15,000 ಅಡಿ ಎತ್ತರದಲ್ಲಿ ಸೇತುವೆಯಿಂದ ಬಿದ್ದ ಟಾಟಾ ಹ್ಯಾರಿಯರ್: ಪ್ರಯಾಣಿಕರು ಸೇಫ್

ಪರ್ವತಗಳಲ್ಲಿ ವಾಹನ ಚಲಾಯಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ, ಇಂತಹ ಅಪಾಯಕಾರಿ ಭೂಪ್ರದೇಶದಲ್ಲಿ ಬಹಳ ಜಾಗರೂಕರಾಗಿರಬೇಕು. ಖಾಲಿ ಮತ್ತು ಸುತ್ತುವರಿದ ಪರ್ವತ ರಸ್ತೆಗಳನ್ನು ನೋಡಿದಾಗ ಜನರು ಉತ್ಸುಕರಾಗುತ್ತಾರೆ, ಈ ಉತ್ಸಾಹವು ಹೆಚ್ಚಾಗಿ ಅಪಘಾತಗಳಿಗೆ ಕಾರಣವಾಗಬಹುದು. ನೀವು ಅನುಭವಿ ಚಾಲಕರಾಗಿದ್ದರೂ ಸಹ ಸುರಕ್ಷಿತ ವೇಗವನ್ನು ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಇಂತಹ ಪರಿಸ್ಥಿತಿ ನಿಮಗೂ ಎದುರಾಗಬಹುದು. ಇತ್ತೀಚೆಗೆ ಸಮುದ್ರ ಮಟ್ಟದಿಂದ 15,000 ಅಡಿ ಎತ್ತರದಲ್ಲಿರುವ ಸೇತುವೆಯಿಂದ ಹೊಳೆಗೆ ಬಿದ್ದ ಟಾಟಾ ಹ್ಯಾರಿಯರ್‌ನ ವೀಡಿಯೊ ವೈರಲ್ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಈ ವಿಡಿಯೋವನ್ನು ರಾಫ್ತಾರ್ 7811 ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದೆ. ಎಕ್ಸ್ಪ್ಲೋರ್ ದಿ ಅನ್ಸೀನ್ 2.0 ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ವ್ಲಾಗರ್, ತಮ್ಮ ಫಾರ್ಚೂನರ್ ಮತ್ತು ಟೊಯೊಟಾ ಹಿಲಕ್ಸ್‌ನಲ್ಲಿ ಇಂಡೋ-ಚೀನಾ ಗಡಿಯ ಪ್ರವಾಸದಲ್ಲಿದ್ದರು. ಅಪಾಯಕಾರಿ ಭೂಪ್ರದೇಶದ ಮೂಲಕ ಪರ್ವತ ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದರು.

Tata harrier fell

ರಸ್ತೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು, ಸಡಿಲವಾದ ಬಂಡೆಗಳು ಮತ್ತು ಕಲ್ಲುಗಳಿಂದ ತುಂಬಿದ್ದವು. ನೀವು ಜಾಗರೂಕರಾಗಿರದಿದ್ದರೆ, ವಾಹನದ ಎಳೆತ ಮತ್ತು ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯಿಂದ ಹೊರಹೋಗುವುದು ಖಚಿತ. ಇಲ್ಲಿ ನೀಡಿರುವ ಚಿತ್ರಗಳೇ ಇದಕ್ಕೆ ಸಾಕ್ಷಿ. ಟಾಟಾ ಹ್ಯಾರಿಯರ್ ಕೂಡ ಹೀಗೆಯೇ ಹಳ್ಳಕ್ಕೆ ಬಿದ್ದಿರಬಹದು.

