ಒಂದೆರಡಲ್ಲ, ಭರ್ಜರಿ 5,000 ಕೀ.ಮೀ; ಶಿಲ್ಲಾಂಗ್‌ನಿಂದ ಕೊಚ್ಚಿಗೆ ರಿಕ್ಷಾ ಓಟ
ಈಶಾನ್ಯ ಭಾರತದ ಪರ್ವತ ರಾಜ್ಯ ಮೇಘಾಲಯದ ರಾಜಧಾನಿ ಶಿಲ್ಲಾಂಗ್. ಭಾರತದಲ್ಲೇ ಅತಿ ಹೆಚ್ಚು ಬೀಳುವ ಪ್ರದೇಶ ಚಿರಾಪುಂಜಿ ಕೂಡಾ ಇದೇ ರಾಜ್ಯದಲ್ಲಿದೆ. ಈಗ ಈ ಮಳೆಗಾಲದಲ್ಲಿಮೇಘಾಲಯದ ಶಿಲ್ಲಾಂಗ್‌ನಿಂದ ದಕ್ಷಿಣ ಭಾರತದ ನೆಚ್ಚಿನ ಪ್ರವಾಸಿ ತಾಣ 'ದೇವರ ನಾಡು' ಎಂದೇ ಪ್ರಸಿದ್ಧಿ ಪಡೆದಿರುವ ಕೇರಳದ ಕೊಚ್ಚಿಗೆ ರಿಕ್ಷಾ ಓಟವನ್ನು ಏರ್ಪಡಿಸಲಾಗುತ್ತಿದೆ.
ಬ್ರಿಟನ್ ತಳಹದಿಯ ಪ್ರತಿಷ್ಠಿತ ಸಂಸ್ಥೆಯೊಂದು ಭಾರತೀಯ ಜನರ ಜೀವನಾಡಿಯಾಗಿರುವ ಈ ರಿಕ್ಷಾ ಓಟವನ್ನು ಆಯೋಜಿಸುತ್ತಿದೆ. ಸರಿ ಸುಮಾರು 5000 ಕೀ.ಮೀ. ದೂರ ಕ್ರಮಿಸುವ ಈ ವಿಶಿಷ್ಟ ಓಟದ ಸಮಗ್ರ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

2006ನೇ ಇಸವಿಯಿಂದಲೇ ಬ್ರಿಟನ್ ತಳಹದಿಯ ಲೀಗ್ ಆಫ್ ಅಡ್ವೆಂಚರಿಸ್ಟ್ ಸಂಸ್ಥೆಯು ವರ್ಷಂಪ್ರತಿ ಆಟೋ ರಿಕ್ಷಾ ಓಟವನ್ನು ಏರ್ಪಡಿಸುತ್ತಲೇ ಬಂದಿದೆ.

ಇಡೀ ವಿಶ್ವದಲ್ಲೇ ಅತಿ ದೊಡ್ಡ ರಿಕ್ಷಾ ಸ್ಪರ್ಧಾಕೂಟವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಜಗತ್ತಿನೆಲ್ಲೆಡೆಯ ಕೆಚ್ಚೆದೆಯ ಚಾಲಕರು ಈಗ ಶಿಲ್ಲಾಂಗ್ ನಿಂದ ಒಟ್ಟಾಗಿ ಸ್ಪರ್ಧೆ ಆರಂಭಿಸಿದ್ದಾರೆ. ಈ ಸಾಹಸಗಾಥೆಯು ಕೇರಳದ ಕೊಚ್ಚಿಯಲ್ಲಿ ಅಂತ್ಯಗೊಳ್ಳಲಿದೆ.

ಇಲ್ಲಿನ ಗಮನಾರ್ಹ ಅಂಶವೆಂದರೆ ತಂಡಗಳ ಜೊತೆ ಯಾವುದೇ ನಿರ್ದಿಷ್ಟ ರೂಟ್ ಮ್ಯಾಪ್ ಹಂಚಿಕೊಳ್ಳಲಾಗುವುದಿಲ್ಲ. ಅಲ್ಲದೆ ದಾರಿ ಮಧ್ಯೆ ಯಾವುದೇ ಸಹಾಯಿ ತಂಡಗಳು ಇವರನ್ನು ಹಿಂಬಾಲಿಸುವುದಿಲ್ಲ.

ಅಂದರೆ ಸ್ಪರ್ಧಾಳುಗಳೇ ಸಂಪೂರ್ಣ ಹೊಣೆ ಹೊತ್ತುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದೆ.

ಆಗಸ್ಟ್ 05ರಂದು ಆರಂಭವಾಗಿರುವ 2015ನೇ ಸಾಲಿನ ರಿಕ್ಷಾ ಓಟದಲ್ಲಿ ಒಟ್ಟು 83 ತಂಡಗಳು ಭಾಗವಹಿಸುತ್ತಿದೆ.

