ಬಾಲ್ಯ ಕಾಲ ಸಖಿ ವರಿಸಿದ ರೈನಾ ಮೊದಲ ಪ್ರೇಯಸಿ ಯಾರು?

By Nagaraja

ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಸುರೇಶ್ ರೈನಾ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧುರಿ ಅವರನ್ನು ವರಿಸಿದ್ದಾರೆ. ದೆಹಲಿಯ ಐಷಾರಾಮಿ ಹೋಟೆಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜನಪ್ರಿಯ ಕ್ರಿಕೆಟಿಗರು ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ರೈನಾ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಾಗಿರುವಾಗ ಮೊದಲ ಪ್ರೇಯಸಿ ಬಗ್ಗೆ ಚೊಕ್ಕದಾದ ಸ್ಟೋರಿ ಬಯಲು ಮಾಡಲು ನಾವು ಬಯಸುತ್ತಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಇದು ಎರಡು ವರ್ಷಗಳಷ್ಟು ಹಿಂದಿನ ಕಥೆ. ಅಂದು ಬೇಸಿಗೆಯ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸುರೇಶ್ ರೈನಾ ಅವರು ಚೈನೈ ಸೂಪರ್ ಕಿಂಗ್ಸ್ ಪರ ಆಡುವ ಸಮಯ. ಮುಂದಕ್ಕೆ ಓದಿ...

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಭಾರತೀಯ ಕ್ರಿಕೆಟ್ ತಂಡದ ಸ್ಟೈಲಿಷ್ ಕ್ರಿಕೆಟಿಗ ಹಾಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ರೈನಾ ಕೂಡಾ ಮೋಹದ ಪಾಶಕ್ಕೆ ಸಿಲುಕಿದ್ದರು. ಮುಂದಕ್ಕೆ ಓದಿ...

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಹೌದು, ರೈನಾ ಯಾವ ಹುಡುಗಿಯರ ಹಿಂದೆಯೂ ಬಿದ್ದಿರಲಿಲ್ಲ. ಬದಲಾಗಿ ಐಷಾರಾಮಿ ಕ್ರೀಡಾ ಕಾರೊಂದು ರೈನಾ ಕಣ್ಣನ್ನು ಕುಕ್ಕಿತ್ತು. ತಕ್ಷಣ ಈ ಮಾದಕ ಚೆಲುವೆಯನ್ನು ತನ್ನದಾಗಿಸುವ ಬಯಕೆ ಹೊಂದಿದ್ದರು.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಬಳಿಕ ಈ ಬಗ್ಗೆ ಹೇಳಿಕೆಯನ್ನು ಕೊಟ್ಟಿದ್ದ ರೈನಾ, 'ಯಸ್ ಐ ಆಮ್ ಇನ್ ಲವ್' ಎಂದಿದ್ದರು. ಇದು ಮಾಧ್ಯಮದವರಲ್ಲಿ ಹೆಚ್ಚಿನ ಗಾಸಿಪ್ ಹುಟ್ಟಿಸಿದರೂ ರೈನಾ ಮಾತ್ರ ತನ್ನ ಪ್ರೇಯಸಿಯಲ್ಲಿ ಮುಳುಗಿ ಹೋಗಿದ್ದರು.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಜಗತ್ತಿನ ಅತಿ ಸುಂದರ ಕಾರುಗಳಲ್ಲಿ ಒಂದಾಗಿರುವ ಪೋರ್ಷೆ ಬಾಕ್ಸ್ಟರ್ ಕನ್ವರ್ಟಿಬಲ್ ಹಾಗೂ ಕನ್ವರ್ಟಿಬಲ್ ಬಾಕ್ಸ್ಟರ್ ಎಸ್ ಮಾದರಿಗಳಲ್ಲಿ ದೊರಕುತ್ತದೆ. ಇವೆರಡು ಅನುಕ್ರಮವಾಗಿ 77 ಲಕ್ಷ ಹಾಗೂ 92 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ (ಎಕ್ಸ್ ಶೋ ರೂಂ ಬೆಲೆ). ಈ ಪೈಕಿ ರೈನಾ ಬಳಿ ಪೋರ್ಷೆ ಬಾಕ್ಸ್ಟರ್ ಎಸ್ ಕಾರಿದೆ.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಸ್ಪೋರ್ಟ್ಸ್ ಕಾರನ್ನು ತಮ್ಮದಾಗಿಸುವುದು ರೈನಾ ಹಂಬಲವಾಗಿತ್ತು. ವಿಶೇಷವೆಂದರೆ ರೈನಾ ಜನ್ಮದಿನದಂದೇ ಈ ಉಡುಗೊರೆಯನ್ನು ತಂದೆ ದೊರಕಿಸಿಕೊಟ್ಟಿದ್ದರು. ಇದು ರೈನಾ ಕುಟುಂಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಬರೋಬ್ಬರಿ 3426 ಸಿಸಿ ಪೆಟ್ರೋಲ್ ಎಂಜಿನ್ ನಿಂದ ಚಲಿಸುವ ಪೋರ್ಷೆ ಬಾಕ್ಸ್ಟರ್ ಎಸ್ ಕಾರು 360 ತಿರುಗುಬಲದಲ್ಲಿ ಗರಿಷ್ಠ 315 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಬಳಿಕ ಚೆನ್ನೈ ಕ್ರಿಕೆಟ್ ತಂಡದ ತಮ್ಮ ಸಹ ಆಟಗಾರರೊಂದಿಗೆ ಜಾಲಿ ರೈಡ್ ಹೊಡೆದಿದ್ದ ರೈನಾ ಅವರು ಸುರಕ್ಷಿತ ಚಾಲನೆಯ ಮಹತ್ವದ ಬಗ್ಗೆಯೂ ವಿವರಿಸಿದ್ದರು.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಅಂದ ಹಾಗೆ ಪೋರ್ಷೆ ಬಾಕ್ಸ್ಟರ್ ಕಾರಿನಲ್ಲಿ ಸುರಕ್ಷತೆಗೂ ಗರಿಷ್ಠ ಆದ್ಯತೆಯನ್ನು ಕೊಡಲಾಗಿದ್ದು, ಏರ್ ಬ್ಯಾಗ್, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್ಸ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಹಾಗೂ ಎಲೆಕ್ಟ್ರಿಕಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮುಂತಾದ ಸುರಕ್ಷಾ ವೈಶಿಷ್ಟ್ಯಗಳಿವೆ.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಭಾರತೀಯ ತಂಡದ ಪೈಕಿ ರೈನಾ ಅಂದರೆ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಚುರುಕಿನ ಕ್ಷೇತ್ರರಕ್ಷಣೆ ಹಾಗೂ ಸಹ ಆಟಗಾರರೊಂದಿಗಿನ ವರ್ತನೆಯು ರೈನಾ ಜನಪ್ರಿಯತೆಯನ್ನು ಇಮ್ಮಡಿಗೊಳಿಸಿದೆ.

ಸುರೇಶ್ ರೈನಾ ಅವರ ಐಷಾರಾಮಿ ಕಾರು - ಪೋರ್ಷೆ ಬಾಕ್ಸ್ಟರ್ ಎಸ್

ಈಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕ್ರಿಕೆಟಿಗ ಹಾಗೂ ಬಾಳ ಸಂಗಾತಿಯ ಬದುಕು ವರ್ಣಮಯವಾಗಿರಲಿ ಎಂದು ಶುಭ ಕೋರೋಣವೇ...

More from DriveSpark

Article Published On: Saturday, April 4, 2015, 12:04 [IST]
English summary
Suresh Raina and his luxurious Porsche Boxster S Car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+