ಚಿತ್ರಗಳಲ್ಲಿ ಕಾಣುತ್ತಿರುವ ಸೇತುವೆಯು ತಿರುವಿನ ನಂತರ ಸಿಗುತ್ತದೆ, ನೀವು ಜಾಗರೂಕರಾಗಿರದಿದ್ದರೆ ಸೇತುವೆಯನ್ನು ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಹ್ಯಾರಿಯರ್ ಚಾಲಕನ ಅಜಾಗರೂಕ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎಂದು ನಾವು ಭಾವಿಸಿದ್ದೇವೆ. ಎಸ್‌ಯುವಿ ಸೇತುವೆಯಿಂದ ಹೊಳೆಗೆ ಬಿದ್ದಿದೆ. ಈ ಅಪಘಾತ ಸಂಭವಿಸಿದಾಗ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಸದಸ್ಯರ ಕುಟುಂಬ ಎಸ್‌ಯುವಿಯಲ್ಲಿತ್ತು.

Tata harrier fell

ಎಲ್ಲರು ಯಾವುದೇ ಗಾಯಗಳಿಲ್ಲದೆ ಅಪಘಾತದಿಂದ ಪಾರಾಗಿದ್ದಾರೆ. ಅವರನ್ನು ಬಹುಶಃ ಅದೇ ಮಾರ್ಗದ ಮೂಲಕ ಹಾದುಹೋಗುತ್ತಿದ್ದ ಸ್ಥಳೀಯರು ಅಥವಾ ಇತರ ಪ್ರವಾಸಿಗರು ರಕ್ಷಿಸಿರಬಹುದು. ಚಾಲಕನಿಗೆ ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಎಸ್‌ಯುವಿ ಬಿದ್ದಿತು. ತಪ್ಪಿಸಿಕೊಳ್ಳಲು ಅವರು ಟೈಲ್ ಗೇಟ್ ತೆರೆಯಬೇಕಾಗಿತ್ತು. ಬಹುಶಃ ಸನ್ ರೂಫ್ ಅನ್ನು ಕೂಡ ಮುರಿಯಬೇಕಾಗಿತ್ತು.

ಪರ್ವತಗಳಲ್ಲಿ ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ. ಈ ಅಪಘಾತ ಸಂಭವಿಸಿದ ಸ್ಥಳವನ್ನು ನೀವು ನೋಡಿದರೆ, ಕಿಲೋಮೀಟರ್‌ಗಳವರೆಗೆ ಯಾವುದೇ ಊರಿಲ್ಲ. ಅಂತಹ ಸಂದರ್ಭಗಳಲ್ಲಿ ಸಹಾಯ ಪಡೆಯುವುದು ತುಂಬಾ ಕಷ್ಟವಾಗುತ್ತದೆ. ಸೇತುವೆಯ ಕೆಳಗೆ ಹರಿಯುವ ತೊರೆ ತುಂಬಾ ಆಳವಾಗಿಲ್ಲ ಎಂಬುದು ಅವರ ಅದೃಷ್ಟ.

Tata harrier fell

ಎಸ್‌ಯುವಿ ಚಾಲಕ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿರಬಹುದು ಅಥವಾ ಸೇತುವೆಯ ಅಂಚಿಗೆ ತುಂಬಾ ಹತ್ತಿರದಲ್ಲಿ ಚಾಲನೆ ಮಾಡುತ್ತಿದ್ದಾನೆ ಎಂಬುದನ್ನು ಆತ ಅರಿತುಕೊಂಡಿಲ್ಲ ಎಂದು ತೋರುತ್ತದೆ. ಸಣ್ಣ ಗೊಂದಲವು ಈ ಅಪಘಾತಕ್ಕೆ ಕಾರಣವಾಗಿರಬಹುದು. ನೀವು ಎಸ್‌ಯುವಿಯನ್ನು ನೋಡಿದರೆ, ಹೆಚ್ಚಾಗಿ ಹಾನಿಯಾಗಿಲ್ಲ. ಎಸ್‌ಯುವಿಯ ಬಾಗಿಲು, ಸನ್‌ರೂಫ್, ಮುಂಭಾಗದ ವಿಂಡ್‌ಶೀಲ್ಡ್ ಹಾನಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 1, 2024, 10:40 [IST]
English summary
Tata harrier fell in indo china border hill passengers safe
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+