ಜಗತ್ತಿನ 10 ವಾಹನ ನಿಬಿಡ ಜಂಕ್ಷನ್‌ಗಳು
ಬೆಂಗಳೂರಿನಲ್ಲಿ ವಾಸಿಸುವ ಜನ ಸಾಮಾನ್ಯರಿಗೆ ಸಾಕಾಪ್ಪ ಸಾಕು ಈ ಟ್ರಾಫಿಕ್ ಗೋಳು ಎಂಬಂತಾಗಿದೆ. ಆದರೆ ನಿಜಕ್ಕೂ ವಾಹನ ದಟ್ಟಣೆಯ ನಗರಗಳ ಮೇಲೆ ಕಣ್ಣಾಯಿಸಿದಾಗ ಜಗತ್ತಿನ ಹಲವು ನಗರಗಳನ್ನು ನಾವಿಲ್ಲಿ ಬೊಟ್ಟು ಮಾಡಿ ತೋರಿಸಬಹುದಾಗಿದೆ.
ಇಂದಿನ ಈ ಲೇಖನದಲ್ಲಿ ಜಗತ್ತಿನ 10 ವಾಹನ ನಿಬಿಡ ಜಂಕ್ಷನ್ ಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಲಾಗಿದೆ. ಪಟ್ಟಿಯ ಕೊನೆಯಲ್ಲೊಂದು ಅಚ್ಚರಿಯಿದ್ದು, ಯಾವ ನಗರವೆಂದು ನಿಮ್ಮಿಂದ ಊಹಿಸಲು ಸಾಧ್ಯವೇ? ತಪ್ಪದೇ ಓದಿ...

ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ಅಮೆರಿಕ
ಅಧ್ಯಯನ ವರದಿಗಳ ಪ್ರಕಾರ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಕಂಡುಬಂದಿರುವ ನಗರಗಳಲ್ಲಿ ಅಮೆರಿಕದ ಲಾಸ್ ಏಂಜಲೀಸ್ ಕಾಣಿಸಿಕೊಂಡಿದೆ. ಇಲ್ಲಿನ ಫ್ರೀವೇ ಇಂಟರ್ ಚೇಂಜ್ ರಸ್ತೆಯು ಪದೇ ಪದೇ ವಾಹನ ಸಂಚಾರಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನುಂಟುಮಾಡುತ್ತದೆ.

ಮ್ಯಾಜಿಕ್ ರೌಂಡ್ ಬೌಟ್, ಬ್ರಿಟನ್
ಐದು ರಸ್ತೆಗಳ ಸಂಧಿ ಸ್ಥಳ ಈ ಜಂಕ್ಷನ್ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅನೇಕ ದಿಕ್ಕುಗಳಿಗೆ ಹಾದಿ ತೋರಿಸುವುದರಿಂದಲೇ ಈ ವೃತ್ತಾಕಾರದ ರಸ್ತೆಯಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗುತ್ತಲೇ ಇದೆ.

ಟಾಮ್ ಮೋರ್ ಲ್ಯಾಂಡ್ ಇಂಟರ್ ಚೇಂಜ್, ಅಮೆರಿಕ
ಹೆಸರಲ್ಲೇ ಸೂಚಿಸಿರುವಂತೆಯೇ ಇದು ಅಮೆರಿಕದ ಮೋರ್ ಲ್ಯಾಂಡ್ ನಲ್ಲಿರುವ ರಸ್ತೆ ವಿಭಾಗೀಯ ಜಂಕ್ಷನ್ ಆಗಿದೆ. ಇಲ್ಲಿಂದಲೇ ಉತ್ತರ ಕೆಕಾಲ್ಬ್ ಕಂಟ್ರಿ, ಜಾರ್ಜಿಯಾ, ಉತ್ತರ ಪೂರ್ವ ಅಟ್ಲಾಂಟಾ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ದಿ ಪುಕ್ಸಿ ವಯಾಡಕ್ಟ್, ಶಾಂಘೈ
ಶಾಂಘೈನ ಅತ್ಯಂತ ವಾಹನ ನಿಬಿಡ ಪ್ರದೇಶ ಇದಾಗಿದ್ದು, ಪ್ರತಿ ತಾಸಿನಲ್ಲೂ ಸಾವಿರಾರು ವಾಹನಗಳು ಓಡಾಡುತ್ತಿರುತ್ತದೆ. ವಿಶೇಷವೆಂದರೆ ಇಲ್ಲಿ ಐದು ರಸ್ತೆ ಸೇತುವೆಗಳು ನಿರ್ಮಾಣವಾಗಿದೆ.

