ನಿಮ್ಮ ಕಾರಿನಲ್ಲಿ ಸನ್‌ರೂಫ್ ಇದೆಯೇ? ಹಾಗಾದ್ರೆ ಎಚ್ಚರ! ನಿಮಗೂ ದಂಡ ಬೀಳಬಹುದು...
ಪ್ರಯಾಣ ಮಾಡುವಾಗ ಆಕಾಶವನ್ನು ಆನಂದಿಸಲು ಹಾಗೂ ಕಾರಿನ ಒಳಗೆ ನೈಸರ್ಗಿಕ ಗಾಳಿಗೆ ಅನುವು ಮಾಡಿಕೊಡಲು ಕಾರಿನಲ್ಲಿ ಸನ್‌ರೂಫ್ ನೀಡುವ ಮುಖ್ಯ ಉದ್ದೇಶವಾಗಿದೆ. ಆದರೆ ಭಾರತದಲ್ಲಿ ಸನ್‌ರೂಫ್ ಅನ್ನು ಅನಗತ್ಯ ವಿಷಯಗಳಿಗೆ ಬಳಕೆ ಮಾಡಲಾಗುತ್ತಿದೆ. ಜನರು ತಮ್ಮ ಕಾರುಗಳ ಸನ್‌ರೂಫ್‌ಗಳಿಂದ ಎದ್ದು ನಿಲ್ಲಲು ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಕಾನೂನು ಬಾಹಿರ ಹಾಗೂ ತುಂಬಾ ಅಪಾಯಕಾರಿಯಾಗಿರುವುದರಿಂದ ಪೊಲೀಸರ ಗಮನಕ್ಕೆ ಬಂದರೆ ದಂಡ ವಿಧಿಸುತ್ತಾರೆ. ಇತ್ತೀಚೆಗೆ ಸನ್‌ರೂಫ್ ಅನ್ನು ದುರುಪಯೋಗಪಡಿಸಿಕೊಂಡ ಬೆಂಗಳೂರಿನ ಚಾಲಕರೊಬ್ಬರಿಗೆ ಸಂಚಾರ ಪೊಲೀಸರು 1000 ರೂ.ಗಳ ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಮಾರತ್ತಹಳ್ಳಿ ಮುಖ್ಯ ರಸ್ತೆಯಲ್ಲಿ ಕಾರು ಮಾಲೀಕರೊಬ್ಬರು ತಮ್ಮ ಮಗುವನ್ನು ಸನ್‌ರೂಫ್‌ನಿಂದ ಹೊರಬಂದು ನಿಲ್ಲಲು ಪ್ರೋತ್ಸಾಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೆ ಬರುತ್ತಿದ್ದ ಪ್ರಯಾಣಿಕರೊಬ್ಬರು ಇದನ್ನು ಸೆರೆಹಿಡಿದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಈ ಸಣ್ಣ ವಿಡಿಯೋದಲ್ಲಿ, ಸಾಕಷ್ಟು ದಟ್ಟಣೆಯಿಂದ ಕೂಡಿರುವ ರಸ್ತೆಯನ್ನು ನೋಡಬಹುದು.

