ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ವಿಚಾರಗಳನ್ನು ತಪ್ಪದೇ ಪಾಲಿಸಿ!

ಕಾರು ಖರೀದಿಸಲು ನಿರ್ಧರಿಸಿದಾಗ ಎರಡು ಮಾರ್ಗಗಳ ಮೂಲಕ ಕಾರು ಖರೀದಿಸಬಹುದು. ಅವುಗಳಲ್ಲಿ ಹೊಸ ಕಾರು ಖರೀದಿಸುವುದು ಮೊದಲ ಮಾರ್ಗವಾದರೆ ಬಳಸಿದ ಕಾರನ್ನು ಖರೀದಿಸುವುದು ಎರಡನೆಯ ಮಾರ್ಗ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಯಾವ ಮಾರ್ಗದಲ್ಲಿ ಕಾರು ಖರೀದಿಸಿದರೆ ಒಳ್ಳೆಯದು ಎಂಬುದು ಖರೀದಿಸುವವರ ಬಜೆಟ್ ಹಾಗೂ ಅವಶ್ಯಕತೆಯನ್ನು ಅವಲಂಬಿಸಿರುತ್ತದೆ. ಬಳಸಿದ ಕಾರನ್ನು ಖರೀದಿಸುವುದು ಸೂಕ್ತವೆಂದು ಬಯಸುವವರು, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಪಾಲಿಸಬೇಕಾದ ಸಂಗತಿಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

1. ಸರ್ವಿಸ್ ಮಾಡಿಸಿ

ಸಾಮಾನ್ಯವಾಗಿ ಜನರು ಬಳಸಿದ ಕಾರುಗಳನ್ನು ತರಾತುರಿಯಲ್ಲಿ ಖರೀದಿಸುತ್ತಾರೆ. ಕಾರು ಖರೀದಿಸಿದ ನಂತರ ಆ ಕಾರನ್ನು ವಿಶ್ವಾಸಾರ್ಹ ಮೆಕ್ಯಾನಿಕ್ ಬಳಿ ಕೊಂಡೊಯ್ದು ಅದರ ಎಂಜಿನ್ ಆಯಿಲ್ ಹಾಗೂ ಫಿಲ್ಟರ್ ಬದಲಿಸುವುದು ಒಳ್ಳೆಯದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

2. ಸ್ವಚ್ಛಗೊಳಿಸಿ

ಬಳಸಿದ ಕಾರಿನ ಮೇಲ್ಮೈ ಎಷ್ಟು ಚೆನ್ನಾಗಿ ಕಾಣಿಸಿದರೂ, ಅದನ್ನು ಒಳಗಿನಿಂದ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕಾರಿನ ಇಂಟಿರಿಯರ್ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ಸಾಧನಗಳು ದೊರೆಯುತ್ತವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಅವುಗಳು ಈ ಕೆಲಸಗಳನ್ನು ಸುಲಭಗೊಳಿಸುತ್ತವೆ. ಆದರೆ ಕಾರು ಖರೀದಿ ನಂತರ ಮೊದಲ ಬಾರಿಗೆ ವೃತ್ತಿಪರರಿಂದ ಸ್ವಚ್ಛಗೊಳಿಸುವುದು ಒಳ್ಳೆಯದು. ಕಾರು ಸ್ವಚ್ಛಗೊಳಿಸಲೆಂದೇ ಹಲವಾರು ಕಂಪನಿಗಳಿವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

3 ಎಂ, ಆಟೋ ಐ ಕೇರ್, ಪಿಟ್‌ಸ್ಟಾಪ್ ಹಾಗೂ ಗೋ ಮೆಕ್ಯಾನಿಕ್‌ನಂತಹ ಹಲವು ಕಂಪನಿಗಳು ಕಾರನ್ನು ಸ್ವಚ್ಛಗೊಳಿಸುವ ಹಾಗೂ ಸ್ಯಾನಿಟೈಜ್ ಮಾಡುವ ಪ್ಯಾಕೇಜ್‌ಗಳನ್ನು ನೀಡುತ್ತವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ನಿಮಗೆ ಸರಿ ಎನಿಸುವಂತಹ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಕಾರನ್ನು ಸ್ವಚ್ಛಗೊಳಿಸಿ. ಕೋವಿಡ್ 19 ಸಾಂಕ್ರಾಮಿಕದ ಈ ಅವಧಿಯಲ್ಲಿ ಸಂಪೂರ್ಣವಾಗಿ ಸ್ವಚ್ಛವಾದ ಕಾರನ್ನು ಹೊಂದಿರುವುದು ಅತ್ಯಗತ್ಯ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

