ಹೋಂಡಾ ಸಂಸ್ಥೆಗೆ ಸಂಬಂಧಿಸಿದ 15 ಆಸಕ್ತಿದಾಯಕ ವಿಚಾರಗಳು
ಪ್ರತಿಯೊಂದು ವಾಹನ ತಯಾರಕ ಸಂಸ್ಥೆಗಳು ತನ್ನದೇ ಆದ ಮೂಲ ಸ್ವರೂಪವನ್ನು ಹೊಂದಿರುತ್ತದೆ. 1959ನೇ ಇಸವಿಯಿಂದ ಜಗತ್ತಿನ ಅತಿದೊಡ್ಡ ಮೋಟಾರು ಸೈಕಲ್ ತಯಾರಿಕ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೋಂಡಾ ಮೋಟಾರು ಕಂಪನಿ ಲಿಮಿಟೆಡ್ ಆಂತರಿಕ ದಹನಕಾರಿ ಎಂಜಿನ್ (internal combustion engines) ಉತ್ಪಾದನೆಯಲ್ಲೂ ವಿಶ್ವಕ್ಕೆ ಪ್ರಥಮವಾಗಿದೆ.
ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?
ಹೀಗೆ ಜಾಗತಿಕ ವಾಹನೋದ್ಯಮದಲ್ಲಿ ತನ್ನದೇ ಸಾನಿಧ್ಯ ಖಚಿತಪಡಿಸಿರುವ ಹೋಂಡಾ, 2001ನೇ ಸಾಲಿನಲ್ಲಿ ಜಪಾನ್‌ನ ಎರಡನೇ ಅತಿದೊಡ್ಡ ಹಾಗೂ 2011ರಲ್ಲಿ ವಿಶ್ವದ ಎಂಟನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯೆಂಬ ಗೌರವಕ್ಕೆ ಪಾತ್ರವಾಗಿತ್ತು. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಹೋಂಡಾ ಬಗ್ಗೆ ಹಲವಾರು ಆಸಕ್ತಿದಾಯಕ ವಿಚಾರಗಳು ಬೆಳಕಿಗೆ ಬರುತ್ತದೆ.

ಎರಡನೇ ಮಹಾಯುದ್ಧ ಬಳಿಕ 1946ರಲ್ಲಿ ಹೋಂಡಾ ಸಂಸ್ಥೆಯನ್ನು ಸೊಚಿರೋ ಹೋಂಡಾ (Soichiro Honda) ಹಾಗೂ ತಕಿಯೊ ಫ್ಯೂಜಿಸವ (Takeo Fujisawa) ಎಂಬವರು ಸ್ಥಾಪಿಸಿದ್ದರು. ಇದರ ಪ್ರಧಾನ ಕಚೇರಿ ಟೊಕಿಯೋದಲ್ಲಿದೆ.

ಕಾರು, ಬೈಕ್ ಉತ್ಪಾದನೆಗೂ ಮುನ್ನ, ಯಾಂತ್ರಿಕೃತ ಸೈಕಲ್‌ಗಳ ತಯಾರಿಕೆಯನ್ನು ಆರಂಭಿಸಿತ್ತು. ಎರಡನೇ ಮಹಾಯುದ್ಧದ ಬಳಿಕ ಸ್ಥಾಪಕ ಸೊಚಿರೊ ಹೋಂಡಾ ಹಾಗೂ 12 ಮಂದಿಯ ತಂಡ, ಬೈಕ್‌ಗಳಿಗೂ ಎಂಜಿನ್ ಪ್ರಯೋಗ ಮಾಡಿತ್ತು. 1964ರ ವೇಳೆಯಲ್ಲಿ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಲ್ಲಿ ಗುರುತಿಸಿಕೊಂಡಿತು.

ನಿಮಗಿದು ತಿಳಿದಿದೆಯೇ ಗೊತ್ತಿಲ್ಲ, 1986ರಲ್ಲಿ ಅಕ್ಯೂರಾ ಪರಿಚಯಿಸಿದ್ದ ಹೋಂಡಾ, ಜಪಾನ್‌ನಲ್ಲಿ ಮೊದಲ ಬಾರಿಗೆ ಐಷಾರಾಮಿ ಬ್ರಾಂಡ್‌ಗೆಂದೇ ಮೀಸಲಾದ ಪ್ರತ್ಯೇಕ ಬ್ರಾಂಡ್ ನಿರ್ಮಿಸಿತ್ತು.

ಕೇವಲ ಕಾರು ಬೈಕ್ ಮಾತ್ರವಲ್ಲ. ಗಾರ್ಡನ್ ಉಪಕರಣ, ಜಲ ಇಂಜಿನ್, ಟಿಲ್ಲರ್, ಪಂಪ್, ವೈಯಕ್ತಿಕ ಜಲವಿಮಾನ, ಪವರ್ ಜನರೇಟರ್, ಎಟಿವಿ, ಏರ್‌ಕ್ರಾಫ್ಟ್, ಮೌಂಟೆನ್ ಬೈಕ್ ಹಾಗೂ ಸೋಲರ್ ಸೆಲ್‌ಗಳನ್ನು ಹೋಂಡಾ ಉತ್ಪಾದಿಸುತ್ತಿದೆ.

ವಿಶ್ವದ ಮೊತ್ತ ಮೊದಲ ಫೋರ್ ವೀಲ್ ಡ್ರೈವ್ ಕಾರೆಂಬ ಹೆಗ್ಗಳಿಕೆಯನ್ನು ಹೋಂಡಾ ಪ್ರೆಲ್ಯೂಡ್ (Prelude) ಪಡೆದಿದೆ.

