ಐಷಾರಾಮಿ ರೋಲ್ಸ್ ರಾಯ್ಸ್ ಕಾರಿಗೆ ಅಗೌರವ ?
ಅಂತಿಂಥ ಮಹಾನ್ ತಾರೆಯರೇ ತಮ್ಮ ನೆಚ್ಚಿನ ರೋಲ್ಸ್ ರಾಯ್ಸ್ ಕಾರುಗಳನ್ನು ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕು. ಹಾಗಿರುವಾಗ ಐಷಾರಾಮಿ ರೋಲ್ಸ್ ರಾಯ್ಸ್ ಕಾರಿಗೆ ತುಕ್ಕು ಹಿಡಿದಿರುವುದು ವಾಹನ ಪ್ರೇಮಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.
ಅಮೆರಿಕ ಮೂಲದ ಪ್ರೀಮಿಯಂ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಆಗಿರುವ ಪ್ಲಾಟಿನಂ ಮೋಟಾರು ಕಾರ್ಸ್ ಬಳಿಯಿಂದ ಇಂತಹದೊಂದು ದೃಶ್ಯ ಬಯಲಾಗಿದೆ. ಆದರೂ ರೋಲ್ಸ್ ರಾಯ್ಸ್ ಗೆ ಇಂತಹ ಗತಿ ಎದುರಾಗಿರುವುದು ಆಸಕ್ತಿಯನ್ನು ಕೆರಳಿಸಿದೆ.

ಬ್ರಿಟನ್ ನ ಐಕಾನಿಕ್ ರೋಲ್ಸ್ ರಾಯ್ಸ್ ಟ್ಯಾಕ್ಸಿ ಕಾರಿಗೆ ಹಳದಿ ಬಣ್ಣವನ್ನು ಬಳಿಯಲಾಗಿದೆ. ಇನ್ನು ತುಕ್ಕು ಹಿಡಿದಂತೆ ಭಾಸವಾಗುವ ರೀತಿಯಲ್ಲಿ ದೇಹ ವಿನ್ಯಾಸವನ್ನು ರಚಿಸಲಾಗಿದೆ.

1990ರ ದಶಕದ ಆರ್ಕೇಡ್ ರೇಸರ್ 'ಕ್ರೇಜಿ ಟ್ಯಾಕ್ಸಿ' ಗೌರವಾರ್ಥವಾಗಿ ಹಳದಿ ವರ್ಣದ ರೋಲ್ಸ್ ರಾಯ್ಸ್ ಘೋಸ್ಟ್ ಟ್ಯಾಕ್ಸಿ ಕಾರನ್ನು ಪರಿಚಯಿಸಲಾಗಿದೆ.

ಮಿಚಿಗನ್‌ನ ಡೆಟ್ರಾಯ್ಟ್ ತಳಹದಿಯ ಪ್ರೀಮಿಯಂ ಕಾರು ಡೀಲರ್ ನಿರ್ಮಿಸಿರುವ ಈ ಕಾರಿನ ಮಾಲಿಕ ಜೋನಥನ್ ಸ್ಮಿತ್ ಅವರಾಗಿದ್ದಾರೆ.

ವಿವಿಧ ಕ್ರಾಸ್ ಕಂಟ್ರೋ ರಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಅದರಲ್ಲೂ ಮುಖ್ಯವಾಗಿ ಮೋಟಾರು ಸಿಟಿ ರಾಲಿಯಲ್ಲಿ ಭಾಗವಹಿಸಲು ಇದನ್ನು ನಿರ್ಮಿಸಲಾಗಿದೆ.

ಕ್ಲಾಸಿಕ್ ಟ್ಯಾಕಿ ಕ್ಯಾಬ್ ತರಹನೇ ಗೋಚರಿಸಲು ಕಾರಿನ ಹೊರಮೈಯಲ್ಲಿ ವಿನೈಲ್ ಹಚ್ಚಲಾಗಿದೆ. ಇದು ವಿಶ್ವದ ಪ್ರತಿಷ್ಠಿತ ಕಾರಿಗೆ ವಿನೂತನ ನೋಟ ನೀಡುವಂತಾಗಿದೆ.


Click it and Unblock the Notifications