3. ಮಾಲೀಕತ್ವ ವರ್ಗಾವಣೆ

ಮಹೀಂದ್ರಾ ಫಸ್ಟ್ ಚಾಯ್ಸ್ ಅಥವಾ ಮಾರುತಿ ಸುಜುಕಿ ಟ್ರೂ-ವ್ಯಾಲ್ಯೂನಂತಹ ಕಂಪನಿಗಳ ಮೂಲಕ ಬಳಸಿದ ಕಾರನ್ನು ಖರೀದಿಸಿದರೆ, ಆ ಕಂಪನಿಗಳೇ ಕಾರುಗಳಮಾಲೀಕತ್ವ ವರ್ಗಾವಣೆಯನ್ನು ನೋಡಿಕೊಳ್ಳುತ್ತವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಆದರೆ ಖಾಸಗಿ ಡೀಲರ್'ಗಳ ಮೂಲಕ ಅಥವಾ ಸ್ನೇಹಿತರಿಂದ ಅಥವಾ ಪರಿಚಯಸ್ಥರಿಂದ ಬಳಸಿದ ಕಾರುಗಳನ್ನು ಖರೀದಿಸಿದಾಗ ಮಾಲೀಕತ್ವದ ವರ್ಗಾವಣೆಯನ್ನು ನಿರ್ಲಕ್ಷಿಸಲಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಇದರಿಂದ ಭವಿಷ್ಯದಲ್ಲಿ ಇನ್ಶ್ಯೂರೆನ್ಸ್ ಕ್ಲೈಮ್ ಮಾಡುವಾಗ ಅಥವಾ ಕಾರನ್ನು ಮಾರಾಟ ಮಾಡಲು ಮುಂದಾದಾಗ ಕಾರಿನ ಮಾಲೀಕತ್ವವು ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಬಳಸಿದ ಕಾರನ್ನು ಖರೀದಿಸಿದ ತಕ್ಷಣವೇ ಕಾರು ಮಾರಾಟ ಮಾಡುತ್ತಿರುವವರಿಂದ ಆರ್‌ಸಿ ಬುಕ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ಸಂಬಂಧ ಪಟ್ಟ ಆರ್‌ಟಿ‌ಓದಲ್ಲಿ ಅರ್ಜಿ ಸಲ್ಲಿಸಿ ಕಾರಿನ ಮಾಲೀಕತ್ವವನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

4. ಕಾರು ವಿಮೆ ಪಡೆಯಿರಿ

ಆರ್‌ಸಿ ಬುಕ್'ನಂತೆಯೇ ವಿಮಾ ವರ್ಗಾವಣೆಯನ್ನು ಸಹ ಪಡೆಯಬಹುದು. ಹಿಂದಿನ ಮಾಲೀಕರು ವಾಹನ ವಿಮೆಯನ್ನು ನವೀಕರಿಸದಿದ್ದರೆ ಹಾಗೂ ಹೆಚ್ಚುವರಿ ಸಂಕಷ್ಟಗಳನ್ನು ತಪ್ಪಿಸಲು ಬಯಸಿದರೆ ಹೊಸ ಸೆಕೆಂಡ್ ಹ್ಯಾಂಡ್ ಕಾರು ವಿಮೆಯನ್ನು ಪಡೆಯಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

5. ನಿಯಮಿತವಾಗಿ ಸರ್ವೀಸ್ ಮಾಡಿಸಿ

ಹೊಸ ಕಾರು ಆಗಲಿ ಅಥವಾ ಬಳಸಿದ ಕಾರು ಆಗಲಿ, ಕಾರನ್ನು ಉತ್ತಮ ಸ್ಥಿತಿಯಲ್ಲಿಡುವುದು ಮುಖ್ಯ. ಈ ಕಾರಣಕ್ಕೆ ಕಾರುಗಳನ್ನು ಕಾಲ ಕಾಲಕ್ಕೆ ಸರ್ವೀಸ್ ಮಾಡಿಸಿ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಬಿಡಿಭಾಗಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಅವುಗಳನ್ನು ಸರಿಪಡಿಸಿ ಅಥವಾ ಬದಲಾಯಿಸುವುದನ್ನು ಮರೆಯಬೇಡಿ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಈ ಸಂಗತಿಗಳನ್ನು ತಪ್ಪದೇ ಪಾಲಿಸಿ

ಹಳೆಯ ಕಾರುಗಳ ಬೆಲೆ ಹೊಸ ಕಾರುಗಳಂತೆ ಬಹು ಬೇಗ ಕಡಿಮೆಯಾಗುವುದಿಲ್ಲ. ಬಳಸಿದ ಕಾರುಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯಬಹುದು.

Most Read Articles

Kannada
English summary
Things to follow after buying used cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X