನಗದಿಕರಿಸಿಕೊಳ್ಳಬಹುದಾಗಿತ್ತು. ಆದರೆ ರಾಜು ಪ್ರಾಮಾಣಿಕತೆಗೆ ಅವರ ಕುಟುಂಬ ಕೂಡಾ ಸಾಥ್ ನೀಡಿತ್ತು. ಈ ಮೂಲಕ ಚೆಕ್ ಹಿಂತಿರುಗಿಸಲು ನಿರ್ಧರಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜು, ತಿಂಗಳಿಗೆ ಕೇವಲ 6000 ರು. ಗಳಿಸಿ ಕುಟುಂಬ ಜತೆ ಬದುಕುತ್ತಿದ್ದೇನೆ. ಅಪ್ರಾಮಾಣಿಕವಾಗಿ ಚೆಕ್ ಬಳಸಿಕೊಳ್ಳಬಹುದಾಗಿತ್ತು. ಆದರೆ ಇದರಿಂದ ನನ್ನ ಕುಟುಂಬದ ನೆಮ್ಮದಿ ಹಾಳಾಗುತ್ತಿತ್ತು. ನನ್ನ ಹೆಸರಿಲ್ಲಿರುವ ನಾಲ್ಕು ಬಿಘಾ ಜಮೀನು ಮೂವರು ಮಕ್ಕಳ ಭವಿಷ್ಯಕ್ಕೆ ಸಾಕು ಎಂದಿದ್ದಾರೆ.

More from DriveSpark

Article Published On: Friday, May 17, 2013, 11:31 [IST]
English summary
An Ahmedabad auto rickshaw driver has returned Rs 1.90 crore cheque issued in his name in lieu of three bigha land acquired for Tata's Nano plant in Sanand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+