ಜಡ್ಜ್ ಹ್ಯಾರಿ ಪ್ರೆಗೆರ್ಸನ್ ಇಂಟರ್ ಚೇಂಜ್
ಲಾಸ್ ಏಂಜಲೀಸ್ ಸ್ಟಾಕ್ ಕಮ್ಯೂನಿಸ್ಟ್ ಹಾಗೂ ಅಥೆನ್ಸ್ ಸಮೀಪದ ಸ್ಟಾಂಕ್ ಇಂಟರ್ ಚೇಂಜ್ ಜಂಕ್ಷನ್ ಇದಾಗಿದೆ. 1993ನೇ ಇಸವಿಯಿಂದಲೇ ತೆರೆದುಕೊಂಡಿರುವ ಪ್ರಸ್ತುತ ಹೈವೇ ವ್ಯವಸ್ಥೆಯು ನಗರಕ್ಕೆ ಮೆರಗು ತುಂಬುತ್ತಿದೆ.

ಪುತ್ರಜಯ, ಮಲೇಷ್ಯಾ
ಮಲೇಷ್ಯಾ ಪ್ರಧಾನ ಮಂತ್ರಿ ಕಚೇರಿ ಬಳಿಯಲ್ಲಿಯೇ ಅತಿ ದೊಡ್ಡ ಟ್ರಾಫಿಕ್ ವ್ಯವಸ್ಥೆ ಪುತ್ರಜಯ ಸ್ಥಿತಗೊಂಡಿದೆ.

ಟಗನ್ ಸ್ಕಾಯಾ ಸ್ಕ್ವೇರ್, ಮೋಸ್ಕೋ
ಮೋಸ್ಕೋದ ದಕ್ಷಿಣ ಪೂರ್ವದ ಗಾರ್ಡನ್ ರಿಂಗ್ ನಲ್ಲಿ ಟಗನ್ ಸ್ಕಾಯಾ ಸ್ಕ್ವೇರ್ ಸ್ಥಿತಗೊಂಡಿದೆ. ಇಲ್ಲಿ ಮೊದಲ ಬಾರಿ ಸಂಚರಿಸುವ ಪ್ರಯಾಣಿಕರಿಗೆ ತಲೆನೋವು ಕಟ್ಟಿಟ್ಟ ಬುತ್ತಿ.

9 ಡೆ ಜ್ಯೂಲಿಯೊ ಅವೆನಿಡಾ, ಬ್ಯೂನಸ್ ಐರಿಸ್, ಅರ್ಜೆಂಟೀನಾ
ಜಗತ್ತಿನ ಅತ್ಯಂತ ಅಗಲವಾದ ಅವೆನ್ಯೂ ಇಲ್ಲಿ ಸ್ಥಿತಗೊಂಡಿದ್ದು, ಅರ್ಜೆಂಟೀನಾದ ಜನ್ಮದಿನದ (ಜುಲೈ 9, 1816) ನೆನಪವನ್ನು ಚಿರವಾಗಿಸಿದೆ. ಈ ವಿಶ್ವ ಪ್ರಸಿದ್ಧ ನಗರದಲ್ಲೂ ವಾಹನ ದಟ್ಟಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಗ್ರೆವೆಲ್ಲಿ ಹಿಲ್ ಇಂಟರ್ ಚೇಂಜ್, ಬರ್ಮಿಂಗ್ ಹ್ಯಾಮ್, ಬ್ರಿಟನ್
ಗ್ರೆವೆಲ್ಲಿ ಹಿಲ್ ಇಂಟರ್ ಚೇಂಜ್ ಜಂಕ್ಷನ್ ನಲ್ಲಿ, ಎಂ6 ಮೋಟಾರ್ ವೇ, ಬರ್ಮಿಂಗ್ ಹ್ಯಾಮ್ ನ ಆಸ್ಟನ್ ಎಕ್ಸ್ ಪ್ರೆಸ್ ವೇಯನ್ನು ಸಂಪರ್ಕಿಸುತ್ತದೆ. ಆದರೆ ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳಿಗಂತೂ ಯಾವುದೇ ಕೊರತೆಯಿಲ್ಲ.

ನಮ್ಮ ಬೆಂಗಳೂರು
'ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ' ವಿಶ್ವದ 10 ವಾಹನನಿಬಿಡ ನಗರಗಳಲ್ಲಿ ನಮ್ಮ ಬೆಂಗಳೂರನ್ನು ಸೇರ್ಪಡೆಗೊಳಿಸದಿದ್ದಲ್ಲಿ ಪಟ್ಟಿ ಪೂರ್ಣಗೊಳ್ಳುವುದಿಲ್ಲ. ಪ್ರಸ್ತುತ ಬೆಂಗಳೂರು ಟ್ರಾಫಿಕ್ ನಲ್ಲಿ ನೀವು ಎದುರಿಸುವ ತೊಂದರೆಗಳ ಬಗ್ಗೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಲು ಮರೆಯದಿರಿ.


Click it and Unblock the Notifications








