Just In
- 28 min ago
ಇದೇ ತಿಂಗಳ 13ರಂದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಪುನಾರಂಭಿಸಲಿದೆ ಬಜಾಜ್
- 58 min ago
ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ
- 2 hrs ago
ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾದ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ
- 3 hrs ago
ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್ಲೈನ್ ಕಾರು
Don't Miss!
- News
ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ ರದ್ದು
- Movies
ಏಪ್ರಿಲ್ 15ಕ್ಕೆ 'ವಿಕ್ರಾಂತ್ ರೋಣ' ಚಿತ್ರತಂಡದಿಂದ ಸರ್ಪ್ರೈಸ್ ಪ್ರಕಟಣೆ
- Sports
RCB vs MI: ವಿರಾಟ್ ಕೊಹ್ಲಿಗೆ ಕುಟುಕಿದ ರೋಹಿತ್ ಶರ್ಮಾ!
- Finance
ಅಲಿಬಾಬಾ ಕಂಪನಿಗೆ ಶಾಕ್ ನೀಡಿದ ಚೀನಾ ಸರ್ಕಾರ: 20,000 ಕೋಟಿ ರೂಪಾಯಿ ದಂಡ
- Education
KSET 2021 Postponed: ನಾಳೆ ನಡೆಯಬೇಕಿದ್ದ ಕೆಸೆಟ್ ಪರೀಕ್ಷೆ ಮುಂದೂಡಿಕೆ
- Lifestyle
ಬೇಸಿಗೆಯಲ್ಲಿ ಕೂದಲು ಉದುರಲು ಕಾರಣಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಸರಳ ವಿಧಾನಗಳಿವು
ಬೇಸಿಗೆಯ ಬಿಸಿಲು ವಿಪರೀತವಾಗಿದ್ದು, ತಾಪಮಾನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳ ಕಾಲ ತಮ್ಮ ಕಾರುಗಳನ್ನು ತೆರೆದ ಜಾಗದಲ್ಲಿ ಅಥವಾ ಸೂರ್ಯನ ಬಿಸಿಲಿನಲ್ಲಿ ನಿಲ್ಲಿಸುವ ಕಾರು ಚಾಲಕರು ಬಿಸಿಲ ಬೇಗೆಯನ್ನು ಅನುಭವಿಸಬೇಕಾಗುತ್ತದೆ.

ಸೂರ್ಯನ ಬಿಸಿಲಿನಲ್ಲಿ ಕಾರುಗಳನ್ನು ನಿಲ್ಲಿಸುವುದರಿಂದ ಕಾರು ತುಂಬಾ ಬಿಸಿಯಾಗುತ್ತದೆ. ಬೇಸಿಗೆಯಲ್ಲಿ ಕಾರನ್ನು ತಂಪಾಗಿಟ್ಟು ಕೊಳ್ಳುವುದಕ್ಕೆ ಹಲವಾರು ವಿಧಾನಗಳಿವೆ. ಇವುಗಳಲ್ಲಿ 5 ಪ್ರಮುಖ ವಿಧಾನಗಳನ್ನು ಈ ಲೇಖನದಲ್ಲಿ ನೋಡೋಣ.

1. ರೇರ್ ಎಸಿ ವೆಂಟ್ಸ್
ಈಗ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ರೇರ್ ಎಸಿ ವೆಂಟ್'ಗಳನ್ನು ಅಳವಡಿಸಲಾಗುತ್ತದೆ. ಆದರೂ ಈ ಫೀಚರ್ ಅನ್ನು ಕೆಲವೇ ಕೆಲವು ಕಾರುಗಳಲ್ಲಿಮಾತ್ರ ನೀಡಲಾಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರೇರ್ ಎಸಿ ವೆಂಟ್'ಗಳು ಹಿಂದಿನ ಸೀಟ್ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ. ಕೆಲವು ಕಾರುಗಳು ಮೂರನೇ ಸಾಲಿನಲ್ಲಿ ಎಸಿ ವೆಂಟ್'ಗಳನ್ನು ಹೊಂದಿರುವುದಿಲ್ಲ. ಇದರಿಂದ ಈ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಕಿರಿ ಕಿರಿಯಾಗುವುದು ಸಹಜ.

ಕಾರಿನಲ್ಲಿರುವ ಈ ಹೊಸ್ ಪೈಪ್'ಗಳನ್ನು ಮುಂಭಾಗದಲ್ಲಿರುವ ಎಸಿ ವೆಂಟ್'ಗಳಿಗೆ ಕನೆಕ್ಟ್ ಮಾಡುವ ಮೂಲಕ ಹಿಂಭಾಗದ ಪ್ರಯಾಣಿಕರು ನೇರವಾಗಿ ತಂಪಾದ ಗಾಳಿಯನ್ನು ಪಡೆಯಬಹುದು. ಚಳಿಯಾದಾಗ ಅದನ್ನು ಬಿಚ್ಚಿಡಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

2. ಸೋಲಾರ್ ಪವರ್ ಎಕ್ಸಾಸ್ಟ್
ಬಿಸಿಲಿನಲ್ಲಿ ಸಿಲ್ಲಿಸಿರುವ ಕಾರಿನೊಳಗೆ ಹಸಿರುಮನೆ ಪರಿಣಾಮ (ಗ್ರೀನ್ ಹೌಸ್ ಎಫೆಕ್ಟ್) ಉಂಟಾಗುತ್ತದೆ. ಸೂರ್ಯನ ಬಿಸಿಲು ಕಾರಿನ ಕ್ಯಾಬಿನ್‌ನೊಳಗೆ ಪ್ರವೇಶಿಸುತ್ತದೆ. ಆದರೆ ಅದರಿಂದ ಹೊರಬರುವುದಿಲ್ಲ. ಇದರಿಂದ ಕ್ಯಾಬಿನ್‌ನೊಳಗಿನ ತಾಪಮಾನವು ಹೆಚ್ಚಾಗುತ್ತದೆ.

