ಒಂದು ಕಾಲದ ಶಾಲಾ ಶಿಕ್ಷಕ ಇಂದು ದುಬಾರಿ ರೋಲ್ಸ್ ರಾಯ್ಸ್ ಮಾಲೀಕ: ಯಾರೀತ?

ಹಣ ಮಾಡಲು ಹಲವು ದಾರಿಗಳಿವೆ, ಇತ್ತೀಚೆಗೆ ಸುಲಭವಾಗಿ ಹಣ ಗಳಿಸಲು ಯುವಜನತೆ ಸೋಷಿಯಲ್ ಮೀಡಿಯಾ ಮೊರೆ ಹೋಗುತ್ತಿದ್ದಾರೆ. ಯೂಟ್ಯೂಬ್, ಇನ್‌ಸ್ಟಾಗ್ರಾಂನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣ ಮಾಡುತ್ತಿರುವ ಅನೇಕ ಜನರು ನಮ್ಮ ಸುತ್ತಲೂ ಇದ್ದಾರೆ. ಆದರೆ ಇನ್ನೂ ಕೆಲವರು ತಮ್ಮ ಕಠಿಣ ಪರಿಶ್ರಮ ನಂಬಿಕೊಂಡು ಕೋಟಿಗಟ್ಟಲೇ ಹಣ ಮಾಡಿದವರು ಇದ್ದಾರೆ. ಇಂತಹ ವ್ಯಕ್ತಿಗಳು ಕಾಣಸಿಗುವುದು ತುಂಬಾ ಅಪರೂಪ. ಇದೇ ಸಾಲಿಗೆ ಸೇರುವ ವ್ಯಕ್ತಿಯೊಬ್ಬರು ಒಂದು ಕಾಲದಲ್ಲಿ ಶಾಲಾ ಶಿಕ್ಷಕನಾಗಿ ಈಗ ಕೋಟೀಶ್ವರರಾಗಿ ಹಲವರಿಗೆ ಮಾದರಿಯಾಗಿದ್ದಾರೆ. ಇವರು ದುಬೈನಿಂದ ಭಾರತಕ್ಕೆ ದುಬಾರಿ ಕಾರನ್ನು ತರಿಸಿಕೊಂಡಿದ್ದಾರೆ. ಯಾರೀತ? ಬನ್ನಿ ನೋಡೋಣ.

ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಪ್ರಸ್ತುತ ಭಾರತದ ಷೇರು ಮಾರುಕಟ್ಟೆ ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಪಿ.ಆರ್ ಸುಂದರ್ ಸದ್ಯ ಈ ಲೇಖನದ ಹೀರೋ. ಇದು ಆಟೋಮೊಬೈಲ್ ಸೈಟ್ ಆಗಿರುವುದರಿಂದ ನೇರವಾಗಿ ವಿಷಯಕ್ಕೆ ಬರೋಣ. ಪಿ.ಆರ್ ಸುಂದರ್ ಅವರು ದುಬೈನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೊಂದಿದ್ದಾರೆ. ಭಾರತದಲ್ಲಿ ಈ ಕಾರಿನ ಬೆಲೆ ಸುಮಾರು 14 ಕೋಟಿ ರೂ.

school-teacher-pr-sundar-become-rolls-royce-owner

ಈ ಕಾರನ್ನು ಪಿ.ಆರ್ ಸುಂದರ್ ಇತ್ತೀಚೆಗೆ ಕಾರ್‌ನೆಟ್ ಮೂಲಕ ಚೆನ್ನೈಗೆ ತರಿಸಿಕೊಂಡಿದ್ದಾರೆ. ಅವರು ಕಾರ್‌ನೆಟ್ ಮೂಲಕ ತರಿಸಿರುವುದರಿಂದ ಕಾರನ್ನು ಕೆಲ ತಿಂಗಳುಗಳವರೆಗೆ ಮಾತ್ರ ಭಾರತದಲ್ಲಿ ಇಡಬಹುದು. ತಿಳಿಯದವರಿಗೆ ಕಾರ್‌ನೆಟ್‌ ಎಂಬುದು ಸರಕುಗಳಿಗೆ ನೀಡುವ ತಾತ್ಕಾಲಿಕ ಪಾಸ್‌ಪೋರ್ಟ್ ಎಂದು ಹೇಳಬಹುದು. ಕಾರ್‌ನೆಟ್ ಬಳಸಿ, ಒಬ್ಬ ವ್ಯಕ್ತಿಯು ನಿರ್ದಿಷ್ಟ ವಾಹನದ ಮೇಲೆ ಆಮದು ತೆರಿಗೆ ಮತ್ತು ಸುಂಕವನ್ನು ಪಾವತಿಸದೆ ಭಾರತಕ್ಕೆ ಕಾರನ್ನು ಆಮದು ಮಾಡಿಕೊಳ್ಳಬಹುದು.