ಪೋಸ್ಟ್ ಮಾಡಿರುವ ವ್ಯಕ್ತಿಯು " ಈ ಕಾರಣದಿಂದಲೇ ಭಾರತೀಯರು ಕಾರುಗಳಲ್ಲಿ ಸನ್‌ರೂಫ್ ಪಡೆಯಲು ಅರ್ಹರಲ್ಲ. ಬುದ್ಧಿಹೀನ ಪೋಷಕರು ತಮ್ಮ ಮಕ್ಕಳೊಂದಿಗೆ ಇಂತಹ ಕೃತ್ಯಗಳನ್ನು ಮಾಡುತ್ತಾರೆ! ಅದೂ ಭಾರೀ ದಟ್ಟಣೆಯಲ್ಲಿ, ಇಂತಹ ಸಂದರ್ಭಗಳಲ್ಲಿ ಹಠಾತ್ ಬ್ರೇಕಿಂಗ್ ತುಂಬಾ ಅಪಾಯಕಾರಿ, ಇದು ಮಾರತ್ತಹಳ್ಳಿ ಹೊರ ವರ್ತುಲ ರಸ್ತೆ ಎಂದು ಬರೆದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಪೋಸ್ಟ್ ಪ್ರಕಾರ, ಇದು ಜನನಿಬಿಡ ಮಾರತ್ತಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದ್ದು, HAL ಸಂಚಾರ ಪೊಲೀಸರು ಪೋಸ್ಟ್ ಅನ್ನು ಗಮನಿಸಿ ತಮ್ಮ ತನಿಖೆಯನ್ನು ನಡೆಸಿದ್ದರು. ಕೊನೆಗೂ ವಾಹನ ಮಾಲೀಕರನ್ನು ಪತ್ತೆಹಚ್ಚಿ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ 1000 ರೂ.ಗಳ ದಂಡವನ್ನು ವಿಧಿಸಿದ್ದಾರೆ. ಪೊಲೀಸರ ತ್ವರಿತ ಕ್ರಮಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಅವರು ಇಂತಹ ನಡವಳಿಕೆಯ ಅಪಾಯಗಳನ್ನು ಒತ್ತಿಹೇಳುತ್ತಾ, "ಚಲಿಸುವ ಕಾರಿನಿಂದ ಹೊರಬರಲು ಯಾರನ್ನಾದರೂ ಅನುಮತಿಸುವುದು ಅಸುರಕ್ಷಿತ ಚಾಲನಾ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಯಾವುದೇ ಅಪಘಾತಗಳನ್ನು ನಾವು ದಾಖಲಿಸದಿದ್ದರೂ, ಇದು ಕಾನೂನುಬಾಹಿರ. ಇಂತಹ ಉಲ್ಲಂಘನೆಗಳಿಗೆ 1,000 ರೂ.ಗಳ ದಂಡ, ಮತ್ತೆ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಬಹಳಷ್ಟು ಭಾರತೀಯ ಕಾರು ಖರೀದಿದಾರರು ಈಗ ಸನ್‌ರೂಫ್ ಹೊಂದಿರುವ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಒಂದು ಕಾಲದಲ್ಲಿ ಹೈ ಎಂಡ್ ಕಾರುಗಳಿಗೆ ಐಷಾರಾಮಿ ವೈಶಿಷ್ಟ್ಯವೆಂದು ಪರಿಗಣಿಸಲಾಗಿದ್ದ ಈ ವೈಶಿಷ್ಟ್ಯವು, ಈಗ ಭಾರತದ ಅನೇಕ ಕೈಗೆಟುಕುವ ವಾಹನಗಳಲ್ಲಿ ಲಭ್ಯವಿದೆ. ಆದರೆ ದುರುಪಯೋಗಪಡಿಸಿಕೊಂಡರೆ ಸಂಭಾವ್ಯ ಅಪಾಯಗಳು ಕೂಡ ಕಟ್ಟಿಟ್ಟ ಬುತ್ತಿ.
ಸನ್‌ರೂಫ್‌ನಿಂದ ಹೊರಗೆ ಬಂದಾಗ ಹಠಾತ್ ಬ್ರೇಕಿಂಗ್ ಅಥವಾ ಧಿಡೀರ್ ತಿರುವುಗಳನ್ನು ತೆಗೆದುಕೊಂಡಾಗ ವಾಹನದಿಂದ ಹೊರ ಬೀಳುವ ಸಾಧ್ಯತೆಗಳು ಇರುತ್ತವೆ. ಸನ್‌ರೂಫ್ ನಿಂದ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡುವಾಗ ನಮ್ಮ ಗಮನ ಬೇರೆಡೆಗೆ ಸೆಳೆಯುವ ಚಟುವಟಿಕೆಗಳಲ್ಲಿ ತೊಡಗುವುದು ಅಪಘಾತಗಳಿಗೆ ಕಾರಣವಾಗಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