ಈ ಎಲ್ಲ ಸ್ಪರ್ಧಾಳುಗಳು 23 ವಿವಿಧ ರಾಷ್ಟ್ರಗಳನ್ನು ಪ್ರತಿನಿಧಿಸುತ್ತಿರುವುದು ಮಗದೊಂದು ವಿಶೇಷ.

ಸಾಹಸ ಪ್ರಿಯರಾದ ಇಂತಹ ಚಾಲಕರು ರಿಕ್ಷಾಗಳಲ್ಲಿ ವಿವಿಧ ರೀತಿಯ ಸ್ಟಂಟ್ ಶೋಗಳನ್ನು ಪ್ರದರ್ಶಿಸಲಿದ್ದಾರೆ.

ಪ್ರಸ್ತುತ ಆಟೋ ರಿಕ್ಷಾ ಓಟವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಹೊರಟಿರುವ ಪ್ರತಿಯೊಂದು ರಿಕ್ಷಾ ತಂಡಗಳು £1000 (ಸರಿ ಸುಮಾರು ಒಂದು ಲಕ್ಷ ರುಪಾಯಿ) ದಾನ ಮಾಡಲಿದೆ.

ಈ ಪೈಕಿ ಅರ್ಧದಷ್ಟು ಸಂಗ್ರಹವು ಕೂಲ್ ಅರ್ಥ್ ಮಳೆಕಾಡು ಸಂರಕ್ಷಣಾ ನಿಧಿಗೆ ಸೇರಲಿದೆ.

ಇನ್ನು ಸಂಸ್ಥೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಬ್ರಿಸ್ಟಾಲ್ ತಳಹದಿಯ ಲೀಗ್ ಆಫ್ ಅಡ್ವೆಂಚರಿಸ್ಟ್ ಇಂಟರ್ ನ್ಯಾಷನಲ್ ಈಗಾಗಲೇ ವಿಶ್ವದ್ಯಾಂತ ಇಂತಹ ಹಲವಾರು ಸ್ಪರ್ಧಾಕೂಟಗಳನ್ನು ಏರ್ಪಡಿಸುವ ಮೂಲಕ ಜನಪ್ರಿಯತೆ ಸಾಧಿಸಿದೆ.

ಇದೊಂದು ಮಜಾ ಮಾಡಲು ಹಾಲಿಡೇ ಪ್ಯಾಕೇಜ್ ಅಲ್ಲ. ಬದಲಾಗಿ ನೈಜ ಭಾರತವನ್ನು ತೋರಿಸುವುದೇ ಯೋಜನೆಯ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸುತ್ತದೆ.

ತಂಡಗಳು ಅರ್ಧ ದಾರಿಯಲ್ಲಿ ಅಡೆತಡೆ ಎದುರಿಸಿದಾಗ ಎಲ್ಲ ನಿರೀಕ್ಷೆಗಳು ಕೈಬಿಟ್ಟಾಗ ವಿಶಾಲ ಹೃದಯಿ ಭಾರತೀಯ ಅಕ್ಕರೆಯ ಪ್ರೀತಿಯನ್ನು ಪಡೆಯಬಹುದಾಗಿದೆ. ಇಂತಹ ನಿರರ್ಥಕ ಸ್ನೇಹ ಅವರೆಂದು ಅನುಭವಿಸಿರಲಾರರು ಎಂದು ಸಂಸ್ಥೆಯು ವಿವರಿಸುತ್ತದೆ.

ಭಾರತದ ಕಡಿಮೆ ಪ್ರಯಾಣ ಮಾಡುವ ಪ್ರವಾಸಿ ತಾಣಗಳ ಸೌಂದರ್ಯ ಗಮನ ಸೆಳೆಯುವುದು ಸಹ ಸ್ಪರ್ಧೆಯ ಉದ್ದೇಶವಾಗಿದೆ.

ಈಗಾಗಲೇ £2,000,000 (ಸರಿ ಸುಮಾರು 19.80 ಕೋಟಿ ರುಪಾಯಿ) ಸಂಗ್ರಹಿಸಿರುವ ಆಯೋಜಕರು ಕೂಲ್ ಅರ್ಥ್ ಸಹಯಾರ್ಥ ಕಾರ್ಯಕ್ರಮಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

ಇವೆಲ್ಲದಕ್ಕೂ ಮಿಗಿಲಾಗಿ ವಿಶ್ವದ್ಯಾಂತ ಮಳೆಕಾಡು ಪ್ರದೇಶದಲ್ಲಿ 1.5 ಲಕ್ಷ ಮರಗಳ ರಕ್ಷಣೆಗಾಗಿ ಬೇಕಾದಷ್ಟು ನಿಧಿಯನ್ನು ಸಂಗ್ರಹಿಸಿಟ್ಟಿದೆ.


Click it and Unblock the Notifications