ಆದರೆ ಕಾರ್‌ನೆಟ್‌ಗೆ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕಾರನ್ನು ಸಾಮಾನ್ಯವಾಗಿ 6 ರಿಂದ 12 ತಿಂಗಳ ಅವಧಿಗೆ ಆಮದು ಮಾಡಿಕೊಳ್ಳಲಾಗುತ್ತದೆ, ಹಾಗಾಗಿಯೇ ಇದಕ್ಕೆ ಆಮದು ತೆರಿಗೆ ಮತ್ತು ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅವಧಿ ಮುಗಿದ ನಂತರ ವಾಪಸ್ ಕಳುಹಿಸಬೇಕು. ಈ ಕಾರ್‌ನೆಟ್ ಭಾರತದಲ್ಲಿ ಅನೇಕ ವರ್ಷಗಳಿಂದ ಬಳಕೆಯಲ್ಲಿದೆ. ಆದರೆ ಹಲವರಿಗೆ ಇದರ ಬಗ್ಗೆ ತಿಳಿದೇ ಇಲ್ಲ. ಅಂಥವರಲ್ಲಿ ಪಿ.ಆರ್ ಸುಂದರ್ ಕೂಡ ಒಬ್ಬರು.

school-teacher-pr-sundar-become-rolls-royce-owner

ಕೆಲ ಭಾರತೀಯ ಉದ್ಯಮಿಗಳು ತಮ್ಮ ವಿದೇಶಿ ಕಾರುಗಳನ್ನು ಕಾರ್‌ನೆಟ್ ಮೂಲಕ ಭಾರತಕ್ಕೆ ತರುವ ಬಗ್ಗೆ ಅರಿತಿಕೊಂಡ ಪಿ.ಆರ್ ಸುಂದರ್, ಕೆಲವರ ಸಲಹೆಯ ಮೇರೆಗೆ ಏಜೆಂಟರನ್ನು ಸಂಪರ್ಕಿಸಿ ತಮ್ಮ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಭಾರತಕ್ಕೆ ತರಿಸಿಕೊಂಡು ಸದ್ಯ ತಮ್ಮ ಮೂಲ ಸ್ಥಳವಾದ ಚೆನ್ನೈನಲ್ಲಿ ಓಡಿಸುತ್ತಿದ್ದಾರೆ.

ವೀಡಿಯೊದಲ್ಲಿ ಕಂಡುಬರುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಬೆಲೆ ಸುಮಾರು 14 ಕೋಟಿ ರೂ. ಆದರೇ, ಅದೇ ಕಾರಿನ ಬೆಲೆ ದುಬೈನಲ್ಲಿ ಅವರಿಗೆ ಸುಮಾರು 6-7 ಕೋಟಿ ರೂ.ಗೆ ಸಿಕ್ಕಿದೆ. ದುಬೈನಲ್ಲಿ ಕಾರು ಖರೀದಿಸಿ ಚೆನ್ನೈನಲ್ಲಿ ರೋಲ್ಸ್ ರಾಯ್ಸ್ ಓಡಿಸುವ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಎಲ್ಲಾ ಶುಲ್ಕಗಳು ಸೇರಿದಂತೆ ಕಾರನ್ನು ಭಾರತಕ್ಕೆ ರವಾನಿಸಲು ಸುಮಾರು 7-8 ಲಕ್ಷ ರೂ. ಮಾತ್ರ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಈ ಪಿ.ಆರ್.ಸುಂದರ್ ಅವರು ತಮಿಳು ಸ್ಟಾರ್ ನಟ ವಿಜಯ್ ಅವರ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಂದರ್ ಅವರು ಈ ಹಿಂದೆ ಟಾಟಾ ಸುಮೋ, ಇಂಡಿಕಾ, ಇಂಡಿಗೊ ಮತ್ತು ಚೆವ್ರೊಲೆಟ್ ಆಪ್ಟ್ರಾದಂತಹ ಕಾರುಗಳನ್ನು ಹೊಂದಿದ್ದರು. ಹಾಗೆಯೇ ದುಬಾರಿ ಮರ್ಸಿಡಿಸ್ ಬೆಂಝ್ ಸಹ ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 20, 2024, 9:30 [IST]
English summary
School teacher pr sundar become rolls royce owner
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+