ತಾಪಮಾನವನ್ನು ಕಡಿಮೆ ಮಾಡಲು ಕೆಲವರು ವಿಂಡೋಗಳನ್ನು ಚಿಕ್ಕದಾಗಿ ತೆರೆಯುತ್ತಾರೆ. ಆದರೆ ಇದರಿಂದ ಅಷ್ಟೊಂದು ಪ್ರಯೋಜನವಾಗುವುದಿಲ್ಲ. ಕಾರನ್ನು ಪಾರ್ಕಿಂಗ್ ಮಾಡಿರುವಾಗ ಕ್ಯಾಬಿನ್ ಅನ್ನು ತಂಪಾಗಿಡುವ ಉತ್ತಮ ಮಾರ್ಗವೆಂದರೆ ಗಾಳಿಯ ಹರಿವನ್ನು ಸ್ಥಿರವಾಗಿರಿಸುವುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದಕ್ಕಾಗಿ ಸೋಲಾರ್'ನಿಂದ ಚಾಲನೆಯಾಗುವ ಎಕ್ಸಾಸ್ಟ್ ಫ್ಯಾನ್ ಅನ್ನು ಕಿಟಕಿಯ ಮೇಲೆ ಇಡಬೇಕು. ಇದು ಕ್ಯಾಬಿನ್'ನೊಳಗಿರುವ ಬಿಸಿ ಗಾಳಿಯನ್ನು ಹೊರಗಿಡಲುನೆರವಾಗುತ್ತದೆ.

3. ವಿಂಡೋ ಬ್ಲೈಂಡರ್
ಭಾರತದಲ್ಲಿ ಕಾರುಗಳಲ್ಲಿ ಸನ್ ಫಿಲ್ಮ್'ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕ್ಯಾಬಿನ್ ಅನ್ನು ತಂಪಾಗಿಡಲು ಹಾಗೂ ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್ ಬ್ಲೈಂಡರ್'ಗಳನ್ನು ಬಳಸಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಬ್ಲೈಂಡರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ಕಾರುಗಳ ವಿಂಡೋಗಳ ಮೇಲೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ.

4. ತಂಪಾದ ಸೀಟುಗಳು
ಈಗ ಬಹುತೇಕ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ತಂಪಾದ ಸೀಟುಗಳ ಫೀಚರ್'ಗಳನ್ನು ನೀಡುತ್ತಿವೆ. ಹ್ಯುಂಡೈ ಕಂಪನಿಯ ವೆನ್ಯೂ ಕಾರಿನಲ್ಲಿ ಈ ಫೀಚರ್ ನೀಡಲಾಗಿದೆ. ಆದರೆ ಈ ಫೀಚರ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಫೀಚರ್ ಕಾರುಗಳಲ್ಲಿ ಲಭ್ಯವಿಲ್ಲದಿದ್ದರೇ ಆಫ್ಟರ್ ಮಾರ್ಕೆಟ್ ಆಕ್ಸೆಸರಿಸ್'ಗಳನ್ನು ಖರೀದಿಸಿ ಅಳವಡಿಸಿಕೊಳ್ಳಬಹುದು. ಈ ಆಕ್ಸೆಸರಿಸ್'ಗಳು 12 ವೋಲ್ಟ್ ಸಾಕೆಟ್‌ಗೆ ಪ್ಲಗ್'ಗೆ ಹೊಂದಿಕೊಳ್ಳುತ್ತವೆ.

ಈ ಆಕ್ಸೆಸರಿಸ್'ಗಳು ಸೀಟುಗಳ ತಾಪಮಾನವನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಲು ನೆರವಾಗುತ್ತವೆ. ಇವುಗಳು ಪ್ಲಗ್ ಇನ್ ಪ್ಲೇ ಡಿವೈಸ್'ಗಳಾಗಿವೆ. ಇವುಗಳು ಬೇಸಿಗೆಯಲ್ಲಿ ಬೇಗೆಯಲ್ಲಿ ಸಾಕಷ್ಟು ಉಪಯುಕ್ತವಾಗಿವೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

5. ರೋಲರ್ ವಿಂಡ್ ಷೀಲ್ಡ್
ಬ್ಲೈಂಡರ್ ಅನ್ನು ಅಳವಡಿಸುವ ಮೂಲಕ ಕಾರಿನ ವಿಂಡೋಗಳನ್ನು ಮುಚ್ಚಬಹುದು. ಆದರೆ ವಿಂಡ್‌ಶೀಲ್ಡ್'ನಂತಹ ದೊಡ್ಡ ಗ್ಲಾಸ್'ಗಳಿರುವ ಪ್ರದೇಶಗಳು ಹಾಗೆಯೇ ಉಳಿದು ಬಿಡುತ್ತವೆ. ಇವುಗಳನ್ನು ಹಾಗೆಯೇ ಬಿಡುವುದು ಸರಿಯಲ್ಲ.

ಇದರಿಂದ ಕಾರಿನಲ್ಲಿ ಗ್ರೀನ್ ಹೌಸ್ ಎಫೆಕ್ಟ್ ಉಂಟಾಗುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಕಾರಿನಲ್ಲಿ ರೋಲರ್ ವಿಂಡ್ ಷೀಲ್ಡ್'ಗಳನ್ನು ಬಳಸಬಹುದು.