ಶಾರೂಕ್ ಖಾನ್‌ಗೆ ಕೆಟಿಎಂ 200 ಡ್ಯೂಕ್ ಬೈಕ್ ಉಡುಗೊರೆ
ಬಾಲಿವುಡ್‌ನ ಬಾಕ್ಸ್ ಆಫೀಸ್ ಹಿಟ್ ಚಲನಚಿತ್ರ ಚೆನ್ನೈ ಎಕ್ಸ್‌ಪ್ರೆಸ್ ಯಶಸ್ಸಿನ ಗುಂಗಿನಲ್ಲಿರುವ ಶಾರೂಕ್ ಖಾನ್, ತಮ್ಮ ಸಂತೋಷವನ್ನು ಇಮ್ಮಡಿಗೊಳಿಸಲು ಹೊಸ ಪ್ರೀತಿಯ ಆಗಮನವಾಗಿದೆ.
ಹೌದು, ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಅವರಿಗೆ ಕೆಟಿಎಂ 200 ಡ್ಯೂಕ್ ಬೈಕ್ ಉಡುಗೊರೆಯಾಗಿ ಲಭಿಸಿದೆ. ಇದು ಇದು ಕಿಂಗ್ ಖಾನ್ ಪಡೆಯುತ್ತಿರುವ ಮೊದಲ ಬೈಕ್ ಕೂಡಾ ಹೌದು.
ಇದೇ ಸಂದರ್ಭದಲ್ಲಿ ಐವರು ಕೆಟಿಎಂ 390 ಡ್ಯೂಕ್ ಹೆಮ್ಮೆಯ ಮಾಲಿಕರಿಗೆ ಬೈಕನ್ನು ಹಸ್ತಾಂತರಿಸಿದ್ದಾರೆ. ಆ ಬಳಿಕ ತಮ್ಮ ನೂತನ ಕೆಟಿಎಂ 200 ಬೈಕ್‌ನಲ್ಲಿ ಫೋಸ್ ನೀಡಿದ ಶಾರೂಕ್ ಖಾನ್ ತಮ್ಮ ಅನುಭವ ಹಂಚಿಕೊಂಡರು.

ಬಜಾಜ್ ಆಟೋ ಮುಖಾಂತರ ಭಾರತದಲ್ಲಿ ಈಗಗಾಲೇ ಭರ್ಜರಿ ಯಶಸ್ಸನ್ನು ಕಂಡಿರುವ ಕೆಟಿಎಂ ಇಂಡಿಯಾ, 375ಸಿಸಿ ಹಾಗೂ 200 ಸಿಸಿ ಬೈಕ್‌ಗಳನ್ನು ಮಾರಾಟ ಮಾಡುತ್ತಿವೆ.

ಶಾರೂಕ್ ಪ್ರೀತಿ
ಆಸ್ಟ್ರೀಯಾ ಬೈಕ್ ಬ್ರಾಂಡ್ ಆಗಿರುವ ಕೆಟಿಎಂ ಉತ್ತಮ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಇದು ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಪ್ರೀತಿ ಪಾತ್ರವಾಗಿದೆ.

ಪ್ರಚಾರ
ಈ ಹಿಂದೆ ಹ್ಯುಂಡೈ ಕಾರುಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಾರೂಕ್ ಇದೇ ಮೊದಲ ಬಾರಿಗೆ ಬೈಕ್ ಬ್ರಾಂಡ್‌ವೊಂದರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಯಭಾರಿ
ಅಂದ ಹಾಗೆ ಮುಂದಿನ ದಿನಗಳಲ್ಲಿ ಶಾರೂಕ್ ಕೆಟಿಎಂ ಅಧಿಕೃತ ಪ್ರಚಾರ ರಾಯಭಾರಿ ಎನಿಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ಶಾರೂಕ್ ಕೆಟಿಎಂ ಹವಾ
ಅದೇ ಹೊತ್ತಿಗೆ ಬಜಾಜ್ ಆಟೋದ ಜನಪ್ರಿಯ ಪಲ್ಸರ್ ಆವೃತ್ತಿಯನ್ನು ಶಾರೂಕ್ ಪ್ರೋತ್ಸಾಹಿಸಲಿದ್ದಾರೆಯೇ ಎಂಬುದು ಕುತೂಹಲವೆನಿಸಿದೆ.

ಶಾರೂಕ್ ಮಸ್ತಿ
ಅಧಿಕೃತ ರಾಯಭಾರಿ ಆಗಿಲ್ಲದರ ಹೊರತಾಗಿಯೂ ಕೆಟಿಎಂ ಬೈಕ್ ಮೇಲಿನ ಪ್ರೀತಿಯೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನನ್ನು ಪ್ರೇರೇಪಿಸಿದೆ ಎಂದು ಶಾರೂಕ್ ತಿಳಿಸಿದ್ದಾರೆ.

ಕೆಟಿಎಂ ಉಡುಗೊರೆ
ಇದೇ ವೇಳೆಯಲ್ಲಿ ಕೆಟಿಎಂನಿಂದ ಶಾರೂಕ್ ಅವರಿಗೆ ಡ್ಯೂಕ್ 200 ಬೈಕನ್ನು ಉಡುಗೊರೆಯಾಗಿ ನೀಡಲಾಯಿತು.

ಬೈಕ್ ಹಸ್ತಾಂತರ
ಕೆಟಿಎಂ ಡ್ಯೂಕ್ ಐವರು ಹೆಮ್ಮೆಯ ಮಾಲಿಕರಿಗೆ ಬೈಕ್ ಹಸ್ತಾಂತರಿಸುತ್ತಿರುವ ಶಾರೂಕ್ ಖಾನ್


Click it and Unblock the Notifications








