ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

By Nagaraja

18ನೇ ಶತಮಾನದಲ್ಲಿ ಸಾಮ್ರಾಜ್ಯಶಾಹಿ ಬ್ರಿಟಿಷರ ಆಡಳಿತದ ವಿರುದ್ದ ಹೋರಾಡಿ ವೀರ ಮರಣವನ್ನಪ್ಪಿರುವ ದೇಶದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೈಸೂರು ಸಂಸ್ಥಾನದ ರಾಜ ಟಿಪ್ಪು ಸುಲ್ತಾನ್ ಇಂದಿಗೂ 'ಮೈಸೂರು ಹುಲಿ' (ಶೇರ್-ಎ-ಮೈಸೂರ್) ಎಂಬ ಬಿರುದಿನಿಂದ ಗುರುತಿಸಿಕೊಂಡಿದ್ದಾರೆ.

ಇಂದಿನ ಈ ಲೇಖನದಲ್ಲಿ 'ಟಿಪ್ಪು ಸಾಹಿಬ್' ಅವರನ್ನು ಮಗದೊಮ್ಮೆ ನೆನಪಿಸಿಕೊಳ್ಳಲು ಕಾರಣವೊಂದಿದೆ. ಏಕೆಂದರೆ ಬ್ರಿಟನ್‌ನ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್, ಮೈಸೂರು ರಾಜ ಟಿಪ್ಪುವಿನಿಂದ ಸ್ಪೂರ್ತಿ ಪಡೆದುಕೊಂಡು ಹೊಸತಾದ ಕಸ್ಟಮೈಸ್ಡ್ 'ಘೋಸ್ಟ್ ಮೈಸೂರು ಕಲೆಕ್ಷನ್' ಕಾರನ್ನು ತಯಾರಿಸಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

"ಈ ಜಗತ್ತಿನಲ್ಲಿ ನೂರಾರು ವರ್ಷ ಕುರಿಯಾಗಿ ಜೀವಿಸುವ ಬದಲು ಎರಡು ದಿನ ಹುಲಿಯಾಗಿ ಬದಕಲು ಬಯಸುತ್ತೇನೆ" ಎಂಬ ಮೈಸೂರು ಸುಲ್ತಾನನ ಕೆಚ್ಚೆದೆಯ ನುಡಿಗಳು ಇಂದಿಗೂ ಚಿರಪರಿಚಿತವಾಗಿದೆ. ಹಾಗೆ ತಮ್ಮ ಆಡಳಿತ ಕಾಲದಲ್ಲ ಅರಬಿಯನ್ನರ ಜೊತೆ ಉತ್ತಮ ವಾಣಿಜ್ಯ ಬಾಂಧವ್ಯ ಕಾಪಾಡಿಕೊಳ್ಳಲು ಟಿಪ್ಪು ಯಶಸ್ವಿಯಾಗಿದ್ದರು.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಅರಬಿ ಭಾಷೆಯಲ್ಲೂ ಮೈಸೂರು ಎಂಬ ಪದ ಸಂಪತ್ತು ಹಾಗೂ ಅಧಿಕಾರವನ್ನು ಸೂಚಿಸುತ್ತದೆ. ಈಗ ಟಿಪ್ಪು ಯಶಸ್ಸಿನ ಸಂಕೇತವಾಗಿ ಘೋಸ್ಟ್ ಮೈಸೂರು ಕಲೆಕ್ಷನ್ ತಯಾರಿಸಲಾಗುತ್ತದೆ. ಇದು ಸೀಮಿತ ಮೂರು ಆವೃತ್ತಿಗಳಷ್ಟೇ ನಿರ್ಮಾಣವಾಗಲಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಟಿಪ್ಪು ಮೈಸೂರು ಘೋಸ್ಟ್ ಕಲೆಕ್ಷನ್ ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿದೆ. ಕಾರಿನೊಳಗಿರುವ ಆಸನದ ಮೇಲಿನ ಹೆಡ್‌ರೈಸ್ಟ್‌ನಲ್ಲಿ ಹುಲಿಯ ಲಾಂಛನವನ್ನು ಕಾಣಬಹುದಾಗಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಇನ್ನು ಕಾರಿನ ಹೊರಮೈಯನ್ನು ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಲಾಂಛನದೊಂದಿಗೆ ಆಲಂಕರಿಸಲಾಗಿದೆ. ಹಾಗೆಯೇ ರಾಯಲ್ ಬ್ಲೂ ಹಾಗೂ ಸಿಲ್ವರ್ ಬಣ್ಣಗಳ ಮಿಶ್ರಣವನ್ನು ಪಡೆದುಕೊಂಡಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಕಾರಿನೊಳಗೂ ವುಡನ್ ಡ್ಯಾಶ್ ಬೋರ್ಡ್‌ನಲ್ಲೂ ನವಿಲು ಗರಿಯನ್ನು ಕಾಣಬಹುದಾಗಿದೆ. ಪ್ರಸ್ತುತ ಕಾರು ಅಬುದಾಬಿಯಲ್ಲಿ ಮಾತ್ರ ಲಭ್ಯವಾಗಲಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಸಂಪೂರ್ಣ ಲೆಥರ್ ಇಂಟಿರಿಯರ್ ಜೊತೆಗೆ ವೈಡೂರ್ಯದ ಬಣ್ಣವು ನಿಜಕ್ಕೂ ಮೈಸೂರು ರಾಜನಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಒಟ್ಟಿನಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ದೇಶಕ್ಕಾಗಿ ಹೋರಾಡಿದ 'ನಾಗರಿಕ ಟಿಪ್ಪು ಸುಲ್ತಾನ್' ಸಾಹಸಗಾಧೆ ಇಂದಿಗೂ ಅರಬ್ ದೇಶಗಳಲ್ಲಿ ಕೊಂಡಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

More from DriveSpark

Article Published On: Tuesday, March 3, 2015, 11:46 [IST]
English summary
Tipu Sultan was the ruler of 18th century Mysore in India. In Arabic, Mysore also refers to wealth and power. The Bespoke Ghost Mysore Collection takes inspiration from this, and each of these extended wheelbase models are adorned with symbols of success. Ghost Mysore will be available exclusively in Abu Dhabi. Only three have been created.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+