ಇಸುಝುವಿನಿಂದ ನಿರ್ಮಾಣವಾದ ಪಾಸ್‌ಪೋರ್ಟ್, ಹೋಂಡಾದ ಮೊದಲ ಎಸ್‌ಯುವಿ ಆಗಿದೆ.

ನಿರ್ಮಾಣ ವಾಹನದಲ್ಲಿ ವಿ-ಟೆಕ್ (V-tech) ತಂತ್ರಗಾರಿಕೆ ಆಳವಡಿಸಿದ ಮೊದಲ ವಾಹನ ಸಂಸ್ಥೆ ಹೋಂಡಾ.

2003ನೇ ಇಸವಿಯಲ್ಲಿ ಪರಿಚಯವಾಗಿದ್ದ ಹೋಂಡಾ ಸಿವಿಕ್ ಹೈಬ್ರಿಡ್, ಮೊದಲ ಪ್ಲಗ್ ರಹಿತ ವಾಹನವಾಗಿದೆ.

ತೈಲ ಬಿಕ್ಕಟ್ಟು ತಲೆದೋರಿದ ಹಿನ್ನಲೆಯಲ್ಲಿ ಮೊದಲ ಸಿವಿಕ್ ಕಾರನ್ನು 1973ನೇ ಇಸವಿಯಲ್ಲಿ ಲಾಂಚ್ ಮಾಡಲಾಗಿತ್ತು. ಇದು ಹೆದ್ದಾರಿಗಳಲ್ಲಿ ಪ್ರತಿ ಗ್ಯಾಲನ್‌ಗೆ 40 ಮೈಲ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿತ್ತು. ಇದು ಜಗತ್ತಿನ ಅತ್ಯುತ್ತಮ ಇಂಧನ ದಕ್ಷತೆಯ ಕಾರುಗಳಲ್ಲಿ ಒಂದಾಗಿದೆ.

ಹೋಂಡಾ ಎಸ್600, ಸಂಸ್ಥೆಯಿಂದ ನಿರ್ಮಿತವಾದ ಮೊದಲ ಹೋಂಡಾ ಕಾರಾಗಿದ್ದು, ಫಾಸ್ಟ್‌ಬ್ಯಾಕ್ ಹಾಗೂ ಕನ್ವರ್ಟಿಬಲ್ ಮಾದರಿಗಳಲ್ಲಿ ಲಭ್ಯವಿದೆ.

ಹೋಂಡಾ, ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯೇ ಆಗಿರಬಹುದು. ಆದರೆ ಅತಿ ಹೆಚ್ಚು ಉತ್ಪಾದನೆಯನ್ನು ಅಮೆರಿಕದಲ್ಲಿ ಹೊಂದಿದೆ. ಅಮೆರಿಕದಲ್ಲಿ ಆರ್ ಆಂಡ್ ಡಿ ಸೆಂಟರ್ ಜತೆಗೆ ಅನೇಕ ಎಂಜಿನ್, ಟ್ರಾನ್ಸ್‌ಮಿಷನ್ ಹಾಗೂ ತಯಾರಿಕ ಘಟಕಗಳಿವೆ.

ಅಮೆರಿಕದಲ್ಲಿ ನಿರ್ಮಾಣವಾದ ಮೊದಲ ವಿದೇಶಿ ಕಾರೆಂದರೆ ಅದುವೇ ಹೋಂಡಾ ಅಕಾರ್ಡ್. ಹೋಂಡಾ ತನ್ನ ಅಕಾರ್ಡ್ ಉತ್ಪಾದನೆಯನ್ನು 1982ರಲ್ಲಿ ಆರಂಭಿಸಿತ್ತು.

ಜನರು ಹಾಗೂ ತಾವು ಚಲಿಸುವ ವಾಹನಗಳ ನಡುವೆ ಸಾಮರಸ್ಯ ರೂಪಿಸಲು ಹೋಂಡಾ ಅಕಾರ್ಡ್ ನಿರ್ಮಾಣವನ್ನು ಆರಂಭಿಸಿತ್ತು. ಇನ್ನೊಂದೆಡೆ ಸಿವಿಕ್ ಹೆಸರು ಬಿಡುವಿಲ್ಲದ ಜನಸಮೂಹದ ಹಾಗೂ ಇಡೀ ಸಮಾಜದ ಚಿತ್ರವನ್ನು ಪ್ರತಿಬಿಂಬಿಸುತ್ತದೆ.

ಹೋಂಡಾ ಪರಮೋಚ್ಛ ಗುರಿಯೆಂದರೆ ಜನರು ಪ್ರಾಯೋಗಿಕವಾಗಿ ಚಾಲನೆ ಮಾಡಲು ಶಕ್ತವಾಗುವ ವಿಶ್ವಾಸಾರ್ಹ ವಾಹನಗಳನ್ನು ನಿರ್ಮಿಸುವುದಾಗಿದೆ.

ಅಸಿಮೋ (ASIMO) ಹೋಂಡಾದ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ರೋಬೋಟಿಕ್ಸ್ ಕಾರ್ಯಕ್ರಮದ ಭಾಗವಾಗಿದೆ. 54 ಕೆ.ಜಿ ಭಾರ ಹಾಗೂ 130 ಸೆಂಟಿಮೀಟರ್‌ಗಳಷ್ಟು ಎತ್ತರವಿರುವ ಆಸಿಮೋ ರೊಬೊ, ಮಾನವ ಗಗನ ಯಾತ್ರಿಗಳನ್ನು ಪ್ರತಿಬಿಂಬಿಸುತ್ತದೆ.
ಹೋಂಡಾ ಮೊಬಿಲಿಯೊ ವೀಡಿಯೋ


Click it and Unblock the Notifications